ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸುವ ಜನರ ಅನುಕೂಲಕ್ಕಾಗಿ ಈ BMRCL ಮಾಸ್ಟರ್ ಪ್ಲಾನ್ ಮಾಡಿಕೊಂಡಿದೆ. ಚುನಾವಣೆ ಸಂದರ್ಭದದಲ್ಲಿ ಈ ಯೋಜನೆ ರಾಜಕೀಯ ಪಕ್ಷಗಳಿಗೆ ಅಡ್ವಾಂಟೇಜ್ ಆಗಲಿದೆ.
2/ 7
ಬಿಎಂಆರ್ಸಿಎಲ್ ರಿಯಾಯಿತಿ ದರದಲ್ಲಿ ಗುಂಪು ಟಿಕೆಟ್ಗಳನ್ನು ನೀಡಲು ಮುಂದಾಗಿದೆ. ಈ ಟಿಕೆಟ್ಗಳನ್ನು ಜನರು ಮದುವೆಗಳು, ಹುಟ್ಟುಹಬ್ಬದ ಪಾರ್ಟಿಗಳು ಅಥವಾ ರಾಜಕೀಯ ಪಕ್ಷಗಳು ಸಮಾವೇಶಕ್ಕೆ ಬರೋ ಕಾರ್ಯಕರ್ತರಿಗೆ ವಿತರಿಸಬಹುದು.
3/ 7
ಕಾರ್ಯಕ್ರಮದ ಆಯೋಜಕರು ಬಲ್ಕ್ ಟಿಕೆಟ್ ಖರೀದಿಸಿ ಅದನ್ನು ಭಾಗವಹಿಸುವವರಿಗೆ ವಿತರಿಸಿಬಹುದು. ವಿವಿಧ ಮೆಟ್ರೋ ನಿಲ್ದಾಣಗಳಿಂದ ನಿರ್ದಿಷ್ಟ ನಿಲ್ದಾಣಕ್ಕೆ ಈ ಟಿಕೆಟ್ನಲ್ಲಿ ಪ್ರಯಾಣಿಸಬಹುದು.
4/ 7
ಕೌಟುಂಬಿಕ ಕಾರ್ಯಕ್ರಮಗಳಲ್ಲೂ ಈ ಗ್ರೂಪ್ ಟಿಕೆಟ್ ಸಹಾಯವಾಗಲಿದೆ. ಆಮಂತ್ರಣ ಕಾರ್ಡ್ಗಳ ಜೊತೆಗೆ ಬಲ್ಕ್ ಮೆಟ್ರೋ ಟಿಕೆಟ್ಗಳನ್ನು ಸಹ ನೀಡಬಹುದು.
5/ 7
ಬಲ್ಕ್ ಟಿಕೆಟ್ ಬುಕ್ ಮಾಡಿದ ಸಂದರ್ಭದಲ್ಲಿ ನಮ್ಮ ಮೆಟ್ರೋ ಪ್ರಯಾಣಿಕರಿಗಾಗಿ ಮಲ್ಟಿ ಎಂಟ್ರಿ, ಮಲ್ಟಿ ಎಕ್ಸಿಟ್ ಸೌಲಭ್ಯ ಕಲ್ಪಿಸಲಿದೆ.
6/ 7
ಸದ್ಯ ಎಷ್ಟು ರಿಯಾಯಿತಿ ಅನ್ನೋದು ನಿರ್ಧಾರ ಮಾಡಿಲ್ಲ. ಜನರು ಎಲ್ಲೆಲ್ಲಿಗೆ ಜಾಸ್ತಿ ಓಡಾಟ ಮಾಡ್ತಾರೆ, ಎಷ್ಟು ಓಡಾಟ ಇರುತ್ತೆ ಇವುಗಳನ್ನು ಟ್ರ್ಯಾಕ್ ಮಾಡಿ ನಂತರ ನಿರ್ಧಾರ ಮಾಡಲಾಗುವುದು ಎಂದು BMRCL ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಫರ್ವೇಜ್ ಹೇಳಿದ್ದಾರೆ.
7/ 7
ಕೆಲ ತಿಂಗಳ ಹಿಂದೆ ಮಹದಾಯಿ ಹೋರಾಟ ಆಯೋಜನೆ ಮಾಡಿದ್ದ ತನ್ನ ಕಾರ್ಯಕರ್ತರಿಗೆ ಬಲ್ಕ್ ಟಿಕೆಟ್ ಬುಕ್ ಮಾಡಿತ್ತು.