Bengaluru Crime News: ಹಣ-ಆಸ್ತಿಯ (money properties) ಮುಂದೆ ಕೆಲವೊಮ್ಮೆ ಸಂಬಂಧಗಳು(relationships), ಕೌಟುಂಬಿಕ ಮೌಲ್ಯಗಳೇ (family values) ಮರೆಯಾಗಿ ಹೋಗುತ್ತವೆ. ಕ್ಷಣ ಕ್ಷಣಕ್ಕೂ ಬೆಳೆಯುತ್ತಿರುವ ಜಗತ್ತಿನಲ್ಲಿ ಮನುಷ್ಯ ಮತ್ತಷ್ಟು ಸ್ವಾರ್ಥಿಯಾಗುತ್ತಿದ್ದಾನೆ. ಆಸ್ತಿ-ಹಣ, ಚಿನ್ನಕ್ಕಾಗಿ ಒಡಹುಟ್ಟಿದವರ ಮಧ್ಯೆ ಜಗಳಗಳು ಭುಗಿಲೇಳೋದನ್ನು ಕೇಳಿದ್ದೇವೆ, ನೋಡಿದ್ದೇವೆ. ಆದರೆ ಇಲ್ಲೊಬ್ಬಳು ಮಗಳು (Daughter) ತಾಯಿಯನ್ನೇ (Mother) ವಂಚಿಸಿದ್ದಾಳೆ.
ಎಷ್ಟೋ ಮಂದಿ ತಂದೆ-ತಾಯಿ ಇಂದಿಗೂ ನಮ್ಮ ಜೊತೆ ಇರಬೇಕಿತ್ತು ಅಂತ ಬಯಸುತ್ತಾರೆ. ಆದರೆ ಈಕೆ ಇಳಿವಯಸ್ಸಿನಲ್ಲಿರುವ ತಾಯಿಗೇ ಕೋಟ್ಯಾಂತರ ರೂಪಾಯಿ ವಂಚಿಸಿದ್ದಾಳೆ.
2/ 5
ನಗರದ ಜೆ.ಪಿ.ನಗರ ಪೊಲೀಸ್ ಠಾಣೆಗೆ ತಾಯಿಯೇ ಮಗಳ ವಿರುದ್ಧ ದೂರು ನೀಡಿದ್ದಾರೆ. ಚಿನ್ನಾಭರಣ ಪಡೆದು ವಾಪಸ್ ನೀಡಲಿಲ್ಲ ಎಂದು ವಂಚನೆ ಕಂಪ್ಲೆಂಟ್ ದಾಖಲಿಸಿದ್ದಾರೆ.
3/ 5
ಅಂದಾಜು 7 ಕೆಜಿಯಷ್ಟು ಚಿನ್ನ ಹಾಗೂ ವಜ್ರದ ಆಭರಣ ಪಡೆದು ಮಗಳು ವಂಚಿಸಿದ್ದಾಳೆ ಎಂದು ತಾಯಿ ವಿಜಯಲಕ್ಷ್ಮಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
4/ 5
ಕೆಲ ದಿನಗಳ ಹಿಂದೆ ವಿಜಯಲಕ್ಷ್ಮಿ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದರು. ಈ ವೇಳೆ ಆಭರಣಗಳನ್ನು ಲಾಕರ್ ನಲ್ಲಿ ಇಡೋಣ ಎಂದು ತಾಯಿಗೆ ಮಗಳು ಸಲಹೆ ನೀಡಿದ್ದಳು. ಬಳಿಕ ಲಾಕರ್ ನಲ್ಲಿ ಇಡುವುದಾಗಿ ಚಿನ್ನ ತೆಗೆದುಕೊಂಡು ಹೋಗಿದ್ದಳು.
5/ 5
ಕೆಲ ದಿನಗಳ ನಂತರ ತಾಯಿ ವಿಜಯಲಕ್ಷ್ಮಿ ಚಿನ್ನ ವಾಪಸ್ ಕೇಳಿದ್ದಾರೆ. ಆದರೆ ಮಗಳು ಚಿನ್ನಾಭರಣವನ್ನು ನೀಡಿಲ್ಲ. ಇದರಿಂದ ಮನನೊಂದು ಮಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ತಾಯಿ ದೂರು ದಾಖಲಿಸಿದ್ದಾರೆ. ಜೆ ಪಿ ನಗರ ಠಾಣೆಯಲ್ಲಿ ಐಪಿಸಿ ಸೆಕ್ಷನ್ 420 ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ.