ಕುಕ್ಕರ್ ನಲ್ಲಿ ಡ್ರೆಗ್ಸ್ ತಯಾರಿಸಿ ವಿದೇಶಗಳಿಗೆ ಮಾರಾಟ ಮಾಡುತ್ತಿರುವ ವಿಷಯ ಬೆಳಕಿಗೆ ಬಂದಿದೆ. ವಾಸವಿದ್ದ ಮನೆಯನ್ನೇ ಡ್ರಗ್ಸ್ ತಯಾರಿಕೆ ಫ್ಯಾಕ್ಟರಿ ಮಾಡಿಕೊಂಡಡಿದ್ದನು.
2/ 5
ಸೋಲದೇವನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯಿಂದ ಸುಮಾರು 1ಕೋಟಿ ಮೌಲ್ಯದ ಡ್ರಗ್ ವಶಕ್ಕೆ ಪಡೆದುಕೊಳ್ಳಲಾಗಿದೆ.
3/ 5
ಕೋಕೇನ್ & ಎಂಡಿಎಂಎ ಹಾಗೂ ಕೆಮಿಕಲ್ಸ್, MDMA ತಯಾರಿಸಲು ಬಳಸುತ್ತಿದ್ದ ರಾಸಾಯನಿಕ & ಕೆಮಿಕಲ್ಸ್ಗಳು, 950 ಗ್ರಾಂ ಕೋಕೇನ್, 50 ಗ್ರಾಂ ಎಂ.ಡಿ.ಎಂ.ಎ ಕ್ರಿಸ್ಟೆಲ್ ವಶಕ್ಕೆ ಪಡೆದುಕೊಳ್ಳಲಾಗಿದೆ.
4/ 5
ಡ್ರಗ್ಸ್ ತಯಾರಿಕೆಗಾಗಿ ಕುಕ್ಕರ್ ಮಾರ್ಪಾಡು ಮಾಡಿಕೊಂಡಿದ್ದನು. ಮನೆಯಲ್ಲಿದ್ದ 2 ಮೊಬೈಲ್ ಫೋನ್, 1 ಡಿಜಿಟಲ್ ತೂಕದ ಯಂತ್ರ, 1 ಹೊಂಡಾ ಡಿಯೋ ಸಹ ವಶಕ್ಕೆ ಪಡೆಯಲಾಗಿದೆ
5/ 5
ಡ್ರಗ್ಸ್ ತಯಾರಿಸಲು ಬೇಕಾದ ವಸ್ತುಗಳನ್ನು ಮುಂಬೈನಿಂದ ತರಿಸಿಕೊಳ್ಳುತ್ತಿದ್ದನು. ಸದ್ಯ ಆರೋಪಿಗಳನ್ನು ಬಂಧಿಸಿ ತನಿಖೆ ಮುಂದುವರಿಸಲಾಗಿದೆ ಎಂದು ಸಿಸಿಬಿ ಜಂಟಿ ಆಯುಕ್ತ ರಮಣ್ ಗುಪ್ತ ಹೇಳಿಕೆ ನೀಡಿದ್ದಾರೆ.