Bengaluru Crime: ಮಾನವ ಹಕ್ಕುಗಳ ಹೋರಾಟಗಾರನನ್ನು ಅಟ್ಟಾಡಿಸಿ ಕೊಚ್ಚಿ ಕೊಲೆಗೈದ ದುಷ್ಕರ್ಮಿಗಳು

ಬೆಂಗಳೂರು(Bengaluru Crime News): ನಗರದಲ್ಲಿ ಹಾಡಹಗಲೇ ವ್ಯಕ್ತಿಯ ಬರ್ಬರ ಹತ್ಯೆ (Murder) ನಡೆದಿದೆ. ದುಷ್ಕರ್ಮಿಗಳು ಅಟ್ಟಾಡಿಸಿಕೊಂಡು ನಾಗವಾರ (Nagavara) ಬಳಿ ನಡುರಸ್ತೆಯಲ್ಲಿ ಕೊಚ್ಚಿ ಕೊಲೆ ಮಾಡಿದ್ದಾರೆ. ಭೀಕರ ಕೊಲೆಗೆ ಬೆಂಗಳೂರಿಗರು ಬೆಚ್ಚಿ ಬಿದ್ದಿದ್ದಾರೆ.

First published:

  • 15

    Bengaluru Crime: ಮಾನವ ಹಕ್ಕುಗಳ ಹೋರಾಟಗಾರನನ್ನು ಅಟ್ಟಾಡಿಸಿ ಕೊಚ್ಚಿ ಕೊಲೆಗೈದ ದುಷ್ಕರ್ಮಿಗಳು

    ನಾಗವಾರ ರಿಂಗ್ ರಸ್ತೆಯ ಸರ್ವಿಸ್ ರಸ್ತೆಯಲ್ಲಿ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ಮುಕ್ತ ಎಂಬ ಸಂಘಟನೆಯ ಉಪಾಧ್ಯಕ್ಷ ಶ್ರೀಧರ್ ಎಂಬುವರನ್ನು ಕೊಚ್ಚಿ ಕೊಲೆ ಮಾಡಲಾಗಿದೆ. ನಡುರಸ್ತೆಯಲ್ಲಿ ಭೀಕರವಾಗಿ ಕೊಲೆಗೈದು ಆರೋಪಿಗಳು ಪರಾರಿಯಾಗಿದ್ದಾರೆ.

    MORE
    GALLERIES

  • 25

    Bengaluru Crime: ಮಾನವ ಹಕ್ಕುಗಳ ಹೋರಾಟಗಾರನನ್ನು ಅಟ್ಟಾಡಿಸಿ ಕೊಚ್ಚಿ ಕೊಲೆಗೈದ ದುಷ್ಕರ್ಮಿಗಳು

    ಐದು ಜನರ ಗುಂಪಿನಿಂದ ಶ್ರೀಧರ್ ಕೊಲೆ ಆಗಿದೆ. ಮಚ್ಚು ಲಾಂಗುಗಳಿಂದ ಹಲ್ಲೆ ನಡೆಸಿದ ಪರಿಣಾಮ ಸ್ಥಳದಲ್ಲೇ ಶ್ರೀಧರ್ ಪ್ರಾಣ ಬಿಟ್ಟಿದ್ದಾರೆ. ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 35

    Bengaluru Crime: ಮಾನವ ಹಕ್ಕುಗಳ ಹೋರಾಟಗಾರನನ್ನು ಅಟ್ಟಾಡಿಸಿ ಕೊಚ್ಚಿ ಕೊಲೆಗೈದ ದುಷ್ಕರ್ಮಿಗಳು

    ಮೃತ ಶ್ರೀಧರ್ ಬಾಣಸವಾಡಿಯ ರಾಮಸ್ವಾಮಿಪಾಳ್ಯ ನಿವಾಸಿ. ಮಾನವ ಹಕ್ಕು ಮತ್ತು ಭ್ರಷ್ಟಾಚಾರ ಮುಕ್ತ ಎಂಬ ಸಂಘಟನೆಯ ಉಪಾಧ್ಯಕ್ಷರಾಗಿದ್ದರು. ಶ್ರೀಧರ್ ನಾಗವಾರ ಬಳಿ ಬಂದಿದ್ದ ವೇಳೆ ಹಂತಕರ ಗ್ಯಾಂಗ್ ಅಡ್ಯಾಕ್ ಮಾಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 45

    Bengaluru Crime: ಮಾನವ ಹಕ್ಕುಗಳ ಹೋರಾಟಗಾರನನ್ನು ಅಟ್ಟಾಡಿಸಿ ಕೊಚ್ಚಿ ಕೊಲೆಗೈದ ದುಷ್ಕರ್ಮಿಗಳು

    ಗ್ಯಾಂಗ್ ಅಟ್ಯಾಕ್ ಮಾಡುತ್ತಿದ್ದಂತೆ ಶ್ರೀಧರ್ ಕಾರು ಬಿಟ್ಟು ಸರ್ವಿಸ್ ರಸ್ತೆಯಲ್ಲಿ ಓಡಿದ್ದಾರೆ. ಆದರೆ ಬೆನ್ನತ್ತಿದ ದುಷ್ಕರ್ಮಿಗಳು ಶ್ರೀಧರ್ ಅವರನ್ನು ಕೊಂದು ಮುಗಿಸಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 55

    Bengaluru Crime: ಮಾನವ ಹಕ್ಕುಗಳ ಹೋರಾಟಗಾರನನ್ನು ಅಟ್ಟಾಡಿಸಿ ಕೊಚ್ಚಿ ಕೊಲೆಗೈದ ದುಷ್ಕರ್ಮಿಗಳು

    ಹತ್ಯೆ ಕುರಿತು ಡಿಸಿಪಿ ಡಾ.ಶರಣಪ್ಪ ಮಾತನಾಡಿ, ಮಾರಾಕಾಸ್ತ್ರಗಳಿಂದ ಹತ್ಯೆ ಮಾಡಿದ್ದಾರೆ. ಮೃತ ಶ್ರೀಧರ್ ಗಾರ್ಮೆಂಟ್ಸ್ ವ್ಯವಹಾರ ಮಾಡಿಕೊಂಡಿದ್ದರು. ಇಂದು ಹೆಣ್ಣೂರಿನಿಂದ ನಾಗವಾರ ಕಡೆಗೆ ತನ್ನ ಇನ್ನೋವಾ ಕಾರಿನಲ್ಲಿ ಹೋಗ್ತಿದ್ದಾಗ ಐವರು ಕಾರು ಅಡ್ಡಗಟ್ಟಿದ್ದಾರೆ. ಕಾರನ್ನು ಅಲ್ಲಿಯೇ ಬಿಟ್ಟು ಮತ್ತೊಂದು ರಸ್ತೆಗೆ ಶ್ರೀಧರ್ ಓಡಿ ಬಂದಿದ್ದಾರೆ. ಪರಿಚಿತರೇ ಸೇರಿ ಕೊಲೆ ಮಾಡಿರುವ ಶಂಕೆ ಇದೆ.ಹಂತಕರ ಪತ್ತೆಗೆ ಈಗಾಗಲೇ ಎರಡು ವಿಶೇಷ ತಂಡ ರಚನೆ ಮಾಡಲಾಗಿದೆ ಎಂದು ತಿಳಿಸಿದರು. (ಸಾಂದರ್ಭಿಕ ಚಿತ್ರ)

    MORE
    GALLERIES