Bharat Jodo Yatra: ಬಳ್ಳಾರಿ ಸಮಾವೇಶದ ಬಳಿಕ ಮುಂದುವರಿದ ಭಾರತ್ ಜೋಡೋ ಯಾತ್ರೆ
Bharat Jodo Yatra: ಬಳ್ಳಾರಿಯ ಬೃಹತ್ ಸಮಾವೇಶದ ಬಳಿಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Congress Leader Rahul Gandhi) ನೇತೃತ್ವದ ಭಾರತ್ ಜೋಡೋ ಪಾದಯಾತ್ರೆ ಮುಂದುವರಿದಿದೆ. ಭಾರತ್ ಜೋಡೋ ಪಾದಯಾತ್ರೆ 1000 ಕಿಮೀ ಪೂರೈಸಿದೆ ಎಂದು ಕಾಂಗ್ರೆಸ್ ಹೇಳಿದೆ.
ಇಂದು ಬೆಳಗ್ಗೆ 6.30ಕ್ಕೆ ಬಳ್ಳಾರಿಯ ಸಂಗನಕಲ್ಲುವಿನಿಂದ ಪಾದಯಾತ್ರೆ ಆರಂಭಗೊಂಡಿದೆ. ಬೆಳಗ್ಗೆ 11 ಗಂಟೆಗೆ ಬಳ್ಳಾರಿಯ ಮೊಕಾದಲ್ಲಿ ಯಾತ್ರೆಗೆ ವಿರಾಮ ಇರಲಿದೆ.
2/ 7
ಸಂಜೆ 4 ಗಂಟೆಗೆ ಪುನಾರಂಭಗೊಳ್ಳುವ ಪಾದಯಾತ್ರೆ ಏಳು ಗಂಟೆಗೆ ಕರ್ನಾಟಕ ಆಂಧ್ರ ಪ್ರದೇಶ ಗಡಿಯ ಕರ್ನೂಲ್ ಜಿಲ್ಲೆಯ ಆಲೂರ್ ನಲ್ಲಿ ಕಾಂಗ್ರೆಸ್ ನಾಯಕರು ವಾಸ್ತವ್ಯ ಹೂಡಲಿದ್ದಾರೆ.
3/ 7
ಬಳ್ಳಾರಿ ಸಮಾವೇಶದಲ್ಲಿ ರಾಹುಲ್ ಗಾಂಧಿ ಮಾತು
ಬಳ್ಳಾರಿಯಲ್ಲಿ ನಿನ್ನೆ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತಾಡಿದ ರಾಹುಲ್ ಗಾಂಧಿ, 3500 ಕಿಲೋ ಮೀಟರ್ ನಡೆಯುವುದು ಸಾಮಾನ್ಯ ವಿಷಯ ಅಲ್ಲ ಅನ್ಕೊಂಡಿದ್ದೆ. ಆದ್ರೆ, ದಿನಗಳೆದಂತೆ ನಡೆಯೋದು ಸುಲಭವಾಗಿದೆ ಎಂದು ಹೇಳಿದ್ದಾರೆ.
4/ 7
ಬಳ್ಳಾರಿಯಲ್ಲಿ ಭಾರತ್ ಜೋಡೋ ಯಾತ್ರೆಯಲ್ಲಿ ಮಾತಾಡಿದ ರಾಹುಲ್ ಗಾಂಧಿ, ಯಾವಾಗ ಯಾತ್ರೆಯಲ್ಲಿ ಸಣ್ಣ ಮಗು, ವೃದ್ಧರು ಬಂದು ಮಾತಾಡ್ತಾರೋ ನನಗೆ ಮುಂದೆ ಹೋಗೋದಕ್ಕೆ ಶಕ್ತಿ ಬರುತ್ತದೆ ಎಂದರು.
5/ 7
ಬಳ್ಳಾರಿ ಜಿಲ್ಲೆಯಲ್ಲಿ ಒಬ್ಬ ರಾಮುಲು ಅಂತಾ ಮಂತ್ರಿ ಇದ್ದಾನೆ. ಕಾಂಗ್ರೆಸ್ ಪಕ್ಷ ಈ ದೇಶಕ್ಕೆ ಏನೂ ಮಾಡಿಲ್ಲ ಎಂದು ಹೇಳಿದ್ದಾನೆ. ಆ ಶ್ರೀರಾಮುಲು ಒಬ್ಬ ಪೆದ್ದ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
6/ 7
ರಾಮುಲುಗೆ ಸಿದ್ದರಾಮಯ್ಯ ಪ್ರಶ್ನೆ
ನಿನ್ನಂತ ಪೆದ್ದನ ಜೊತೆ ಚರ್ಚೆ ಮಾಡೋಕೆ ಯಾರೂ ತಯಾರಿಲ್ಲ. ಲೂಟಿ ಹೊಡೆದಿದ್ದು ಮಾತ್ರವೇ ನಿನ್ನ ಸಾಧನೆ. ಬಳ್ಳಾರಿ ಅಕ್ರಮ ಗಣಿಗಾರಿಕೆಗೆ ಕುಮ್ಮಕ್ಕು ಕೊಟ್ಟಿದ್ದು ಯಾರು ಎಂದು ಮೇಜು ಕುಟ್ಡಿ ರಾಮುಲುಗೆ ಸಿದ್ದರಾಮಯ್ಯ ಪ್ರಶ್ನಿಸಿದ್ರು.
7/ 7
ಜೋಡೋ ಯಾತ್ರೆ ಸಮಾವೇಶಕ್ಕೆ ಬಂದವರಿಗೆ ಫ್ರೀಯಾಗಿ ಗುಂಡು ತುಂಡು ಕೊಟ್ಟಿದ್ದಾರೆ. ಬಳ್ಳಾರಿಯ ಸಪ್ತಗಿರಿ ವೈನ್ಸ್ ನಲ್ಲಿ ಫ್ರೀಯಾಗಿ ಎಣ್ಣೆ ಜೊತೆಗೆ ಬಿರಿಯಾನಿ ಸವಿದಿದ್ದಾರೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ಮುನ್ಸಿಪಲ್ ಗ್ರೌಂಡ್ನಲ್ಲಿ ಕಾಂಗ್ರೆಸ್ ಸಮಾವೇಶ ನಡೆಯಿತು.