ಕುಂಬಳಗೋಡಿನ ಕಣಿಮಿಣಿಕೆ ಬಳಿ ನಡೆದ ಭೀಕರ ಅಪಘಾತದಲ್ಲಿ ಒಟ್ಟು 6 ಮಂದಿ ಮೃತಪಟ್ಟಿದ್ದಾರೆ.
2/ 5
ಜಲ್ಲಿ ತುಂಬಿದ್ದ ಲಾರಿ ಪಲ್ಟಿಯಾಗಿ ಅಪಘಾತ ಸಂಭವಿಸಿದೆ. ಎರಡು ಕಾರು, ಒಂದು ಬೈಕ್ ಮೇಲೆ ಲಾರಿ ಬಿದ್ದಿದ್ದರಿಂದ ದುರಂತ ಸಂಭವಿಸಿದೆ.
3/ 5
ಕಾರಿನಲ್ಲಿದ್ದ ನಾಲ್ವರೂ ಮೃತಪಟ್ಟಿದ್ದಾರೆ. ಮೃತರನ್ನು ನಿಖಿತಾ ರಾಣಿ (29), ವೀಣಮ್ಮ(42), ಇಂದ್ರಕುಮಾರ್ (14), ಕೀರ್ತಿಕುಮಾರ್ (40) ಎಂದು ಗುರುತಿಸಲಾಗಿದೆ. ಟೊಯೋಟಾ ಕಂಪೆನಿಯ ಸಿಬ್ಬಂದಿ ಟಿ.ಜೆ ಶಿವಪ್ರಕಾಶ್ ಹಾಗೂ ಬೈಕ್ ನಲ್ಲಿದ್ದ ಜಿತಿನ್ ಬಿ. ಜಾರ್ಜ್ ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
4/ 5
ರಸ್ತೆ ಕಾಮಗಾರಿಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ವೇಗವಾಗಿ ಬಂದ ಲಾರಿ ರಸ್ತೆ ಕಾಮಗಾರಿ ನಡೆಯುತ್ತಿದ್ದರಿಂದ ಕಂಟ್ರೋಲ್ ತಪ್ಪಿ ಪಲ್ಟಿಯಾಗಿದೆ.
5/ 5
ಕುಂಬಳಗೊಡು ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಅಪಘಾತದಿಂದಾಗಿ ಕಿಲೋಮೀಟರ್ ಗಟ್ಟಲೇ ಟ್ರಾಫಿಕ್ ಜಾಮ್ ಆಗಿದೆ.