Muzrai Department: ದೇವಸ್ಥಾನದ ಮಳಿಗೆಗಳಲ್ಲಿ ವ್ಯಾಪಾರ ನಡೆಸಲು ಮುಸ್ಲಿಮರಿಗೆ ಅವಕಾಶ ಇಲ್ಲ
ಕರ್ನಾಟಕದ ಮುಜರಾಯಿ ಇಲಾಖೆ 2002ರಲ್ಲಿ ಅಸ್ತಿತ್ವಕ್ಕೆ ಬಂದಿರುವ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುತ್ತಿದೆ. ಈ ನಿಯಮ ಜಾರಿಗೆ ಬಂದ್ರೂ ಅಸ್ತಿತ್ವಕ್ಕೆ ತರಲು ಯಾವ ಸರ್ಕಾರವೂ ಮುಂದಾಗಿರಲಿಲ್ಲ, ಹಿಜಾಬ್ ವಿವಾದ ಬಳಿಕ ಈ ನಿಯಮ ಜಾರಿಗೆ ಹಿಂದೂಪರ ಸಂಘಟನೆಗಳು ಒತ್ತಡ ಹಾಕಿವೆ.
ಮುಜರಾಯಿ ಇಲಾಖೆಗೆ ವ್ಯಾಪ್ತಿಗೆ ಒಳಪಡುವ ದೇವಾಲಯಗಳಲ್ಲಿ ಹಿಂದೂಯೇತರರಿಗೆ ವ್ಯಾಪಾರಕ್ಕೆ ಅವಕಾಶ ನೀಡದಿರಲು ನಿರ್ಧರಿಸಿದೆ. ಇನ್ನೂ ವ್ಯಾಪಾರ ಮಳಿಗೆ ಹರಾಜಿನಲ್ಲಿಯೂ ಹಿಂದೂಯೇತರರು ಭಾಗವಹಿಸುವಂತಿಲ್ಲ ಎಂದು ಇಲಾಖೆ ಸ್ಙಷ್ಟನೆ ನೀಡಿದೆ.
2/ 8
2002ರಲ್ಲಿ ಜಾರಿಗೆ ಬಂದ ನಿಯಮಗಳನ್ನೇ ಗಮನದಲ್ಲಿಟ್ಟುಕೊಂಡು ಮಳಿಗೆಗಳ ಹರಾಜು ನಡೆಸಲು ಇಲಾಖೆ ನಿರ್ಧರಿಸಿದೆ. ಮಳಿಗೆಯನ್ನು ಹರಾಜಿನಲ್ಲಿ ಪಡೆದ ವ್ಯಕ್ತಿಯನ್ನು ಅದನ್ನು ಅನ್ಯಧರ್ಮಿಯರಿಗೆ ಒಳ ಗುತ್ತಿಗೆ ನೀಡುವಂತಿಲ್ಲ. ಒಂದು ವೇಳೆ ಒಳಗುತ್ತಿಗೆ ನೀಡಿದ್ರೆ ಆತನ ಅನುಮತಿಯನ್ನು ರದ್ದುಗೊಳಿಸಲಾಗುತ್ತದೆ.
3/ 8
ಈ ಸಂಬಂಧ ಹರಾಜಿಗೆ ಸಿದ್ಧವಾಗಿರುವ 48 ದೇವಸ್ಥಾನಗಳ ಮಳಿಗೆಗಳಿಗೆ ನೋಟಿಸ್ ಸಹ ನೀಡಲಾಗಿದೆ. ಬೆಂಗಳೂರಿನ ಮಲ್ಲೇಶ್ವರಂನ ಕಾಡು ಮಲ್ಲೇಶ್ವರ, ಕಾಶಿ ವಿಶ್ವನಾಥನ ದೇವಸ್ಥಾನ, ಸೋಮೇಶ್ವರ ದೇವಸ್ಥಾನ, ಬಳಪೇಟೆಯ ಬಂಡಿ ಶೇಷಮ್ಮ ಸೇರಿದಂತೆ ವಿವಿಧ ದೇಗುಲದ ಮಳಿಗೆಗಳಿಗೆ ನೋಟಿಸ್ ನೀಡಲಾಗಿದೆ.
4/ 8
ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ನಿಯಮಗಳ ನಿಬಂಧನೆಯ ಪ್ರಕಾರ, ಮುಜರಾಯಿ ಇಲಾಖೆಯು, ಹಿಂದೂಯೇತರರಿಗೆ ಅಂಗಡಿಗಳನ್ನು ನೀಡಲ್ಲ.
5/ 8
ಗುತ್ತಿಗೆ ಪಡೆದ ಸ್ವತ್ತನ್ನು ನೀಡಲಾಗಿರುವ ಉದ್ದೇಶಕ್ಕೆ ಮಾತ್ರ ಬಳಸಬೇಕು. ಗುತ್ತಿಗೆ ಅವಧಿಯಲ್ಲಿ ಬೇರೆ ಯಾರಿಗೂ ಒಳಗುತ್ತಿಗೆ ನೀಡುವಂತಿರಲ್ಲ. ಗುತ್ತಿಗೆ ನೀಡಿರುವ ಮಳಿಗೆಯಲ್ಲಿ ಬಾರ್, ಮದ್ಯದಂಗಡಿ, ಲೈವ್ ಬ್ಯಾಂಡ್ ನಡೆಸುವಂತಿಲ್ಲ ಎಂಬ ನಿಯಮವಿದೆ.
6/ 8
ಗುತ್ತಿಗೆದಾರನು ದೇವಸ್ಥಾನದ ಭಕ್ತರ ಭಾವನೆಗಳಿಗೆ ನೋವುಂಟು ಮಾಡಬಾರದು, ಜೊತೆಗೆ ದೇವಸ್ಥಾನದ ಪಾವಿತ್ರತ್ಯಗೆ ಧಕ್ಕೆ ಉಂಟಾಗದಂತೆ ಯಾವುದೇ ಚಟುವಟಿಕೆ ನಡೆಸುವಂತಿಲ್ಲ ಎಂಬ ನಿಯಮಗಳು ಇವೆ.
7/ 8
ಹಿಜಾಬ್ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದ ಬಳಿಕ ಮುಸ್ಲಿಂ ಸಂಘಟನೆಗಳು ಕರ್ನಾಟಕ ಬಂದ್ ಗೆ ಕರೆ ನೀಡಿದ್ದವು. ಬಂದ್ ಬೆಂಬಲಿಸಿ ಮುಸ್ಲಿಂ ವ್ಯಾಪಾರಸ್ಥರು ಅಂಗಡಿಗಳನ್ನು ಮುಚ್ಚಿದ್ದರು.
8/ 8
ಬಂದ್ ಬೆಂಬಲಿಸಿ ಅಂಗಡಿ ಮುಚ್ಚಿದ್ದರಿಂದ ಹಿಂದೂ ಸಂಘಟನೆಗಳು ದೇವಾಲಯದ ಆವರಣದಲ್ಲಿ ಹಿಂದೂಗಳಿಲ್ಲದ ವ್ಯಾಪಾರಿಗಳಿಗೆ ಅನುಮತಿ ನೀಡಬಾರದು ಎಂಬ ಕೂಗು ರಾಜ್ಯದ ಕರಾವಳಿ ಭಾಗದಿಂದ ಕೇಳಿ ಬಂದಿತ್ತು.