PSI Recruitment Scam: 54 ಸಾವಿರ ಅಭ್ಯರ್ಥಿಗಳಿಗೆ ಪಿಎಸ್ಐ ಮರು ಪರೀಕ್ಷೆ: ಅಕ್ರಮ ನಡೆದಿರೋದನ್ನ ಒಪ್ಪಿಕೊಂಡ ಸರ್ಕಾರ
ಇಂದು ಸುದ್ದಿಗೋಷ್ಠಿ ನಡೆಸಿದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಪಿಎಸ್ಐ ನೇಮಕಾತಿಗೆ ಮರು ಪರೀಕ್ಷೆ ನಡೆಸಲಾಗುವುದು ಎಂದು ಹೇಳಿದರು. ಒಂದಕ್ಕಿಂತ ಹೆಚ್ಚು ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ನಡೆದಿದ್ದು, ಬಂಧಿತರನ್ನು ಹೊರತುಪಡಿಸಿ 54 ಸಾವಿರ ಜನರಿಗೆ ಮರು ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ.
ಪರೀಕ್ಷೆ ಅವ್ಯವಹಾರ ಹಿನ್ನೆಲೆ ಕಠಿಣ ನಿಯಮಗಳ ಜಾರಿಗೆ ಸರ್ಕಾರ ಚಿಂತನೆ ನಡೆಸಿದೆ. ಪಿಎಸ್ಐ ಮರು ಪರೀಕ್ಷೆ ಸದ್ಯದಲ್ಲೆ ನಡೆಯಲಿದೆ ಎಂದು ಗೃಹ ಸಚಿವರು ಮಾಹಿತಿ ನೀಡಿದರು.
2/ 8
ಇವರ ಅವ್ಯವಹಾರದಿಂದ ಸೆಲೆಕ್ಟ್ ಆದವರಿಗೆ ಅನ್ಯಾಯ ಆಗಿದೆ. ಹಾಗಾಗಿ ಮರು ಪರೀಕ್ಷೆಗೆ ಅವಕಾಶ ಕೊಟ್ಟಿದೆ. ಕಾಂಗ್ರೆಸ್ ನ ಸೀನಿಯರ್ ಲೀಡರ್ ಅಪರಾಧಿಗಳಿಗೆ ಕಿಟ್ ಕೊಟ್ಟಿದ್ದು ಜನಸಾಮಾನ್ಯರಲ್ಲಿ ತಪ್ಪು ಸಂದೇಶ ನೀಡಿದಂತಾಗಿದೆ ಎಂದರು.
3/ 8
ಪಿಎಸ್ಐ ಪರೀಕ್ಷೆಗೆ ಕಡಿಮೆ ಕೇಂದ್ರಗಳನ್ನು ತೆರೆದು ಜಾಮರ್ ಹಾಕಲು ಚಿಂತನೆ ನಡೆಸಲಾಗಿದೆ. ಹೊಸ ತಂತ್ರಜ್ಞಾನ ನಿರ್ಬಂಧ ಮಾಡೋ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು. ದೊಡ್ಡ ಎಕ್ಸಾಮ್ ಸೆಂಟರ್ ಮಾಡಲಾಗುವುದು. (ಸಾಂದರ್ಭಿಕ ಚಿತ್ರ)
4/ 8
ಪಿಎಸ್ಐ ಪರೀಕ್ಷೆ ಅಕ್ರಮದಲ್ಲಿ ಯಾರೇ ದೊಡ್ಡ ದೊಡ್ಡವರಿದ್ದರು ಕ್ರಮ ಕೈಗೊಳ್ಳಲಾಗುವುದು. ಪಾರದರ್ಶಕವಾಗಿ ಎಕ್ಸಾಮ್ ನಡೆಸಲಾಗುವುದು. ಯಾರೂ ಆತ್ಮ ವಿಶ್ವಾಸ ಕಳೆದು ಕೊಳ್ಳಬಾರದು ಎಂದು ಅಭ್ಯರ್ಥಿಗಳಿಗೆ ಹೇಳಿದರು. (ಸಾಂದರ್ಭಿಕ ಚಿತ್ರ)
5/ 8
ಎಕ್ಷಾಮ್ ಪೊಲೀಸ್ ಇಲಾಖೆ ನಡೆಸೋದಾ ಅಥವಾ ಯಾರು ನಡೆಸೋದು ಅನ್ನೋದನ್ನ ಮುಂದೆ ನಿರ್ಧಾರ ಮಾಡಲಾಗುವುದು. ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು. (ಸಾಂದರ್ಭಿಕ ಚಿತ್ರ)
6/ 8
ಸಿಐಡಿ ರಿಪೋರ್ಟ್ ನಿಂದ ಮರು ಪರೀಕ್ಷೆ ಮಾಡಲಿಕ್ಕೆ ನಿರ್ಧಾರ ಮಾಡಿದಲ್ಲ. ಕೆಲವರಿಗೆ ಇದರಿಂದ ಅನ್ಯಾಯ ಆಗಲಿದೆ. ಇದು ನೋವಿನ ವಿಚಾರ. ಅವರಿಗೂ ಮರು ಪರೀಕ್ಷೆಗೆ ಅವಕಾಶ ಮಾಡಿಕೊಡಲಾಗುವುದು ಎಂದರು. (ಸಾಂದರ್ಭಿಕ ಚಿತ್ರ).
7/ 8
ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಬಂಧಿಸಲಾಗಿದೆ. ಇವರ ಜೊತೆಯಲ್ಲಿಯೇ ಅರ್ಚನಾ, ದಿವ್ಯಾ ಚಾಲಕ ಸದ್ದಾಂ ಮತ್ತು ಸುನಂದಾ ಎಂಬವರನ್ನು ಪುಣೆಯಲ್ಲಿ ವಶಕ್ಕೆ ಪಡೆಯಲಾಗಿದೆ.
8/ 8
ಬೆಂಗಳೂರಿನ ಸೆಂಟರ್ ನಲ್ಲೂ ಅಕ್ರಮ ನಡೆದಿರುವ ಅನುಮಾನಗಳು ವ್ಯಕ್ತವಾಗಿವೆ. ಹಾಗಅಗಿ ಸರ್ಕಾರ ಇಡೀ ಪರೀಕ್ಷೆಯನ್ನ ರದ್ಧುಪಡಿಸಿದೆ. 54,289 ಅಭ್ಯರ್ಥಿಗಳು ಪರೀಕ್ಷೆಗೆ ಕುಳಿತಿದ್ದರು. ಇವರೆಲ್ಲರಿಗೂ ಮತ್ತೊಮ್ಮೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ.