ಐದನೇ ಮಹಡಿಯಿಂದ ಬಿದ್ದು ಎರಡು ವರ್ಷದ ಮಗು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆದಿದೆ. ಇನ್ವಸ್ಟೆಮೆಂಟ್ ಲೇಔಟ್ ನಲ್ಲಿರುವ ಅಪಾರ್ಟ್ ಮೆಂಟ್ ನಲ್ಲಿ ಈ ಘಟನೆ ಇಂದು ಬೆಳಗ್ಗೆ ನಡೆದಿದೆ.
ದಿವ್ಯಾಂಶ್ ರೆಡ್ಡಿ ಮೃತ ಮಗು. ದಿವ್ಯಾಂಶ್ ಅಜ್ಜಿ ಕಳೆದ ಕೆಲ ದಿನಗಳಿಂದ ಬಾಡಿಗೆಗೆ ಹೊಸ ಮನೆ ಹುಡುಕುತ್ತಿದ್ದರು. ಇವತ್ತು ಸಹ ಮನೆ ನೋಡಲು ಹೊರಟಿದ್ದ ಅಜ್ಜಿ ಜೊತೆ ದಿವ್ಯಾಂಶ್ ತೆರಳಿದ್ದನು. (ಸಾಂದರ್ಭಿಕ ಚಿತ್ರ)
2/ 5
ಇನ್ವಸ್ಟೆಮೆಂಟ್ ಲೇಔಟ್ ನಲ್ಲಿರುವ ಅಪಾರ್ಟ್ ಮೆಂಟ್ ನಲ್ಲಿ ಖಾಲಿ ಫ್ಲ್ಯಾಟ್ ಇರೋ ವಿಷಯ ತಿಳಿದು ಅಲ್ಲಿಗೆ ತೆರಳಿದ್ದರು, ಈ ವೇಳೆ ಅಜ್ಜಿ ಮನೆ ನೋಡುತ್ತಿರಬೇಕಾದ್ರೆ ಜೊತೆಯಲ್ಲಿದ್ದ ಕಂದಮ್ಮ 5ನೇ ಮಹಡಿಯಿಂದ ಕೆಳಗೆ ಬಿದ್ದಿದೆ.
3/ 5
ಆಯತಪ್ಪಿ ಬಿದ್ದು ಕೆಳಗೆ ಬಿದ್ದು ಮಗು ಸ್ಥಳದಲ್ಲಿಯೇ ಸಾವನ್ನಪ್ಪಿದೆ. ಅಪಾರ್ಟ್ ಮೆಂಟ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಎಲೆಕ್ಟ್ರಾನಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
4/ 5
ಸದ್ಯ ಮಗುವಿನ ಮೃತದೇಹವನ್ನು ಸಾರ್ವಜನಿಕ ಆಸ್ಪತ್ರೆಯಲ್ಲಿ ಇರಿಸಲಾಗಿದೆ, ದಿವ್ಯಾಂಶ್ ಪೋಷಕರು ಆಕ್ರಂದನ ಮುಗಿಲು ಮುಟ್ಟಿದೆ.
5/ 5
ಕೆಲ ದಿನಗಳ ಹಿಂದೆ ಮೈಸೂರಿನಲ್ಲಿ ತಿಳಿಯದೇ ಮೈ ಮೇಲೆ ಬಿಸಿ ನೀರು ಸುರಿದುಕೊಂಡು 2 ವರ್ಷದ ಆದ್ಯಾ ಪ್ರಾಣ ಬಿಟ್ಟಿದ್ದಳು. ಮೈಸೂರು ತಾಲೂಕಿನ ದಾಸನಕೊಪ್ಪಲು ಗ್ರಾಮದ ರಾಮು-ಜಯಲಕ್ಷ್ಮೀ ದಂಪತಿಯ ಪುತ್ರಿಯಾಗಿದ್ದಳು.