ರಾತ್ರಿ 11 ಗಂಟೆಗೆ ನಾನು ಅವರಿಗೆ ಕರೆ ಮಾಡಿದರೂ ಅವರು ಪ್ರತಿಕ್ರಿಯಿಸಲಿಲ್ಲ. ನಾನು ಮಗನ ನಿವಾಸಕ್ಕೆ ಧಾವಿಸಿ ನೋಡಿದಾಗ ನನ್ನ ಮಗ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡೆ. ಆತನ ತಲೆಗೆ ತೀವ್ರ ಪೆಟ್ಟಾಗಿತ್ತು. ನಾನು ಮನೆಗೆ ನುಗ್ಗಿದ ಕೂಡಲೇ ನೇತ್ರಾ ಕಬ್ಬಿಣದ ರಾಡ್ ಹಿಡಿದು ಸ್ಥಳದಿಂದ ಪರಾರಿಯಾಗಿದ್ದಾಳೆ ಎಂದು ಬಸವರಾಜು ದೂರಿನಲ್ಲಿ ತಿಳಿಸಿದ್ದಾರೆ. (ಪ್ರಾತಿನಿಧಿಕ ಚಿತ್ರ)
ನೇತ್ರಾ ನನ್ನ ಗಂಡ ರಾಜ್ ಅವರ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳಲು ಕೊಲೆ ಮಾಡಿದ್ದಾಳೆ ಎಂದು ಮೊದಲ ಪತ್ನಿ ಸತ್ಯಕುಮಾರಿ ಕೂಡ ಆರೋಪಿಸಿದ್ದಾರೆ. ಹಾರೋಕ್ಯಾತನಹಳ್ಳಿಯಲ್ಲಿ ನಾಗೇಶ್ ಎಂಬುವರಿಗೆ ಸೇರಿದ ಎರಡು ಎಕರೆಯಲ್ಲಿ ರಾಜ್ ಬಡಾವಣೆ ಅಭಿವೃದ್ಧಿಪಡಿಸಿದ್ದರು. ಬಳಿಕ ಆರು ನಿವೇಶನಗಳನ್ನು ತನ್ನ ಬಳಿ ಇಟ್ಟುಕೊಂಡು ಆಸ್ತಿಯನ್ನು ನಾಗೇಶ್ಗೆ ಹಿಂದಿರುಗಿಸಿದ್ದರು. (ಸಾಂದರ್ಭಿಕ ಚಿತ್ರ)