Bengaluru ನಗರದಲ್ಲಿ ಮಿತಿ ಮೀರಿದ ಗಾಂಜಾ ಘಾಟು: ತಿಂಡಿಗಳ ಪ್ಯಾಕ್ ಒಳಗೆ Drugs ಇಟ್ಟು ಮಾರಾಟ..!
ಬೆಂಗಳೂರು: ದಿನ ಕಳೆದಂತೆ ಸಿಲಿಕಾನ್ ಸಿಟಿಯಲ್ಲಿ ಗಾಂಜಾ ಘಾಟು ಜೋರಾಗೇ ಅಬ್ಬರಿಸ್ತಿದೆ. ಕೆಜಿಗಟ್ಟಲೇ ಮಾದಕ ವಸ್ತುವನ್ನು ಸುಲಭವಾಗಿ ಸಾಗಿಸುತ್ತಿದ್ದ, ಮಾರಾಟ ಮಾಡುತ್ತಿದ್ದ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ.
ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ 8 ಲಕ್ಷ ಬೆಲೆಬಾಳುವ 7 ಕೆಜಿ ಗಾಂಜಾವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ತಿಂಡಿ ಹಾಗೂ ದಿನ ಬಳಕೆ ವಸ್ತು ಪ್ಯಾಕೆಟ್ ನಲ್ಲಿಟ್ಟು ಗಾಂಜಾ ಸಪ್ಲೈ ಮಾಡ್ತಿದ್ದ ಆರೋಪಿಯನ್ನು ಬಂಧಿಸಲಾಗಿದೆ.
2/ 7
ಒರಿಸ್ಸಾ ಮೂಲದ ಆರೋಪಿ ಗಾಂಜಾವನ್ನು 5, 10 ,29 ಗ್ರಾಂ ತೂಕದ ಪೊಟ್ಟಣಗಳನ್ನಾಗಿ ಮಾಡಿ ಮಾರಾಟ ಮಾಡ್ತಿದ್ದ. ಉತ್ತರ ಭಾರತ ಮೂಲದ ಕೂಲಿ ಕಾರ್ಮಿಕರಿಗೆ ಹಾಗೂ ಹಳೇ ಗಿರಾಕಿಗಳಿಗೆ ಸಪ್ಲೈ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
3/ 7
5 ಗ್ರಾಂ 500 ರೂ. , 10 ಗ್ರಾಂಗೆ 1 ಸಾವಿರ, 20 ಗ್ರಾಂ ಗೆ 2 ಸಾವಿರದಂತೆ ಮಾರಾಟ ಆರೋಪಿಯಿಂದ ಒಟ್ಟಾರೆ 8 ಲಕ್ಷ ಬೆಲೆಬಾಳುವ 7 ಕೆಜಿ ಗಾಂಜಾ, ತೂಕದ ಯಂತ್ರ, ಒಂದು ಮೊಬೈಲ್ ಅನ್ನು ವಶಕ್ಕೆ ಪಡೆಯಲಾಗಿದೆ. ಮೈಕೋಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಸಾಂದರ್ಭಿಕ ಚಿತ್ರ)
4/ 7
ಸಿಸಿಬಿ ಪೊಲೀಸರ ಮತ್ತೊಂದು ಕಾರ್ಯಾಚರಣೆಯಲ್ಲಿ ಗಾಂಧಿ ನಗರದ ಮೂಡ್ ಲೈವ್ ಬ್ಯಾಂಡ್ ಮೇಲೆ ದಾಳಿ ನಡೆಸಿದ್ದಾರೆ. ಕಳೆದ ರಾತ್ರಿ 11.30ಕ್ಕೆ ಸಿಸಿಬಿ ಇನ್ಸ್ ಪೆಕ್ಟರ್ ಮಹ್ಮದ್ ಸಿರಾಜ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
5/ 7
ಅಕ್ರಮವಾಗಿ ಹುಡುಗಿಯರನ್ನು ಕರೆತಂದ ಲೈವ್ ಬ್ಯಾಂಡ್ ನಡೆಸಿದ ಆರೋಪದ ಮೇಲೆ ದಾಳಿ ನಡೆಸಲಾಯಿತು. ದಾಳಿ ವೇಳೆ 58 ಡ್ಯಾನ್ಸ್ ಗರ್ಲ್ಸ್ ಗಳು ಪತ್ತೆಯಾಗಿದ್ದು, ಸುಮಾರು 75 ಗ್ರಾಹಕರು ಲೈವ್ ಬ್ಯಾಂಡ್ ನಲ್ಲಿ ಇದ್ರು.
6/ 7
ಜಂಟಿ ಪೊಲೀಸ್ ಆಯುಕ್ತ ರಮನ್ ಗುಪ್ತ ಆದೇಶ ಹಿನ್ನಲೆ ಎಲ್ಲಾ ಲೈವ್ ಬ್ಯಾಂಡ್ ಕ್ಲೋಸ್ ಮಾಡಲಾಗಿತ್ತು. ಆದರೆ ಅಕ್ರಮವಾಗಿ ಲೈವ್ ಬ್ಯಾಂಡ್ ನಡೆಸುತ್ತಿದ್ದ ಬ್ಯಾಂಡ್ ಮೇಲೆ ದಾಳಿ ನಡೆಸಿ ಕೆಪಿ ಆಕ್ಟ್ ಅಡಿ ಉಪ್ಪಾರಪೇಟೆ ಪೊಲೀಸರ ಪ್ರಕರಣ ದಾಖಲಿಸಿದ್ದಾರೆ.
7/ 7
2 ದಿನಗಳ ಹಿಂದೆ ಐಷಾರಾಮಿ ಕಾರುಗಳನ್ನು ಕದ್ದು ಬೇರೆ ರಾಜ್ಯಗಳಲ್ಲಿ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬೇಗೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಹಾಗೂ ಬಂಧಿತರಿಂದ 1 ಕೋಟಿ 55 ಲಕ್ಷ ರೂ. ಮೌಲ್ಯದ 6 ಇನೋವಾ ಕಾರು, 1 ಟೊಯೋಟಾ ಇಟಿಯೋಸ್ ಕಾರು ಜಪ್ತಿ ಮಾಡಲಾಗಿದೆ.