BJP ನಾಯಕರ ಹೇಳಿಕೆಯಿಂದ ಸರ್ಕಾರ, ಸಿಎಂಗೆ ಅಗೌರವ: Kamal Pant ಪರವಾಗಿ Bhaskar Rao ಟ್ವೀಟ್

ಜೆಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಚಂದ್ರಶೇಖರ್ ಅಲಿಯಾಸ್ ಚಂದ್ರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರ ಹೇಳಿಕೆಗೆ ಮಾಜಿ ಬೆಂಗಳೂರು ಪೊಲೀಸ್ ಆಯುಕ್ತ, ಎಎಪಿ ಮುಖಂಡ ಭಾಸ್ಕರ್ ರಾವ್ ಅಸಮಾಧಾನ ಹೊರ ಹಾಕಿದ್ದಾರೆ.

First published:

 • 18

  BJP ನಾಯಕರ ಹೇಳಿಕೆಯಿಂದ ಸರ್ಕಾರ, ಸಿಎಂಗೆ ಅಗೌರವ: Kamal Pant ಪರವಾಗಿ Bhaskar Rao ಟ್ವೀಟ್

  ಚಂದ್ರು ಕೊಲೆ ಬೈಕ್ ಟಚ್ ಆಗಿದ್ದರಿಂದ ನಡೆದಿದೆ ಎಂದು ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿಕೆ ನೀಡಿದ್ದರು. ಆದ್ರೆ ಚಂದ್ರು ಗೆಳೆಯ ಸೈಮನ್ ದಿಢೀರ್ ತನ್ನ ಹೇಳಿಕೆ ಬದಲಾಯಿಸಿ, ಉರ್ದು ಮಾತನಾಡದ್ದಕ್ಕೆ ಕೊಲೆ ನಡೆದಿದೆ ಎಂದು ಹೇಳಿದ್ದರಿಂದ ಬಿಜೆಪಿ ನಾಯಕರ ಕಮಲ್ ಪಂತ್ ವಿರುದ್ಧ ಮುಗಿಬಿದ್ದಿದ್ದರು.

  MORE
  GALLERIES

 • 28

  BJP ನಾಯಕರ ಹೇಳಿಕೆಯಿಂದ ಸರ್ಕಾರ, ಸಿಎಂಗೆ ಅಗೌರವ: Kamal Pant ಪರವಾಗಿ Bhaskar Rao ಟ್ವೀಟ್

  ಬಿಜೆಪಿ ಕೆಲ ನಾಯಕರು ಕಮಿಷನರ್ ಕಮಲ್ ಪಂತ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.ಬಿಜೆಪಿಯ ರವಿಕುಮಾರ್, ಕಮಿಷನರ್ ಅವರನ್ನ ಸುಳ್ಳುಗಾರ ಎಂದು ಹೇಳಿದ್ದರು. ಈ ಹೇಳಿಕೆಗೆ ಭಾಸ್ಕರ್ ರಾವ್ ಪ್ರತಿಕ್ರಿಯೆ ನೀಡಿದ್ದಾರೆ.

  MORE
  GALLERIES

 • 38

  BJP ನಾಯಕರ ಹೇಳಿಕೆಯಿಂದ ಸರ್ಕಾರ, ಸಿಎಂಗೆ ಅಗೌರವ: Kamal Pant ಪರವಾಗಿ Bhaskar Rao ಟ್ವೀಟ್

  ಬೆಂಗಳೂರಿನ ಕಮಿಷನರ್ ಒಂದೂವರೆ ಕೋಟಿ ಜನರನ್ನ ರಕ್ಷಣೆ ಮಾಡುವ ಕಾರ್ಯ ಮಾಡ್ತಿದ್ದಾರೆ. ಬಿಜೆಪಿ ನಾಯಕರುಗಳು ಇಂತಹ ಹೇಳಿಕೆಯಿಂದ ಸರ್ಕಾರ ಹಾಗೂ ಸಿ.ಎಂ ಗೆ ಅಗೌರವ ತೋರಿದ್ದಾರೆ ಎಂದು ಟ್ವೀಟ್  ಮಾಡಿದ್ದಾರೆ.

  MORE
  GALLERIES

 • 48

  BJP ನಾಯಕರ ಹೇಳಿಕೆಯಿಂದ ಸರ್ಕಾರ, ಸಿಎಂಗೆ ಅಗೌರವ: Kamal Pant ಪರವಾಗಿ Bhaskar Rao ಟ್ವೀಟ್

  ಆಡಳಿತಾರೂಢ ಸರ್ಕಾರ ಮತ್ತು ಅಧಿಕಾರದಲ್ಲಿರುವ ಪಕ್ಷದ ರಾಜಕಾರಣಿಯೊಬ್ಬರು ಮಾಧ್ಯಮಗಳಲ್ಲಿ ಆಯುಕ್ತರನ್ನು "ಸುಳ್ಳುಗಾರ" ಎಂದು ಕರೆಯುವುದು ಮುಖ್ಯಮಂತ್ರಿ ಮತ್ತು ಸರ್ಕಾರವನ್ನು ಅವಮಾನಿಸುತ್ತಿದೆ. ಉತ್ತಮ ಆಡಳಿತ ನೀಡುವಲ್ಲಿ ಸರ್ಕಾರ ಮೇಲುಗೈ ಸಾಧಿಸಲಿ ಎಂದು ಹೇಳಿದ್ದಾರೆ.

