Bengaluru: ಬೆಕ್ಕು ಕಳ್ಳತನ, ದೂರು ದಾಖಲು: ಹುಡುಕಿ ಕೊಟ್ಟವರಿಗೆ ಭಾರೀ ನಗದು ಬಹುಮಾನ
ಚಿನ್ನ, ಬೈಕ್, ಬೆಲೆಬಾಳುವ ವಸ್ತುಗಳು ಕಳೆದಿದೆ ಹುಡುಕಿಕೊಡಿ ಎಂದು ದೂರು ದಾಖಲಿಸೋದು ಸಾಮನ್ಯ. ಆದ್ರೆ ಇತ್ತೀಚಗೆ ನಗರ ಭಾಗಗಳಲ್ಲಿ ಸಾಕು ಪ್ರಾಣಿ ಕಾಣೆಯಾಗಿದೆ ಹುಡುಕಿಕೊಡಿ ಅಂತ ದಾಖಲಾಗುವ ಪ್ರಕರಣಗಳು ಬರುತ್ತಿವೆ.
ಬೆಂಗಳೂರು ಸೇರಿದಂತೆ ಮಹಾನಗರಗಳದ ನಿವಾಸಿಗಳು ಮನೆಯಲ್ಲಿ ನಾಯಿ, ಬೆಕ್ಕು, ಮೊಲದಂತಹ ಸಾಕು ಪ್ರಾಣಿಗಳನ್ನು ಸಾಕುತ್ತಾರೆ. ಅವುಗಳನ್ನು ಮಕ್ಕಳಂತೆ ನೋಡಿಕೊಳ್ಳುತ್ತಾರೆ. ಅವುಗಳ ಕಾಣೆಯಾದಾಗ ಮನೆಯವರು ಮಕ್ಕಳನ್ನೇ ಕಳೆದುಕೊಂಡಂತೆ ಹುಡುಕುತ್ತಾರೆ. ಇದೀಗ ಅಂತಹವುದೇ ಒಂದು ಪ್ರಕರಣ ಬೆಂಗಳೂರಿನಲ್ಲಿ ದಾಖಲಾಗಿದೆ.
2/ 5
ಜಯನಗರದ ರಾಜಣ್ಣ ಲೇಔಟ್ ನಿವಾಸಿ ಮಿಸ್ಬಾ ಶರೀಫ್ ಎಂಬುವರು ತಮ್ಮ ಬೆಕ್ಕು ಕಳ್ಳತನವಾಗಿದೆ ಎಂದು ತಿಲಕ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಸಂಬಂಧ ಎಫ್ಐಆರ್ ಸಹ ದಾಖಲಿಸಿಕೊಳ್ಳಲಾಗಿದೆ.
3/ 5
ವೈಟ್ ಪರ್ಶಿಯನ್ ತಳಿಯ ಬೆಕ್ಕನ್ನು ಶರೀಫ್ ಸಾಕಿದ್ದರು. ಇದರ ಜೊತೆ ಮೊಲ ಸಹವನ್ನು ಮನೆಯಲ್ಲಿ ಸಾಕಿದ್ದಾರೆ. ಜನವರಿ 15ರಂದು ಬೆಳಗ್ಗೆ ಮನೆಯಲ್ಲಿದ್ದ ಬೆಕ್ಕು ಮಧ್ಯಾಹ್ನದ ನಂತರ ಮಿಸ್ ಆಗಿದೆ.
4/ 5
ಮನೆಯ ಮೇಲ್ಛಾವಣೆಯಿಂದ ಬಂದು ಬೆಕ್ಕು ಕಳ್ಳತನ ಮಾಡಲಾಗಿದೆ ಎಂದು ಶರೀಫ್ ಆರೋಪಿಸಿದ್ದಾರೆ. ಇದೀಗ ಬೆಕ್ಕು ಹುಡುಕಿಕೊಟ್ಟವರಿಗೆ ಬಹುಮಾನ ಸಹ ಘೋಷಣೆ ಮಾಡಿದ್ದಾರೆ.
5/ 5
ಬೆಕ್ಕು ಹುಡುಕಿಕೊಟ್ಟವರಿಗೆ 35 ಸಾವಿರ ರೂ. ನಗದು ಬಹುಮಾನ ನೀಡಲಾಗುವುದು ಎಂದು ಶರೀಫ್ ಘೋಷಣೆ ಮಾಡಿದ್ದಾರೆ.