ಈ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಬೆಂಗಳೂರು ನಿವಾಸಿ ನಂದಕುಮಾರಿ ಎನ್ನುವವರು, ನಮ್ಮ ಬೈಕ್ ನಂಬರ್ ಬಳಸಿ ಬೇರೆಯವರು ಓಡಿಸ್ತಿದ್ದಾರೆ. ಈ ಬಗ್ಗೆ ಮೊದಲೇ ಪೊಲೀಸರಿಗೆ ದೂರು ಕೊಟ್ಟಿದ್ದೆ. ಬೈಕ್ ಮೇಲೆ ನಮಗೆ 16 ಸಾವಿರ ರೂಪಾಯಿ ದಂಡ ಬಂದಿದೆ. ಆದರೆ ನಮ್ಮದು ಸಿಗ್ನಲ್ ಜಂಪ್ ಅಷ್ಟೇ ಇರೋದು. ನಮ್ಮ ನಂಬರ್ ಬಳಸಿ ಬೇರೆ ಯಾರೋ ಓಡಾಡಿ ರೂಲ್ಸ್ ಬ್ರೇಕ್ ಮಾಡಿರುವುದರಿಂದ ಹೆಚ್ಚು ದಂಡ ನಮಗೆ ಬಂದಿದೆ. ಈ ಬಗ್ಗೆ ದೂರು ಕೊಡಲು ಬಂದಿದ್ದೇನೆ. ಪೊಲೀಸರನ್ನು ಕೇಳಿದರೆ ದಂಡ ಕ್ಯಾನ್ಸಲ್ ಮಾಡಿಸಲು ಆಗಲ್ಲ, ಪತ್ತೆ ಮಾಡುತ್ತೇವೆ ಅಂತ ಹೇಳಿದ್ದಾರೆ. ನಮಗೆ ಈಗ ಏನು ಮಾಡ್ಬೇಕು ಅಂತ ತಿಳಿಯುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ದಂಡಪಾವತಿ ವೇಳೆ ಇಂತಹ ಸಮಸ್ಯೆಗಳು ಬಂದರೆ ಟ್ರಾಫಿಕ್ ಮ್ಯಾನೇಜ್ಮೆಂಟ್ ಸೆಂಟರ್ ನಲ್ಲಿ ಪರಿಶೀಲಿಸಲು ಸೂಚನೆ ನೀಡಲಾಗುತ್ತಿದೆ. ಎರಡು ದಿನ ನೋಡಿಕೊಂಡು ದಂಡ ಪಾವತಿ ಮಾಡುವ ಕಾಲಾವಧಿಯನ್ನು ವಿಸ್ತರಿಸುವ ಬಗ್ಗೆ ಚಿಂತನೆ ಮಾಡುತ್ತೇವೆ. ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಚರ್ಚಿಸಲಾಗುವುದು ಎಂದು ಟ್ರಾಫಿಕ್ ಸ್ಪೆಷಲ್ ಕಮಿಷನರ್ ಎಂಎ ಸಲೀಂ ತಿಳಿಸಿದ್ದಾರೆ. (ಸಾಂದರ್ಭಿಕ ಚಿತ್ರ)