ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣ ಸಂಬಂಧ ಸಿಐಡಿ ಅಧಿಕಾರಿಗಳು ಮತ್ತೊಮ್ಮೆ ಅಂದರೆ ಎರಡನೇ ಬಾರಿ ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೆ ನೋಟಿಸ್ ನೀಡಿದ್ದಾರೆ. ಬುಧವಾರ ಸಂಜೆ ಪ್ರಿಯಾಂಕ್ ಖರ್ಗೆ ಕಚೇರಿಗೆ ತೆರಳಿ ನೋಟಿಸ್ ನೀಡಲಾಗಿದೆ.
ಪಿಎಸ್ಐ ಅಕ್ರಮ ಸಂಬಂಧ ಆಡಿಯೋ ಪ್ರಿಯಾಂಕ್ ಖರ್ಗೆ ಕ್ಲಿಪ್ ಬಿಡುಗಡೆ ಮಾಡಿದ್ದರು. ಆಡಿಯೋ ಕ್ಲಿಪ್ ಸಂಬಂಧ ತಮ್ಮ ಬಳಿ ಕೆಲವು ಸಾಕ್ಷ್ಯಗಳು ಇರುವ ಬಗ್ಗೆ ಪ್ರಸ್ತಾಪ ಮಾಡಿದ್ದರು.
2/ 8
ಈ ಹಿನ್ನೆಲೆ ತಮ್ಮ ಹೇಳಿಕೆಗೆ ಸಂಬಂಧಿಸಿದಂತೆ ಸಾಕ್ಷ್ಯ ಒದಗಿಸುವಂತೆ ಸಿಐಡಿ ಸೂಚನೆ ನೀಡಿದೆ. ಎರಡು ದಿನಗಳ ಒಳಗೆ ತನಿಖಾಧಿಕಾರಿ ಮುಂದೆ ಹಾಜರಾಗಲು ನೋಟಿಸ್ ನೀಡಿದ್ದಾರೆ. ಇಂದು ಅಥವಾ ನಾಳೆಯೊಳಗೆ ಸಿಐಡಿ ಕಚೇರಿಗೆ ಹಾಜರಾಗಲು ನೋಟಿಸ್ ನೀಡಲಾಗಿದೆ.
3/ 8
ಪಿಎಸ್ಐ ನೇಮಕಾತಿ ಅಕ್ರಮ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ತಾವು ಹೇಳಿರುವ ವಿಚಾರಗಳು ಚರ್ಚೆಗೆ ಗ್ರಾಸವಾಗಿದೆ. ಈ ಹಿನ್ನೆಲೆ ಪಿಎಸ್ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದ ಸಾಕ್ಷ್ಯಗಳು, ದಾಖಲೆಗಳನ್ನ ಒದಗಿಸುವಂತೆ ಸಿಐಡಿ ಸೂಚಿಸಿದೆ.
4/ 8
ಇಂದು ಅಥವಾ ನಾಳೆ ಬೆಂಗಳೂರಿನ ಕಾರ್ಲ್ ಟನ್ ಭವನದ ಸಿಐಡಿ ಕಚೇರಿಯಲ್ಲಿ ಡಿವೈಎಸ್ ಪಿ ನರಸಿಂಹಮೂರ್ತಿ ಮುಂದೆ ಹಾಜರಾಗಲು ನೋಟಿಸ್ ನಲ್ಲಿ ತಿಳಿಸಲಾಗಿದೆ.
5/ 8
ಮೊದಲ ಬಾರಿಗೆ ನೋಟಿಸ್ ನೀಡಿದ್ದಾಗ ಪ್ರಿಯಾಂಕ್ ಖರ್ಗೆ ಅವರು ವಕೀಲರ ಸಲಹೆ ಮೇರೆಗೆ ಲಿಖಿತ ರೂಪದಲ್ಲಿ ತಮ್ಮ ಹೇಳಿಕೆ ದಾಖಲಿಸಿದ್ರು.
6/ 8
ಕಲಬುರಗಿ ಜ್ಞಾನಜ್ಯೋತಿ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ವಿಚಾರ ಹಿನ್ನೆಲೆ ಪರೀಕ್ಷೆಯ ಇನ್ ಚಾರ್ಜ್ ಆಗಿ ವೈಫಲ್ಯ ಹಾಗೂ ಕರ್ತವ್ಯ ಲೋಪ ಕಂಡ ಬಂದಿದ್ದರಿಂದ ಇಬ್ಬರು ಪೊಲೀಸ್ ಅಧಿಕಾರಿಗಳ ಅಮಾನತುಗೊಳಿಸಿ ಡಿಜಿ/ಐಜಿಪಿ ಆದೇಶ ಹೊರಡಿಸಿದ್ದಾರೆ.
7/ 8
ಡಿವೈಎಸ್ ಪಿ ಆರ್ ಆರ್ ಹೊಸಮನಿ ಮತ್ತು ಇನ್ಸ್ ಪೆಕ್ಟರ್ ದಿಲೀಪ್ ಸಾಗರ್ ಇಬ್ಬರನ್ನು ಅಮಾನತು ಮಾಡಲಾಗಿದೆ. ಡಿವೈಎಸ್ ಪಿ ಹೊಸಮನಿ ಫಿಂಗರ್ ಪ್ರಿಂಟ್ ವಿಭಾಗದಲ್ಲಿ ಸದ್ಯ ಕಾರ್ಯ ನಿರ್ವಹಿಸ್ತಿದ್ದಾರೆ. ಕಲಬುರಗಿ ಮಹಿಳಾ ಠಾಣೆಯ ಇನ್ಸ್ ಪೆಕ್ಟರ್ ಆಗಿದ್ದ ದಿಲೀಪ್ ಸಾಗರ್ ಕಾರ್ಯ ನಿರ್ವಹಿಸುತ್ತಿದ್ದಾರೆ.
8/ 8
ಇತ್ತ ಅಸಿಸ್ಟೆಂಟ್ ಫ್ರೊಫೆಸರ್ ಪ್ರಶ್ನೆಪತ್ರಿಕೆ ಲೀಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಪ್ರೊ, ನಾಗರಾಜ್ ಅಮಾನತುಗೊಳಿಸಿ ಮೈಸೂರು ವಿವಿ ಕುಲಸಚಿವರು ಆದೇಶ ಹೊರಡಿಸಿದ್ದಾರೆ. ಪ್ರಶ್ನೆ ಪತ್ರಿಕೆ ಲೀಕ್ ಪ್ರಕರಣದಲ್ಲಿ ಪ್ರೊ, ನಾಗರಾಜ್ ಬಂಧನದಲ್ಲಿದ್ದಾರೆ..