Raichur: ಕೆಲಸದಿಂದ ವಜಾಗೊಂಡಿದ್ದ BMTC ಚಾಲಕ ಕಂ ನಿರ್ವಾಹಕ ಆತ್ಮಹತ್ಯೆಗೆ ಶರಣು

ಸಾರಿಗೆ ಮುಷ್ಕರದಲ್ಲಿ ಭಾಗಿಯಾಗಿ ಕೆಲಸದಿಂದ ವಜಾಗೊಂಡಿದ್ದ ಬಿಎಂಟಿಸಿ ಚಾಲಕ ಕಂ ನಿರ್ವಾಹಕ ಇಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.

First published:

  • 18

    Raichur: ಕೆಲಸದಿಂದ ವಜಾಗೊಂಡಿದ್ದ BMTC ಚಾಲಕ ಕಂ ನಿರ್ವಾಹಕ ಆತ್ಮಹತ್ಯೆಗೆ ಶರಣು

    ವಿನೋದ್ ಕುಮಾರ್ (42) ನೇಣಿಗೆ ಶರಣಾಗಿರುವ ವ್ಯಕ್ತಿ. ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ವೀರಾಪೂರ ಗ್ರಾಮದ ಮನೆಯಲ್ಲಿ ವಿನೋದ್ ಕುಮಾರ್ ನೇಣಿಗೆ ಶರಣಾಗಿದ್ದಾರೆ.

    MORE
    GALLERIES

  • 28

    Raichur: ಕೆಲಸದಿಂದ ವಜಾಗೊಂಡಿದ್ದ BMTC ಚಾಲಕ ಕಂ ನಿರ್ವಾಹಕ ಆತ್ಮಹತ್ಯೆಗೆ ಶರಣು

    ಕಳೆದ ವರ್ಷ ಕೆಲಸದಿಂದ ವಜಾಗೊಂಡಿದ್ದ ವಿನೋದ ಕುಮಾರ್ ಮಾನಸಿಕವಾಗಿ ಕುಗ್ಗಿದ್ದು, ಖಿನ್ನತೆಗೆ ಒಳಗಾಗಿದ್ದರು ಎಂದು ತಿಳಿದು ಬಂದಿದೆ.

    MORE
    GALLERIES

  • 38

    Raichur: ಕೆಲಸದಿಂದ ವಜಾಗೊಂಡಿದ್ದ BMTC ಚಾಲಕ ಕಂ ನಿರ್ವಾಹಕ ಆತ್ಮಹತ್ಯೆಗೆ ಶರಣು

    ಕಳೆದ ವರ್ಷ ನಡೆಸಿದ್ದ ಸಾರಿಗೆ ಇಲಾಖೆಯ ಮುಷ್ಕರದಲ್ಲಿ ಭಾಗಿಯಾಗಿದ್ರಿಂದ ವಿನೋದ್ ಕುಮಾರ್ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು.  (ಸಾಂದರ್ಭಿಕ ಚಿತ್ರ)

    MORE
    GALLERIES

  • 48

    Raichur: ಕೆಲಸದಿಂದ ವಜಾಗೊಂಡಿದ್ದ BMTC ಚಾಲಕ ಕಂ ನಿರ್ವಾಹಕ ಆತ್ಮಹತ್ಯೆಗೆ ಶರಣು

    ವಿನೋದ್ ಕುಮಾರ್ ಆತ್ಮಹತ್ಯೆ ಸಂಬಂಧ ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕಾಗಮಿಸಿರುವ ಪೊಲೀಸರು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ .

    MORE
    GALLERIES

  • 58

    Raichur: ಕೆಲಸದಿಂದ ವಜಾಗೊಂಡಿದ್ದ BMTC ಚಾಲಕ ಕಂ ನಿರ್ವಾಹಕ ಆತ್ಮಹತ್ಯೆಗೆ ಶರಣು

    ಮುಷ್ಕರದಲ್ಲಿ ಭಾಗಿಯಾಗಿ ವಜಾಗೊಂಡಿದ್ದ ನೌಕರರಿಗೆ ಮರುನೇಮಕಾತಿ ಪತ್ರ ನೀಡಲಾಗುವುದು ಎಂದು ಸಾರಿಗೆ ಶ್ರೀರಾಮುಲು ಹೇಳಿಕೆ ನೀಡಿದ್ದರು. ಮೊದಲ ಹಂತದಲ್ಲಿ ಕೇವಲ 100 ಜನರಿಗೆ ಮರು ನೇಮಕಾತಿ ಪತ್ರ ನೀಡಲಾಗಿತ್ತು.

