Bengaluru: ದರೋಡೆಗೆ ಯತ್ನಿಸಿದ್ದ ಮೂವರು ಆರೋಪಿಗಳು ಅರೆಸ್ಟ್
Bengaluru: ಗೋವಿಂದರಾಜನಗ ಠಾಣೆಯ ಪೊಲೀಸರು ದರೋಡೆಗೆ ಪ್ಲಾನ್ ಮಾಡಿಕೊಂಡಿದ್ದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಮೂರು ಲಕ್ಷ ರೂ. ಮೌಲ್ಯದ 6 ಬೈಕ್ ಹಾಗೂ 6 ಮೊಬೈಲ್ ವಶಕ್ಕೆ ಪಡೆದುಕೊಳ್ಳಲಾಗಿದೆ.
ಸಿಲಿಕಾನ್ ಸಿಟಿಯಲ್ಲಿ ಅಪರಾಧ ಪ್ರಕರಣಗಳನ್ನು ತಡೆಯಲು ಬೆಂಗಳೂರು ಪೊಲೀಸರು ಸದಾ ಅಲರ್ಟ್ ಆಗಿರುತ್ತಾರೆ. ಇದೀಗ ದರೋಡೆಗೆ ಹೊಂಚು ಹಾಕಿ ಕುಳಿತಿದ್ದ, ಮೂವರನ್ನು ಬಂಧಿಸಿದ್ದಾರೆ.
2/ 4
ದರೋಡೆಗೆ ಯತ್ನಿಸಿದ್ದ ಮೂವರು ಆರೋಪಿಗಳನ್ನು ಖೆಡ್ಡಾಕ್ಕೆ ಕೆಡುವಲ್ಲಿ ನಗರದ ಗೋವಿಂದರಾಜನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
3/ 4
ಅಶೋಕ್, ವಿಜಯ್ ಮತ್ತು ಆದರ್ಶ್ ಬಂಧಿತ ಆರೋಪಿಗಳು. ಮೂವರು ಬೆಂಗಳೂರಿನ ವಿವಿಧಡೆ ದರೋಡೆ ಮಾಡಲು ಸಂಚು ರೂಪಿಸಿದ್ದರು ಎಂದು ತಿಳಿದು ಬಂದಿದೆ.
4/ 4
ಬಂಧಿತರಿಂದ 3 ಲಕ್ಷ ರೂ ಮೌಲ್ಯದ 6 ಬೈಕ್ ಹಾಗೂ 6 ಮೊಬೈಲ್ ವಶಕ್ಕೆ ಪಡೆಯಲಾಗಿದೆ. ಬಂಧಿತರ ಪೈಕಿ ಅಶೋಕ್ ಮೇಲೆ ಉಪ್ಪಾರಪೇಟೆ, ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿತ್ತು.