Bengaluru Karaga: ಎರಡು ವರ್ಷಗಳ ಬಳಿಕ ಅದ್ಧೂರಿಯಾಗಿ ನಡೆದ ಕರಗ: ಈ ಬಾರಿ ಎಲ್ಲಾ ಏರಿಯಾಗಳಲ್ಲೂ ಹೆಜ್ಜೆ
ಬೆಂಗಳೂರಿನಲ್ಲಿ ನಡೆಯುವ ಐತಿಹಾಸಿಕ ಕರಗ ಎರಡು ವರ್ಷಗಳ ಬಳಿಕ ಅದ್ಧೂರಿಯಾಗಿ ನಡೆದಿದೆ. ಕಳೆದ ಎರಡು ವರ್ಷ ಕೊರೊನಾ ಕಾರಣದಿಂದ ಕರಗವನ್ನು ಸರಳವಾಗಿ ಆಚರಿಸಲಾಗಿತ್ತು. ಈ ವರ್ಷ ತನ್ನ ಹಳೆಯ ಲಯಕ್ಕೆ ಮರಳಿದ್ದು, ಈ ಬಾರಿ ಎಲ್ಲ ಏರಿಯಾಗಳಲ್ಲಿ ಕರಗ ಹೆಜ್ಜೆ ಹಾಕಿದೆ.
ಮಳೆ ಹಿನ್ನೆಲೆ ಕರಗದ ಪೂಜೆಯಲ್ಲಿ ವಿಳಂಬವಾಯ್ತು. ಕರಗದ ಕುಂಟೆಯಿಂದ ಪೂಜೆ ಮುಗಿಸಿ ಧರ್ಮರಾಯ ಸ್ವಾಮಿ ದೇವಾಲಯದ ಆವರಣದಲ್ಲಿ ಕರಗದ ಪೂಜೆ ಮಾಡಲಾಯ್ತು. ತಾಯಿ ದ್ರೌಪದಿ ಅಪ್ಪಣೆಯ ನಂತರ ಭಕ್ತರಿಗೆ ದರ್ಶನ ಕರಗದ ದರ್ಶನ ಸಿಗುತ್ತದೆ.
2/ 8
ಇನ್ನು ಕರಗ ಉತ್ಸವದಲ್ಲಿ ವೀರ ಕುಮಾರರ ನಡುವೆ ಪುನೀತ್ ರಾಜ್ ಕುಮಾರ್ ಫೋಟೋ ಹಿಡಿದ ಅಭಿಮಾನಿಗಳು ಜೈಕಾರ ಹಾಕಿದರು. ಅಭಿಮಾನಿಗಳ ಜೊತೆಯಲ್ಲಿ ಕರಗಕ್ಕೆ ಬಂದ ಅಭಿಮಾನಿಗಳು ಸಹ ಪವರ್ ಸ್ಟಾರ್ ಗೆ ಜೈಕಾರ ಹಾಕಿದರು.
3/ 8
ಬೆಳಗಿನ ಜಾವ 3.08ಕ್ಕೆ ದೇವಾಲಯದಿಂದ ರಾಜಬೀದಿ ಉತ್ಸವ ಆರಂಭವಾಯ್ತು. ಕುಣಿಯುತ್ತ ಭಕ್ತರಿಗೆ ದ್ರೌಪದಿ ತಾಯಿ ದರ್ಶನ ನೀಡಿದರು. ಎರಡು ವರ್ಷದ ಬಳಿಕ ಅದ್ಧೂರಿ ಕರಗವನ್ನು ಬೆಂಗಳೂರಿನ ಜನರು ಕಣ್ತುಂಬಿಕೊಂಡರು.
ಈ ಬಾರಿ ವೀರಕುಮಾರ ಜ್ಞಾನೇಂದ್ರ ಅವರೇ ಕರಗ ಹೊತ್ತಿದ್ದರು. ಬೆಳಗಿನ ಜಾವ ಆರಂಭವಾದ ಉತ್ಸವನ್ನ ನೋಡಲು ಬೆಂಗಳೂರಿನ ಇಕ್ಕೆಲಗಳಲ್ಲಿ ಜನರು ಸೇರಿದ್ದರು.
6/ 8
ಚಿತ್ತ ಹುಣ್ಣಿಮೆಯ ದಿನ ಈ ಕರಗ ನಡೆಯುತ್ತದೆ. ದುಂಡು ಮಲ್ಲಿಗೆಯ ಹೂಗಳಿಂದ ಕರಗವನ್ನು ಅಲಂಕೃತಗೊಳಿಸಲಾಗಿತ್ತು.
7/ 8
ಶನಿವಾರ ರಾತ್ರಿ ಧರ್ಮರಾಯ ಸ್ವಾಮಿ ದೇವಸ್ಥಾನಕ್ಕೆ ಆಗಮಿಸಿದ ಸಂಸದ ತೇಜಸ್ವಿ ಸೂರ್ಯ ದರ್ಶನ ಪಡೆದರು. ಮೊದಲಿಗೆ ದಿ.ಮಾಜಿ ಕೇಂದ್ರ ಸಚಿವ ಅನಂತಕುಮಾರ್ ಅವರ ಜೊತೆ ಕರಗ ನೋಡಲು ಬರುತ್ತಿದ್ದೇವೆ ಎಂದು ಹಳೆ ನೆನಪುಗಳನ್ನು ಮೆಲುಕು ಹಾಕಿಕೊಂಡರು.
8/ 8
ಈ ಬಾರಿ ಪ್ರತಿ ಗಲ್ಲಿಗಳಲ್ಲಿ ವಿಶೇಷ ಪೂಜೆ ಮಾಡಲಾಗುತ್ತಿದೆ. ದೇವಸ್ಥಾನದ ಮುಂಭಾಗ ಮಹಿಳಾ ಭಕ್ತರು ನಿರಂತರವಾಗಿ ಭಜನೆಯಲ್ಲಿ ತೊಡಗಿಕೊಂಡಿದ್ದಾರೆ.