    MORE
    GALLERIES

  • 68

    Raichur: ಕೆಲಸದಿಂದ ವಜಾಗೊಂಡಿದ್ದ BMTC ಚಾಲಕ ಕಂ ನಿರ್ವಾಹಕ ಆತ್ಮಹತ್ಯೆಗೆ ಶರಣು

    ಮರು ನೇಮಕ ಮಾಡಿಕೊಳ್ಳಲು ಕಾನೂನಿನಲ್ಲಿ ಅವಕಾಶ ಇಲ್ಲ. ನಿಮ್ಮ ಕುಟುಂಬವನ್ನು ನೋಡಿ ಮರು ನೇಮಕ ಮಾಡುತ್ತಿದ್ದೇವೆ. ನಿಮ್ಮ ಜೊತೆ ಮುಷ್ಕರ ಮಾಡಿದವರು ಈಗ ಓಡಿ ಹೋದರು. ಆದರೆ, ಇಂದು ನಿಮ್ಮ ಜೊತೆಗೆ ನಿಂತಿದ್ದು ನಮ್ಮ ಸರ್ಕಾರ. ಸರ್ಕಾರದ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಸಾರಿಗೆ ಖಾತೆ ಸಚಿವ ಬಿ.ಶ್ರೀರಾಮುಲು ಬುದ್ದಿವಾದ ಹೇಳಿದ್ದರು.

    MORE
    GALLERIES

  • 78

    Raichur: ಕೆಲಸದಿಂದ ವಜಾಗೊಂಡಿದ್ದ BMTC ಚಾಲಕ ಕಂ ನಿರ್ವಾಹಕ ಆತ್ಮಹತ್ಯೆಗೆ ಶರಣು

    ಮುಷ್ಕರ ಆಗಬಾರದಿತ್ತು. ಮುಷ್ಕರ ಮಾಡೋರು ಅರ್ಥ ಮಾಡಿಕೊಂಡು ಮಾಡಬೇಕು. ಏನೇ ಬೇಡಿಕೆ ಇದ್ದರು ಸಚಿವರು, ಯುನಿಯನ್ ಲೀಡರ್ ಜೊತೆ ಮಾತಾಡಿ ಸಮಸ್ಯೆ ಪರಿಹಾರ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿಕೊಂಡಿದ್ದರು.

    MORE
    GALLERIES

  • 88

    Raichur: ಕೆಲಸದಿಂದ ವಜಾಗೊಂಡಿದ್ದ BMTC ಚಾಲಕ ಕಂ ನಿರ್ವಾಹಕ ಆತ್ಮಹತ್ಯೆಗೆ ಶರಣು

    ಸಚಿವರು ಫೆಬ್ರವರಿಯಲ್ಲಿಯೇ ಮರು ನೇಮಕಾತಿ ಮಾಡಿಕೊಳ್ಳುವ ಕುರಿತು ಹೇಳಿಕೆ ನೀಡಿದ್ದರು. ಸುಮಾರು 1,600ಕ್ಕೂ ಹೆಚ್ಚು ಜನರು ಮುಷ್ಕರದಲ್ಲಿ ಭಾಗಿಯಾಗಿ ಕೆಲಸ ಕಳೆದುಕೊಂಡಿದ್ದರು. ಆದರೆ ಇದುವರೆಗೂ ವಜಾಗೊಂಡಿದ್ದ ಎಲ್ಲ ಸಿಬ್ಬಂದಿಗೆ ಮರು ನೇಮಕಾತಿ ಪತ್ರ ದೊರೆತಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

    MORE
    GALLERIES