bangalore crime news: ಅಪರೂಪದ ಜಾತಿಯ ವೀರ್ಯ ತಿಮಿಂಗಲದ ವಾಂತಿ(Ambergris)ಯನ್ನು ಮಾರಲು ಯತ್ನಿಸಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅಂಬರ್ ಗ್ರೀಸ್ ಎಂದು ಕರೆಯ್ಪಡುವ ತಿಮಿಂಗಲದ ವಾಂತಿಯ ಬೆಲೆ ಬರೋಬ್ಬರಿ 17 ಕೋಟಿ ರೂಪಾಯಿ.
17 ಕೋಟಿ ಮೌಲ್ಯದ ಅಂಬರ್ ಗ್ರೀಸ್ ಮಾರಾಟಕ್ಕೆ ಯತ್ನಿಸಿದ ಐವರನ್ನು ಮಲ್ಲೇಶ್ವರಂ ಪೊಲೀಸರು ಬಂಧಿಸಿದ್ದಾರೆ. ಪುನೀತ್, ಮಧುಕುಮಾರ್, ನಂದೀಶ್, ಯೋಗೇಶ್ ಹಾಗೂ ಗೋಪಾಲ್ ಬಂಧಿತ ಆರೋಪಿಗಳು.
2/ 5
ಪೊಲೀಸರ ದಾಳಿ ವೇಳೆ ಎ1 ಆರೋಪಿ ಪ್ರಸನ್ನ ಅಲಿಯಾಸ್ ಯಾರ್ಬಿಟ್ ನಾಪತ್ತೆಯಾಗಿದ್ದಾರೆ. ಕೋಟ್ಯಾಂತರ ಮೌಲ್ಯದ ಬೆಲೆಬಾಳುವ 17 ಕೆಜಿ ಅಂಬರ್ ಗ್ರೀಸ್ ಹಾಗೂ ಒಂದು ಕಾರನ್ನು ವಶಕ್ಕೆ ಪಡೆಯಲಾಗಿದೆ.
3/ 5
ಮಲ್ಲೇಶ್ವರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಅಂಬರ್ ಗ್ರೀಸ್ ಮಾರಾಟದ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಗಳನ್ನ ಬಂಧಿಸುವಲ್ಲಿ ಮಲ್ಲೆಶ್ವರಂ ಪೊಲೀಸರು ಯಶಸ್ವಿಯಾಗಿದ್ದಾರೆ.
4/ 5
ಆರೋಪಿಗಳ ವಿರುದ್ದ ವನ್ಯಜೀವಿ ಸಂರಕ್ಷಣಾ ಕಾಯ್ದೆ ಹಾಗೂ ಐಪಿಸಿ ಸೆಕ್ಷನ್ 420 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ತಲೆಮರಿಸಿಕೊಂಡಿರುವ ಪ್ರಮುಖ ಆರೋಪಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.
5/ 5
ತಿಮಿಂಗಿಲಗಳಿಂದ ತಾಜಾವಾಗಿ ಉತ್ಪತ್ತಿಯಾದಾಗ ಅಂಬರ್ ಗ್ರೀಸ್ ಸಮುದ್ರದ ವಾಸನೆ, ಮಲದ ವಾಸನೆಯನ್ನು ಹೊಂದಿರುತ್ತದೆ. ಗಟ್ಟಿಯಾಗಲು ಆರಂಭಿಸಿದಾಗ ಅದು ಸಿಹಿ ವಾಸನೆಯ ಪರಿಮಳವನ್ನು ಅಭಿವೃದ್ಧಿಪಡಿಸುತ್ತದೆ. ಇದನ್ನು ಐಷಾರಾಮಿ ಸುಗಂಧ ದ್ರವ್ಯಗಳಲ್ಲಿ ಮತ್ತು ಕೆಲವು ಸಾಂಪ್ರದಾಯಿಕ ಔಷಧಿಗಳಲ್ಲಿಯೂ ಬಳಸಲಾಗುತ್ತದೆ.