ಕಾರ್ಯಕ್ರಮ ಮುಂದೂಡಬೇಕಾಗಿತ್ತು, ಮುಂದೂಡಿ ಅಂತ ನಾನು ಹೇಳಿದ್ದೆ. ಶನಿವಾರ ಬೆಳಗ್ಗೆ ಯುವಕರು ಬಂದರು, ಕಾರ್ಯಕ್ರಮ ಮುಂದೂಡಿ ಮುಜುಗರ ಆಗತ್ತೆ ಅಂತ ಹೇಳಿದೆ. ನಾಡಿನ ಜನತೆ, ಪಕ್ಷದ ಮುಖಂಡರು ಎಲ್ಲರೂ ಹೇಳಿದ್ದರು. ಒಳ್ಳೆ ಕೆಲಸಗಳೆಲ್ಲ ಹೊಳೆಯಲ್ಲಿ ಹೊಮ ಮಾಡಿದಂತಾಗತ್ತೆ. ಹೀಗಾಗಿ ಕಾರ್ಯಕ್ರಮ ಮುಂದೂಡಿ ಅಂತ ಹೇಳಿದ್ದರೂ ಯುವಕರು ಕೇಳಲಿಲ್ಲ. ಜನರಲ್ಲಿ ಕ್ಷೆಮ ಕೇಳಿದ್ದೀನಿ ಎಂದು ಹೇಳುವ ಮೂಲಕ ಏನೂ ನಡೆದೇ ಇಲ್ಲ ಎಂಬಂತೆ ಮಾತನಾಡಿದರು.