Metro ಕಾಮಗಾರಿಯಲ್ಲಿ ಮತ್ತೊಂದು ಮೈಲಿಗಲ್ಲು: ಸುರಂಗ ಕೊರೆಯುವಲ್ಲಿ ‘ಅವನಿ’ ಯಶಸ್ವಿ
Namma Metro Construction Update: ಮೆಟ್ರೋ ಕಾಮಗಾರಿ ಮತ್ತೊಂದು ಮೈಲಿಗಲ್ಲು ತಲುಪಿದೆ. ಅವನಿ ಯಂತ್ರ 280 ಮೀಟರ್ ಉದ್ದದ ಗಟ್ಟಿ ಬಂಡೆಗಳನ್ನ ಕೊರೆದು ಇಂದು ಯಶಸ್ವಿಯಾಗಿ ಹೊರ ಬಂದಿದೆ.
ಎಂ.ಜಿ ರಸ್ತೆ ನಿಲ್ದಾಣದಲ್ಲಿ ಇಂದು ಆವನಿ ಯಂತ್ರ ಹೊರ ಬರುವ ಮೂಲಕ 1086 ಮೀಟರ್ಗಳ ಸುರಂಗ ಕೂರೆಯುವ ಕಾಮಗಾರಿ ಪೂರ್ಣಗೊಂಡಿದೆ. 2020ರ ಸೆಪ್ಟೆಂಬರ್ 5ರಂದು ಶಿವಾಜಿನಗರ ಮೆಟ್ರೋ ನಿಲ್ದಾಣದಲ್ಲಿ ಸುರಂಗ ಕೊರೆಯಲು ಪ್ರಾರಂಭ ಮಾಡಲಾಗಿತ್ತು.
2/ 4
ರಾಷ್ಟ್ರೀಯ ಮಿಲಿಟರಿ ಶಾಲೆಯ ನಿಲ್ದಾಣಗಳ ನಡುವೆ ಮತ್ತಷ್ಟು ಸುರಂಗ ಮಾರ್ಗಕ್ಕಾಗಿ ಚಲಿಸಲಿದೆ. ಅದೇ ರೀತಿ ಮತ್ತೊಂದೆಡೆಯೂ ಮೆಟ್ರೋ ಕಾಮಗಾರಿ ಮುಂದುವರೆದಿದೆ.
3/ 4
2021ರ ಜೂನ್ 29 ರಂದು ದಕ್ಷಿಣ ರಾಂಪ್ ನಲ್ಲಿ (ಡೈರಿ ಸರ್ಕಲ್) ಸುರಂಗ ಕೊರೆಯಲು ಪ್ರಾರಂಭವಾಗಿತ್ತು. ವಮಿಕ ಹೆಸರಿನ ಸುರಂಗ ಕೊರೆಯುವ ಸ್ಲರಿ ಆಧಾರಿತ ಯಂತ್ರ614 ಮೀಟರ್ ಸುರಂಗ ಕೊರೆಯುವುದನ್ನು ಪೂರ್ಣಗೊಳಿಸಿದೆ. ಜನವರಿ 3 ರಂದು ಡೈರಿ ಸರ್ಕಲ್ ಮೆಟ್ರೋ ನಿಲ್ದಾಣವನ್ನು ತಲುಪಿತ್ತು.
4/ 4
ಈ ಯಂತ್ರವು ಸದ್ಯಕ್ಕೆ ಡೈರಿ ಸರ್ಕಲ್ ನಿಲ್ದಾಣದಲ್ಲಿ ಚಲಿಸುತ್ತಿದೆ. ಡೈರಿ ಸರ್ಕಲ್ ಮತ್ತು ಲಕ್ಕಸಂದ್ರ ಮೆಟ್ರೋ ನಿಲ್ದಾಣಗಳ ನಡುವಿನ ಸುರಂಗ ಕೊರೆಯುವ ಕಾಮಗಾರಿ ಪ್ರಾರಂಭಿಸಬೇಕಾಗಿದೆ.