ಓವರ್ಟೇಕ್ ಮಾಡುವಾಗ ಅವಘಡ ಸಂಭವಿಸಿದ್ದು 30 ವರ್ಷದ ದೀಪಕ್ ಎಂಬಾತನ ದುರ್ಮರಣ ಸಂಭವಿಸಿದೆ. ಪೀಣ್ಯಾದ 14ನೇ ಕ್ರಾಸ್ ಬಳಿ ಭೀಕರ ಘಟನೆ ನಡೆದಿದೆ.
2/ 7
ರಾಷ್ಟ್ರೀಯ ಹೆದ್ದಾರಿ ಕಡೆಯಿಂದ ಕಾಮಾಕ್ಷಿಪಾಳ್ಯದ ಕಡೆ ತೆರಳುತಿದ್ದ ಬಿಎಂಟಿಸಿ ಬಸ್, ಎಡಭಾಗದಿಂದ ಓವರ್ ಟೇಕ್ ಮಾಡಲು ಹೋದ ಬೈಕ್ ಸವಾರ ದೀಪಕ್ BMTC ಬಸ್ನ ಹಿಂಬದಿ ಚಕ್ರಕ್ಕೆ ಸಿಲುಕಿ 30 ಸಾವನ್ನಪ್ಪಿದ್ದಾರೆ. (ಸಾಂದರ್ಭಿಕ ಚಿತ್ರ)
3/ 7
ಮೃತ ದೀಪಕ್ ಮೂಲತಃ ವಾರಣಾಸಿ ನಿವಾಸಿಯಾಗಿದ್ದು, ಮೂರು ತಿಂಗಳ ಹಿಂದಷ್ಟೇ ಕೆಲಸ ಅರಸಿ ಬೆಂಗಳೂರಿಗೆ ಬಂದಿದ್ದರು. (ಸಾಂದರ್ಭಿಕ ಚಿತ್ರ)
4/ 7
ಬೆಂಗಳೂರೊನ ಎಸ್.ಎಸ್.ಫ್ಯಾಬ್ ಕಂಪನಿಯಲ್ಲಿ ಅಪರೇಟರ್ ಆಗಿ ಕೆಲಸ ಮಾಡಿಕೊಂಡಿದ್ದರು . ಕೆಲಸ ಮುಗಿಸಿ ವಾಪಸ್ ಆಗುವಾಗ ಈ ಅಪಘಾತ ಸಂಭವಿಸಿದೆ. (ಸಾಂದರ್ಭಿಕ ಚಿತ್ರ)
5/ 7
ಹೆಲ್ಮೆಟ್ ಧರಿಸದದೇ ಅತಿ ವೇಗದಿಂದ ಓವರ್ ಟೇಕ್ ಮಾಡಿದ್ದರಿಂದ ಅಪಘಾತ ಸಂಭವಿಸಿದೆ ಎಂದು ಪೊಲೀಸರಮ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. (ಸಾಂದರ್ಭಿಕ ಚಿತ್ರ)
6/ 7
ಆನೇಕಲ್ನಲ್ಲಿ ಹಿಟ್ ಆಂಡ್ ರನ್
ಆನೇಕಲ್ನ ಮಾಯಸಂದ್ರದಲ್ಲಿ ಭೀಕರ ಹಿಟ್ ಅಂಡ್ ರನ್ ಘಟನೆ ನಡೆದಿದೆ. ಪಾದಚಾರಿಗಳಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದ್ದು, ಮೂವರು ಸಾವನ್ನಪ್ಪಿದ್ದಾರೆ. ಈಚರ್ ವಾಹನ ಚಾಲಕನ ವೇಗಕ್ಕೆ ಮೂವರು ಸ್ಥಳದಲ್ಲೇ ಬಲಿಯಾಗಿದ್ದಾರೆ. (ಸಾಂದರ್ಭಿಕ ಚಿತ್ರ)
7/ 7
ರಸ್ತೆ ಬದಿ ನಡೆದುಕೊಂಡು ಹೋಗ್ತಿದ್ದಾಗ ಈಚರ್ ವಾಹನ ಗುದ್ದಿ ಹೋಗಿದೆ. ಉತ್ತರ ಭಾರತ ಮೂಲದ ಮೂವರು ಕಾರ್ಮಿಕರ ಸಾವನ್ನಪ್ಪಿದ್ದಾರೆ. ಮೃತ ದೇಹಗಳನ್ನ ಅತ್ತಿಬೆಲೆ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. (ಸಾಂದರ್ಭಿಕ ಚಿತ್ರ)