Bangalore Crime News: ಸಂಬಳ (salary)ನೀಡುವ ವಿಚಾರವಾಗಿ ಇಬ್ಬರು ನೌಕರರ(employees) ನಡುವೆ ಶುರುವಾದ ಜಗಳ ಭೀಕರ ಕೊಲೆಯಲ್ಲಿ (murder) ಅಂತ್ಯವಾಗಿದೆ. ಸಹೋದ್ಯೋಗಿ ಯುವತಿಗೆ ಸ್ವಜನ ಪಕ್ಷಪಾತ ಮಾಡಿ ಹೆಚ್ಚಿನ ಸಂಬಳ ನೀಡುತ್ತಿದ್ದೀಯಾ ಎಂದು ಆರೋಪಿಸಿ ಸೂಪರ್ ವೈಸರ್ (supervisor) ನ ಕೊಲೆ ಮಾಡಲಾಗಿದೆ.
ಬೆಂಗಳೂರಿನ ಕೊಟ್ಟಿಗೆಪಾಳ್ಯದಲ್ಲಿ ಕೇಶವ್(40) ಎಂಬುವರ ಕೊಲೆಯಾಗಿದೆ. ಕೊಲೆಯಾದ ಕೇಶವ್ ಹಾಗೂ ಆರೋಪಿ ಶಿವಣ್ಣ ಒಟ್ಟಿಗೆ ಮಾಲ್ಗುಡಿ ಫಾರ್ಮ್ಸ್ ನಲ್ಲಿ ಕೆಲಸ ಮಾಡುತ್ತಿದ್ದರು. ಕೇಶವ್ ಸೂಪರ್ ವೈಸರ್ ಆಗಿದ್ದರೆ, ಶಿವಣ್ಣ ಸಾಮಾನ್ಯ ನೌಕರನಾಗಿದ್ದ.
2/ 5
ಸೂಪರ್ ವೈಸರ್ ಕೇಶವ್ ಮಾಲ್ಗುಡಿ ಫಾರ್ಮ್ಸ್ ನಲ್ಲಿ ನೌಕರರಿಗೆ ಸಂಬಳ ನಿರ್ಧರಿಸುವ ಅಧಿಕಾರದಲ್ಲಿದ್ದರು. ಸಂಬಳ ವಿಚಾರವಾಗಿ ಇಬ್ಬರು ಮದ್ಯಪಾನ ಮಾಡುವಾಗ ಮಾತನಾಡಿಕೊಂಡಿದ್ದಾರೆ. ನಿನಗೆ ಬೇಕಾದ ಯುವತಿಗೆ ಹೆಚ್ಚಿನ ಸಂಬಳ ಕೊಟ್ಟಿದ್ದೀಯಾ ಎಂದು ಕೇಶವ್ ವಿರುದ್ಧ ಶಿವಣ್ಣ ಅಸಮಾಧಾನ ವ್ಯಕ್ತಪಡಿಸಿದ್ದನು.
3/ 5
ನಿನಗೆ ಬೇಕಾದವರಿಗೆ ಬೇಕಾದಂತೆ ಸಂಬಳ, ವಿನಾಯ್ತಿಗಳನ್ನು ನೀಡುತ್ತಿದ್ದೀಯಾ ಎಂದು ಶಿವಣ್ಣ ಕೂಗಾಡಿದ್ದಾನೆ. ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ. ಈ ವೇಳೆ ಮದ್ಯದ ನಶೆಯಲ್ಲಿ ಸೂಪರ್ ವೈಸರ್ ಕೇಶವ್ ನನ್ನು ನೌಕರ ಶಿವಣ್ಣ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ( photo: ಆರೋಪಿ ಶಿವಣ್ಣ)
4/ 5
ಅಕ್ಟೋಬರ್ 29ರ ರಾತ್ರಿ ಸುಮಾರು 9 ಗಂಟೆ ಸಮಯದಲ್ಲಿ ಕೊಲೆ ನಡೆದಿದೆ. ಕೇಶವ್ ಹೊಟ್ಟೆಗೆ ಶಿವಣ್ಣ ಚಾಕು ಇರಿಯುತ್ತಲೇ ಕೇಶವ್ ಕುಸಿದು ಬಿದ್ದಿದ್ದರು. ನಂತರ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. (photo: ಕೊಲೆಯಾದ ಕೇಶವ್)
5/ 5
ಸದ್ಯ ಆರೋಪಿ ಶಿವಣ್ಣ@ ರಾಜೇಶ್ ನನ್ನು ವಶಕ್ಕೆ ಪಡೆದ ಪೊಲೀಸರು, ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.