3 Diamond Rings ಸುತ್ತ ಅಪರಾಧದ ಕಥೆ; ದಿಢೀರ್ ಶ್ರೀಮಂತನಾಗಲು ಹೊರಟವನು ಕಂಬಿ ಹಿಂದೆ!
Bengaluru Crime News: ಸಿಲಿಕಾನ್ ಸಿಟಿಯ ಶ್ರೀಮಂತರು ಆಗಮಿಸುವ ಸ್ಥಳದಲ್ಲಿ ಆತ ಸೆಕ್ಯೂರಿಟಿ ಗಾರ್ಡ್(Security Guard). ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗ್ರಾಮೀಣ ಭಾಗದ ಆತ ಶ್ರೀಮಂತರ ಐಷಾರಾಮಿ ಜೀವನವನ್ನು ಹತ್ತಿರದಿಂದ ಕಂಡು ಬೆರಗಾಗಿದ್ದ. ತಾನು ಅವರಂತೆ ದಿಢೀರ್ ಶ್ರೀಮಂತನಾಗಬೇಕೆಂದು ಕನಸು ಕಂಡವನು ಹಿಡಿದ್ದಿದ್ದು ಮಾತ್ರ ಅಡ್ಡ ದಾರಿ.
ನಂದಿಬೆಟ್ಟದ ಬಳಿಯ ನಂದಿಗ್ರಾಮದ ಮಂಜುನಾಥ್ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ದಿಢೀರ್ ಶ್ರೀಮಂತನಾಗುವ ಹುಚ್ಚಿಗೆ ಬಿದ್ದು ಕಳ್ಳತನಕ್ಕೆ ಇಳಿದಿದ್ದ. 3 ತಿಂಗಳುಗಳ ಹಿಂದೆ ದೇವನಹಳ್ಳಿ ಸಮೀಪದ ವಿಶ್ವನಾಥಪುರದಲ್ಲಿರುವ ಟೆಕ್ಕಿಯೊಬ್ಬರ ವಿಲ್ಲಾದಲ್ಲಿ 3 ವಜ್ರದ ಉಂಗುರಗಳನ್ನು ಕಳ್ಳತನ ಮಾಡಿದ್ದ.
2/ 5
ಮಂಜುನಾಥ್ ಆಗಸ್ಟ್ 20 ರಂದು ರಾತ್ರಿ ಕಿಟಕಿಯ ಮೂಲಕ ವಿಲ್ಲಾಕ್ಕೆ ನುಸುಳಿ, ಮಲಗುವ ಕೋಣೆಯಲ್ಲಿನ ಕಬೋರ್ಡ್ ಡ್ರಾಯರ್ ನಲ್ಲಿದ್ದ ಉಂಗುರಗಳನ್ನು ಜೇಬಿಗಿಳಿಸಿದ್ದ.
3/ 5
ನಾಗರಭಾವಿಯ ಮೊಬೈಲ್ ಅಂಗಡಿಯೊಂದರಲ್ಲಿದ್ದಾಗ ಅನುಮಾನಗೊಂಡ ಪೊಲೀಸರು ಮಂಜುನಾಥನನ್ನು ವಶಕ್ಕೆ ಪಡೆದು ವಿಚಾರಿಸಿದ್ದರು. ನಂದಿಗ್ರಾಮದಲ್ಲಿದ್ದ ಮಂಜುನಾಥನ ಮನೆಯಲ್ಲಿ ಶೋಧ ನಡೆಸಿದಾಗ 22 ಲಕ್ಷ ಮೌಲ್ಯದ ಮೂರು ವಜ್ರದ ಉಂಗುರಗಳು ಪತ್ತೆಯಾಗಿವೆ.
4/ 5
ಟೆಕ್ಕಿಯೊಬ್ಬರಿಗೆ ಸೇರಿದ್ದ ಉಂಗುರಗಳು ಪತ್ತೆಯಾಗಿವೆ. ಇವುಗಳನ್ನು ಒಂದು ಉಂಗರವನ್ನು ಟೆಕ್ಕಿ ತಮ್ಮ ಪತ್ನಿಗೆ ಪ್ಯಾರಿಸ್ ನ ಐಫೆಲ್ ಟವರ್ ಬಳಿ ಮದುವೆಗೆ ಪ್ರಪೋಸ್ ಮಾಡಿ ರಿಂಗ್ ತೊಡಿಸಿದ್ದರು. (ಪ್ರಾತಿನಿಧಿಕ ಚಿತ್ರ)
5/ 5
ಈಗ ಮೂರು ಉಂಗುರಗಳು ಮರಳಿ ಪಡೆದಿರುವುದಕ್ಕೆ ಟೆಕ್ಕಿ ದಂಪತಿ ಸಂತಸ ವ್ಯಕ್ತಪಡಿಸಿದ್ದಾರೆ. ಮದುವೆ ಸಂದರ್ಭದ ಉಂಗುರಗಳೊಂದಿಗೆ ನಮಗೆ ಭಾವನಾತ್ಮಕ ನೆನಪುಗಳಿದ್ದವು ಎಂದು ತಿಳಿಸಿದ್ದಾರೆ. ಅನ್ನಪೂರ್ಣೇಶ್ವರಿನಗರ ಪೊಲೀಸರು ಆರೋಪಿ ಮಂಜುನಾಥನನ್ನು ಬಂಧಿಸಿದ್ದಾರೆ.