Bengaluru Crime: ಇಬ್ಬರು ಮಕ್ಕಳ ತಾಯಿಗೆ ಬಾಯ್ಫ್ರೆಂಡ್ ಮೋಹ; ಕಾಟ ತಾಳಲಾರದೆ ಕೊಂದೇ ಬಿಟ್ಟ ಪ್ರಿಯಕರ!
Bengaluru Crime News Today: ಸಿಲಿಕಾನ್ ಸಿಟಿ ಬೆಂಗಳೂರು (Bengaluru) ಎಷ್ಟು ವೇಗವಾಗಿ ಬೆಳೆಯುತ್ತಿದೆಯೋ, ಅಷ್ಟೇ ವೇಗವಾಗಿ ಅಪರಾಧಗಳ ಸಂಖ್ಯೆಯೂ (Crime Rate) ಹೆಚ್ಚಾಗುತ್ತಿದೆ. ಪೊಲೀಸರೇ ಹೇಳುವಂತೆ ಶೇ.99ರಷ್ಟು ಕ್ರೈಂ ಕೇಸ್ ಗಳ (Crime Case) ಹಿಂದೆ ಇರುವ ಸಾಮಾನ್ಯ ಕಾರಣಗಳು ಹೆಣ್ಣು-ಹೊನ್ನು-ಮಣ್ಣು. ಈ ಮೂರು ವಿಷಯಗಳ ಸುತ್ತವೇ ಮನುಷ್ಯ ಕಾನೂನನ್ನು ಮೀರಿ ಅಪರಾಧಿಯಾಗುತ್ತಾನೆ.
ಇಲ್ಲಿ ಆಗಿರುವುದು ಅದೇ. ಇಂದಿನ ಕ್ರೈಂ ನ್ಯೂಸ್ ಇರುವುದು ಹೆಣ್ಣಿನ ಸುತ್ತ, ಗೃಹಿಣಿಯ ಸುತ್ತ, ಅಕ್ರಮ ಸಂಬಂಧದ ಸುತ್ತ. ನಂಬಿ ದೇಹ-ಮನಸ್ಸು ಕೊಟ್ಟಿದವಳು ಅವನಿಂದಲೇ ಹೆಣವಾಗಿದ್ದಳು.
2/ 5
ಬೆಂಗಳೂರಿನಲ್ಲಿ ಪ್ರಿಯಕರನಿಂದಲೇ ಪ್ರಿಯತಮೆಯೆ ಕೊಲೆಯಾಗಿದೆ. ನಗರದ ಪಟ್ಟೆಗಾರಪಾಳ್ಯದಲ್ಲಿ ಗಾಯತ್ರಿ(26) ಎಂಬ ಮಹಿಳೆ ಹೆಣ ಬಿದ್ದಿದೆ. (ಸಾಂದರ್ಭಿಕ ಚಿತ್ರ)
3/ 5
ಮನೆ ಕೆಲಸ ಮಾಡಿಕೊಂಡಿದ್ದ ಗಾಯತ್ರಿಯನ್ನು ಆಕೆಯ ಬಾಯ್ ಫ್ರೆಂಡ್ ಮಂಜುಪ್ರಸಾದ್ ಕುತ್ತಿಗೆ ಬಿಗಿದು ಉಸಿರು ನಿಲ್ಲಿಸಿಬಿಟ್ಟಿದ್ದಾನೆ. ಮಂಜುಪ್ರಸಾದ್ ಜೊತೆ ಗಾಯತ್ರಿ ಸಂಬಂಧ ಹೊಂದಿದ್ದರು. (ಸಾಂದರ್ಭಿಕ ಚಿತ್ರ)
4/ 5
ಮೃತ ಗಾಯತ್ರಿಗೆ ಮದುವೆ ಆಗಿ ಇಬ್ಬರು ಮಕ್ಕಳಿದ್ದರು. ಆದರೆ ಗಂಡನಿಂದ ದೂರವಾಗಿ, ಮಂಜುನಾಥನ ಜೊತೆ ಸಂಬಂಧ ಬೆಳೆಸಿದ್ದರು. (ಸಾಂದರ್ಭಿಕ ಚಿತ್ರ)
5/ 5
ಇಂದು ಇಬ್ಬರ ಮಧ್ಯೆ ಅದೇನಾಯಿತೋ ಗೊತ್ತಿಲ್ಲ. ಗಾಯತ್ರಿ-ಮಂಜುನಾಥ್ ಮಧ್ಯೆ ಶುರುವಾದ ಜಗಳ ತಾರಕಕ್ಕೇರಿತ್ತು. ಕೋಪದಲ್ಲಿ ಪ್ರಿಯತಮೆಯ ಕುತ್ತಿಗೆಯನ್ನು ಬಿಗಿದು ಮಂಜುನಾಥ ಕೊಂದೇ ಬಿಟ್ಟಿದ್ದಾರೆ. ಸದ್ಯ ವಿಜಯನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. (ಸಾಂದರ್ಭಿಕ ಚಿತ್ರ)