ರಾಯಚೂರು, ಬಳ್ಳಾರಿ ಯೂನಿಟ್ ಗಳು ಕಲ್ಲಿದ್ದಲು ಕೊರತೆಯಿಂದ ಬಂದ್ ಆಗಿವೆ ಎಂಬ ಸುಳ್ಳು ಸುದ್ದಿ ಹರಿದಾಡುತ್ತಿವೆ. ಬೇಡಿಕೆ ಇಲ್ಲ ಎಂಬ ಕಾರಣಕ್ಕೆ ಸ್ಥಗಿತ ಮಾಡಲಾಗಿದೆ ಹೊರತು ಬಂದ್ ಆಗಿಲ್ಲ. ಕಾಂಗ್ರೆಸ್ ನ ಅಧ್ಯಕ್ಷರು ಸೇರಿದಂತೆ ಅನೇಕರು ಮಾತಾಡ್ತಿದ್ದಾರೆ. ಅವರೇ ಹಿಂದೆ ಈ ಇಲಾಖೆಯನ್ನು ನಿರ್ವಹಣೆ ಮಾಡಿದ್ದಾರೆ. ಹೀಗಿರುವಾಗ ಅಂಕಿ ಅಂಶಗಳನ್ನು ತಿಳಿದು ಮಾತಾಡಬೇಕು. ಅದು ಬಿಟ್ಟು ಕತ್ತಲೆ ರಾಜ್ಯ ಅಂತೆಲ್ಲ ಟೀಕೆ ಮಾಡೋದು ಸರಿಯಲ್ಲ ಎಂದರು