ಸುಪ್ರೀಂ ಕೋರ್ಟ್ ಆದೇಶದ ಅನುಸಾರವಾಗಿ ಮಸೀದಿಗಳು ಇನ್ಮುಂದೆ ಆಜಾನ್ ಕೂಗದಿರಲು ಬೆಂಗಳೂರಿನಲ್ಲಿ ನಿರ್ಧರಿಸಿದೆ. ಈ ಸಂಬಂಧ ಮುಸ್ಲಿಂ ಮುಖಂಡರು ಸಭೆ ನಡೆಸಿದ್ದು, ಅದರಲ್ಲಿ ಇನ್ಮುಂದೆ ಧ್ವನಿ ವರ್ಧಕದ ಮೂಲಕ ಆಜಾನ್ ಕೂಗದಿರಲು ನಿರ್ಧರಿಸಲಾಗಿದೆ.
2/ 8
ಧ್ವನಿ ವರ್ಧಕ ಸಂಬಂಧ ಈಗಾಗಲೇ ರಾಜ್ಯ ಸರ್ಕಾರ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಅದರಂತೆ ಬೆಳಗ್ಗೆ 5 ಗಂಟೆಗೆ ಆಜಾನ್ ಕೂಗದಿರಲು ನಿರ್ಧರಿಸಲಾಗಿದೆ. ಬೆಳಗ್ಗೆ 6 ಗಂಟೆ ಬಳಿಕ ಪೊಲೀಸರ ಅನುಮತಿ ಪಡೆದು ಆಜಾನ್ ಕೂಗಲು ಅನುಮತಿ ಪಡೆಯಲಾಗಿದೆ
3/ 8
ಸುಪ್ರೀಂ ಕೋರ್ಟ್ ತೀರ್ಪಿನಂತೆ ಧಾರ್ಮಿಕ ಸ್ಥಳಗಳಲ್ಲಿ ಧ್ವನಿ ವರ್ಧಕ ಬಳಕೆ ಮಾಡದಂತೆ ಈಗಾಗಲೇ ಸರ್ಕಾರ ಮತ್ತು ಪೊಲೀಸ್ ಇಲಾಖೆ ಮಾರ್ಗಸೂಚಿ ಪ್ರಕಟಿಸಿದೆ,
4/ 8
ಈ ಸಂಬಂಧ ನೋಟಿಸ್ ಜಾರಿ ಮಾಡಿದ್ದರೂ ಕೂಡ ಕೆಲಸ ಮಸೀದಿಗಳಲ್ಲಿ ಆಜಾನ್ ಕೂಗಲಾಗುತ್ತಿತ್ತು. ಈ ಸಂಬಂಧ ಹಿಂದೂ ಸಂಘಟನೆಗಳು ಸರ್ಕಾರಕ್ಕೆ ದೂರು ಸಲ್ಲಿಸಿದ್ದವು.
5/ 8
ಈ ಹಿನ್ನಲೆ ಇನ್ಮೇಲೆ ಧ್ವನಿ ವರ್ದಕ ಬಳಸುವವರು 15 ದಿನಗಳ ಒಳಗೆ ಅನುಮತಿಯನ್ನು ಕಡ್ಡಾಯವಾಗಿ ಪಡೆಯಬೇಕು ಎಂದು ಸರ್ಕಾರ ಆದೇಶ ಮಾಡಿತ್ತು.
6/ 8
ಅಲ್ಲದೇ, ರಾತ್ರಿ 10ರಿಂದ ಬೆಳಗ್ಗೆ 6 ಗಂಟೆವರೆಗೆ ಧ್ವನಿವರ್ಧಕ ಬಳಸದಂತೆ ಸೂಚನೆ ನೀಢಲಾಗಿತ್ತು. ಈ ಹಿನ್ನಲೆ ಇದೀಗ 6 ಗಂಟೆ ಬಳಿಕ ಮಸೀದಿಗಳನ್ನು ಆಜಾನ್ ಕೂಗಲು ಅನುಮತಿ ನೀಡುವಂತೆ ಮನವಿ ಸಲ್ಲಿಸಲಾಗಿದೆ
7/ 8
ಈ ಸಂಬಂಧ ಮಾತನಾಡಿರುವ ಮುಸ್ಲಿಂ ಸಂಘಟನೆ ಮುಖಂಡ ಮೊಹಮ್ಮದ್ ಷಫಿ-ಸಾ- ಆದಿ, ಬೆಳಗ್ಗೆ 5 ಗಂಟೆಗೆ ಕೂಗುವ ಆಜಾನ್ ಪ್ರಾರ್ಥಿನೆ ಅಲ್ಲ. ಅದು ಪ್ರಾರ್ಥನೆಗೆ ಕರೆಯುವ ಸಂದೇಶ. ಸುಪ್ರೀಂ ಕೋರ್ಟ್ ಆದೇಶದಲ್ಲಿ ಆಜಾನ್ಗೆ ವಿರೋಧ ಇಲ್ಲ.
8/ 8
ಆಜಾನ್ಗೆ ನಾವು ಧ್ವನಿವರ್ಧಕಗ ಮೂಲಕವೇ ಕರೆಯಬೇಕು. ಸರ್ಕಾರದ ಆದೇಶ ಏನಿದೆ ಪಾಲನೆ ಮಾಡುತ್ತೇವೆ. ಆದರೆ, ಆಜಾನ್ಗೆ ತಡೆಯಿಲ್ಲ ಎಂದು ಅವರು ತಿಳಿಸಿದ್ದಾರೆ ಎಂದು ಟಿವಿ 9 ಕನ್ನಡ ವರದಿ ಮಾಡಿದೆ