(PHOTOS): ಗುರುಗ್ರಾಮದಲ್ಲಿ ಸಂಕ್ರಾಂತಿ ಆಚರಿಸಿದ ಬಿಜೆಪಿ ನಾಯಕರು
ರಾಜ್ಯ ಬಿಜೆಪಿಯ 80ಕ್ಕೂ ಹೆಚ್ಚು ಶಾಸಕರು ಗುರುಗ್ರಾಮದ ಬಳಿ ಇರುವ ಐಟಿಸಿ ಗ್ರ್ಯಾಂಡ್ ಭಾರತ್ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಈ ಮೂಲಕ ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಬಿಜೆಪಿ ರೆಸಾರ್ಟ್ ರಾಜಕಾರಣ ಆರಂಭಿಸಿದೆ ಎನ್ನಲಾಗಿದೆ. ಬಿಜೆಪಿ ಶಾಸಕರು ಸಂಜೆ ಖಾಸಗಿ ರೆಸಾರ್ಟ್ ನಲ್ಲೇ ಒಟ್ಟುಗೂಡಿ ಸಂಕ್ರಾಂತಿ ಪ್ರಯುಕ್ತ ವಿಶೇಷ ಪೂಜೆ ಸಲ್ಲಿಸಿದರು. ಜೊತೆಗೆ ರೆಸಾರ್ಟ್ ನಲ್ಲಿರುವ ಕೊಳದಲ್ಲಿ ದೀಪ ಹರಿಬಿಟ್ಟು ಹಬ್ಬವನ್ನು ಆಚರಿಸಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ, ಸಂಸದರಾದ ಶ್ರೀರಾಮುಲು, ಶೋಭಾ ಕರಂದ್ಲಾಜೆ ಹಾಗೂ ವಿಧಾನ ಪರಿಷತ್ ವಿರೋಧಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ, ಸೇರಿದಂತೆ ಎಲ್ಲ ಶಾಸಕರು ಭಾಗಿಯಾಗಿದ್ದರು. ಕೆಲವು ಚಿತ್ರಗಳು ಇಲ್ಲಿವೆ ನೊಡಿ..