  MORE
  GALLERIES

 • 58

  BJP ನಾಯಕರ ಹೇಳಿಕೆಯಿಂದ ಸರ್ಕಾರ, ಸಿಎಂಗೆ ಅಗೌರವ: Kamal Pant ಪರವಾಗಿ Bhaskar Rao ಟ್ವೀಟ್

  ಸೈಮನ್ ಹೇಳಿಕೆ ಬೆನ್ನಲ್ಲೇ ಕಮೀಷನರ್ ಕಮಲ್ ಪಂತ್ ವಿರುದ್ಧ ಬಿಜೆಪಿ ನಾಯಕರು ಮುಗಿಬಿದ್ದಿದ್ದಾರೆ. ಈ ಸಂಬಂಧ ಶನಿವಾರ ಸಂಜೆ ಸಿಎಂ ಬೊಮ್ಮಾಯಿ ಅವರನ್ನು ಭೇಟಿಯಾಗಿ ಪ್ರಕರಣದ ವಾಸ್ತವವನ್ನು ವಿವರಿಸಿದ್ದರು. ಇದರ ಜೊತೆಗೆ ಸೈಮನ್ ನೀಡಿರುವ ವಿಡಿಯೋ ಹೇಳಿಕೆಯನ್ನು ಸಿಎಂಗೆ ತೋರಿಸಿರುವ ಮಾಹಿತಿ ಲಭ್ಯವಾಗಿದೆ.

  MORE
  GALLERIES

 • 68

  BJP ನಾಯಕರ ಹೇಳಿಕೆಯಿಂದ ಸರ್ಕಾರ, ಸಿಎಂಗೆ ಅಗೌರವ: Kamal Pant ಪರವಾಗಿ Bhaskar Rao ಟ್ವೀಟ್

  ಕಮಿಷನರ್ ಜೊತೆಗಿನ ಚರ್ಚೆ ಬಳಿಲ ಸದ್ಯ ಪ್ರಕರಣದಲ್ಲಿ ಗೊಂದಲಬೇಡ ಅಂತಾ ಸಿಐಡಿಗೆ ಕೇಸ್ ವರ್ಗಾವಣೆ ಮಾಡಲು ಸಿಎಂ ಸೂಚನೆ ನೀಡಿದ್ದರು. ಕಮಿಷನರ್ ಮತ್ತು ಡಿಜಿಪಿ ಜೊತೆ ಚರ್ಚಿಸಿ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿದೆ.

  MORE
  GALLERIES

 • 78

  BJP ನಾಯಕರ ಹೇಳಿಕೆಯಿಂದ ಸರ್ಕಾರ, ಸಿಎಂಗೆ ಅಗೌರವ: Kamal Pant ಪರವಾಗಿ Bhaskar Rao ಟ್ವೀಟ್

  ಕಮಲ್ ಪಂತ್ ಹೇಳಿದ್ದೇನು? ಸೈಮನ್ ಮತ್ತು ಚಂದ್ರು ಊಟ ಮುಗಿಸಿ ವಾಪಸ್ ಬರುವ ವೇಳೆ ಬೈಕ್ ಟಚ್ ಆದ ವಿಚಾರಕ್ಕೆ ಗಲಾಟೆ ನಡೆದಿದೆ. ಗಲಾಟೆ ವೇಳೆ ಚಂದ್ರುಗೆ ಶಾಹಿದ್ ಚಾಕು ಇರಿದು ಸ್ಥಳದಿಂದ ಪರಾರಿಯಾಗಿದ್ದಾನೆ.

  MORE
  GALLERIES

 • 88

  BJP ನಾಯಕರ ಹೇಳಿಕೆಯಿಂದ ಸರ್ಕಾರ, ಸಿಎಂಗೆ ಅಗೌರವ: Kamal Pant ಪರವಾಗಿ Bhaskar Rao ಟ್ವೀಟ್

  ಗಾಯಾಳು ಚಂದ್ರುವನ್ನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ. ಕೊಲೆ ಪ್ರಕರಣ ಸಂಬಂಧ ಮೂವರ ಬಂಧಿಸಿದ್ದು ತನಿಖೆ ಮುಂದುವರೆಸಲಾಗಿದೆ ಎಂದು ಕಮಲ್ ಪಂತ್ ಹೇಳಿದ್ದರು.

  MORE
  GALLERIES