ಬೆಂಗಳೂರಿನ ರಸ್ತೆಗುಂಡಿ ತಪ್ಪಿಸಲು ಕೆಎಸ್ಆರ್ಟಿಸಿ ಬಸ್ ಚಕ್ರಕ್ಕೆ ಸಿಲುಕಿ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ಉಮಾದೇವಿ ಸಾವನ್ನಪ್ಪಿದ್ದಾರೆ. ಅಪಘಾತ ಹಿನ್ನೆಲೆ ಕೆಎಸ್ಆರ್ಟಿಸಿ ಚಾಲಕ ಮಾರುತಿ ರಾವ್ ಎಂಬವರನ್ನು ಬಂಧಿಸಲಾಗಿದೆ.
ಸೋಮವಾರ ರಸ್ತೆ ಗುಂಡಿ ತಪ್ಪಿಸಲು ಹೋಗಿ ಬಸ್ ಅಡಿ ಮಹಿಳೆ ಸಿಲುಕಿದ್ದರು. ಚಿಕಿತ್ಸೆ ಫಲಕಾರಿಯಾಗಿದೆ ರಾಜಾಜಿನಗರ ಇಎಸ್ಐ ಆಸ್ಪತ್ರೆಯಲ್ಲಿ ಉಮಾದೇವಿ ಸಾವನ್ನಪ್ಪಿದ್ದಾರೆ.
2/ 7
ಮಾಗಡಿ ರಸ್ತೆಯ ಸುಜಾತ ಥಿಯೇಟರ್ ಬಳಿ ಗುಂಡಿ ತಪ್ಪಿಸಲು ಹೋಗಿ ಬಸ್ ಅಡಿ ತಾಯಿ ಮಗಳು ಸಿಲುಕಿದ್ದರು. ಕೂಡಲೇ ಸ್ಥಳೀಯರು ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿದ್ದರು.
3/ 7
ಹೆಚ್ಚಿನ ಚಿಕಿತ್ಸೆಗಾಗಿ ಮಧ್ಯಾಹ್ನ ರಾಜಾಜಿ ನಗರದ ಇಎಸ್ಐ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಉಮಾದೇವಿ ಅವರನ್ನು ಐಸಿಯುಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿತ್ತು.
4/ 7
ಮರಣೋತ್ತರ ಪರೀಕ್ಷೆ ಬಳಿಕ ಬೆಳಗ್ಗೆ 10 ಗಂಟೆಯ ನಂತರ ಉಮಾದೇವಿ ಅವರ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗುವುದು ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. (ಸಾಂದರ್ಭಿಕ ಚಿತ್ರ)
5/ 7
ಮೃತ ಉಮಾದೇವಿ ಪುತ್ರಿ ವನಿತಾ ದೂರು ದಾಖಲು ಪ್ರಕರಣ ಸಂಬಂಧ KSRTC ಬಸ್ ಚಾಲಕ ಮಾರುತಿ ರಾವ್ ಬಂಧನ ಮಾಡಲಾಗಿದೆ. ಮಲ್ಲೇಶ್ವರಂ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ನಡೆದಿತ್ತು.
6/ 7
ಸುಜಾತ ಥಿಯೇಟರ್ ಬಳಿ ಉಮಾದೇವಿ ಮಗಳ ಜೊತೆ ಸ್ಕೂಟಿಯಲ್ಲಿ ಹೊರಟಿದ್ದರು. ಗುಂಡಿ ತಪ್ಪಿಸಲು ಹೋದಾಗ ಸ್ಕೂಟರ್ನಿಂದ ತಾಯಿ ಮತ್ತು ಮಗಳು ಕೆಳಗೆ ಬಿದ್ದಿದ್ದರು. (ಸಾಂದರ್ಭಿಕ ಚಿತ್ರ)
7/ 7
ಇದೇ ವೇಳೆ ಹಿಂದಿನಿಂದ ಬಂದ ಬಸ್ ಉಮಾದೇವಿ ಅವರ ಬಲ ತೊಡೆಯ ಮೇಲೆ ಹಾದಿತ್ತು. ಉಮಾದೇವಿ ಅವರ ಮಗಳಿಗೆ ಸಣ್ಣ ಪ್ರಮಾಣದಲ್ಲಿ ಗಾಯಗಳಾಗಿವೆ. (ಸಾಂದರ್ಭಿಕ ಚಿತ್ರ)