ಹುಬ್ಬಳ್ಳಿಯ ಭೈರಿದೇವರಕೊಪ್ಪದಲ್ಲಿ ಭಗವದ್ಗೀತಾ ಜ್ಞಾನಲೋಕ ತಲೆ ಎತ್ತಿದೆ. ಭಾರತದಲ್ಲಿ ಪ್ರಪ್ರಥಮವಾಗಿ ಭವದ್ಗೀತೆ ಜ್ಞಾನ ಲೋಕವೆಂಬ ಅದ್ಭುತ ವಿಸ್ಮಯದ ಅನಾವರಣಗೊಂಡಿದ್ದು, ಕಲುಷಿತ ಮನಸ್ಸುಗಳಿಗೆ ಭಗವದ್ಗೀತೆ ಅಮೃತಸಿಂಚನದ ಧ್ಯೇಯದೊಂದಿಗೆ ಈ ಜ್ಞಾನಲೋಕವನ್ನು ನಿರ್ಮಿಸಲಾಗಿದೆ.
5 ಎಕರೆ ವಿಶಾಲ ಪ್ರದೇಶದಲ್ಲಿ ಬೃಹತ್ ಮ್ಯೂಸಿಯಂ ತೆರೆಯಲಾಗಿದೆ. ಭವ್ಯ ಕಟ್ಟಡದೊಳಗೆ ಸ್ಥಾಪಿಸಲಾಗಿರುವ ಈ ಮ್ಯೂಸಿಯಂನಲ್ಲಿ 114 ಪ್ರತ್ಯೇಕ ಕೊಠಡಿಗಳಿವೆ. ಪ್ರತಿ ಕೊಠಡಿಗಳಲ್ಲೂ ಭಗವದ್ಗೀತೆಯ ಬೇರೆ ಬೇರೆ ಶ್ಲೋಕಗಳನ್ನು ವಿವಿಧ ಬಗೆಯಲ್ಲಿ ವಿವರಿಸುವ ವ್ಯವಸ್ಥೆ ಮಾಡಲಾಗಿದೆ.
3/ 8
5 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ಬೃಹತ್ ಮ್ಯೂಸಿಯಂ ಇದಾಗಿದೆ. ಇಂದು ಇದರ ಉದ್ಘಾಟನಾ ಸಮಾರಂಭ ನಡೆಯಿತು
4/ 8
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾರ್ಯಕ್ರಮ ಉದ್ಘಾಟಿಸಿದ್ದು, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಭಗವದ್ಗೀತಾ ಜ್ಞಾನಲೋಕದ ಉದ್ಘಾಟನೆ ಮಾಡಿದ್ರು.
5/ 8
ಇದೇ ವೇಳೆ ಸಚಿವ ಹಾಲಪ್ಪ ಆಚಾರ್, ಶಂಕರಪಾಟೀಲ ಮುನೇನಕೊಪ್ಪ, ಸಂಸದ ಬಿ.ವೈ.ರಾಘವೇಂದ್ರ ಮತ್ತಿತರರು ಉಪಸ್ಥಿತಿರಿದ್ರು.
6/ 8
ಮ್ಯೂಸಿಯಂ, ಯೋಗ, ಧ್ಯಾನದ ತರಬೇತಿ ನೀಡುವ ಕೇಂದ್ರವೂ ಆಗಿದೆ. ಬರೋಬ್ಬರಿ 1500 ಜನ ಏಕಕಾಲಕ್ಕೆ ಕುಳಿತು ತರಬೇತಿ ಪಡೆಯುವ ವ್ಯವಸ್ಥೆ ಇಲ್ಲಿದೆ.
7/ 8
ಸಾಮೂಹಿಕ ಧ್ಯಾನ ಮಾಡಲು ಧ್ಯಾನಮಂದಿರ ನಿರ್ಮಿಸಲಾಗಿದೆ.ದೇವಲೋಕ, ಧ್ಯಾನಲೋಕ ಎಂದು ವಿವಿಧ ವಿಭಾಗಗಳಿಗೆ ಹೆಸರಿಡಲಾಗಿದೆ. ದೇಶದಲ್ಲಿ ಆಧ್ಯಾತ್ಮಿಕ ವಿಷಯಗಳಿಗೆ ಸಂಬಂಧಪಟ್ಟಂತೆ ಸಾಕಷ್ಟುಮ್ಯೂಸಿಯಂಗಳಿವೆ.
8/ 8
ಆದರೆ ಭಗವದ್ಗೀತೆಗೆ ಸಂಬಂಧಪಟ್ಟಂತೆ ಇಷ್ಟೊಂದು ದೊಡ್ಡ ಮ್ಯೂಸಿಯಂ ಮಾಡಿರುವುದು ಇದೇ ಮೊಟ್ಟಮೊದಲು