ರಾಜ್ಯ ಶಿಕ್ಷಣ ಇಲಾಖೆ 2022- 23ನೇ ಸಾಲಿನ ಶಾಲೆಗಳ ಕಲಿಕಾ ದಿನ ಮತ್ತು ರಜೆಗಳ ಕುರಿತ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಸದ್ಯ ಮಕ್ಕಳಿಗೆ ಬೇಸಿಗೆ ರಜೆ ನಡೆಯುತ್ತಿದ್ದು, ಈ ಬೇಸಿಗೆ ರಜೆ ಮೇ 15ರಂದು ಮುಗಿಯಲಿದ್ದು, ಮೇ 16ರಂದು ಸರ್ಕಾರಿ, ಖಾಸಗಿ ಮತ್ತು ಅನುದಾನಿತ ಶಾಲೆಗಳು ಮತ್ತೆ ಪ್ರಾರಂಭವಾಗಲಿದೆ ಎಂದು ಮಾರ್ಗಸೂಚಿಯಲ್ಲಿ ತಿಳಿಸಿದೆ.