ಅಪಘಾತಕ್ಕೀಡಾದ ಧಾರವಾಹಿ ನಟಿ Amrutha Naiduರ ವಾಹನ: 6 ವರ್ಷದ ಮಗಳ ದುರ್ಮರಣ!
ಬೆಂಗಳೂರು: ಕನ್ನಡದ ಧಾರವಾಹಿ ನಟಿ ಅಮೃತಾ ನಾಯ್ಡು (Kannada Serial Actress Amrutha Naidu) ಅವರ ವಾಹನ ಅಪಘಾತಕ್ಕೀಡಾಗಿ, ಅವರ 6 ವರ್ಷ ಮಗಳು ಸಮನ್ವಿ ಸಾವನ್ನಪ್ಪಿರುವ ದಾರುಣ ಘಟನೆ ಕೋಣನಕುಂಟೆ ರಸ್ತೆಯಲ್ಲಿ ನಡೆದಿದೆ.
ಇಂದು ಸಂಜೆ ಕೋಣನಕುಂಟೆ ರಸ್ತೆಯಿಂದ ವಾಜರಹಳ್ಳಿ ಕಡೆಗೆ ದ್ವಿಚಕ್ರ ವಾಹನದಲ್ಲಿ ತಾಯಿ-ಮಗಳು ತೆರಳ್ತಿದ್ದಾಗ ಟಿಪ್ಪರ್ ಲಾಠಿ ಡಿಕ್ಕಿ ಹೊಡೆದಿದೆ. ದ್ವಿಚಕ್ರ ವಾಹನದಲ್ಲಿ ಹಿಂಬದಿ ಕುಳಿತಿದ್ದ ಸಮನ್ವಿ(6) ಅಪಘಾತದಲ್ಲಿ ಮೃತಪಟ್ಟಿದ್ದಾಳೆ.
2/ 5
ಅಪಘಾತದಲ್ಲಿ ತಾಯಿ ಅಮೃತಾ ನಾಯ್ಡು ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬಾಲಕಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಿಮ್ಸ್ ಗೆ ರವಾನಿಸಲಾಗಿದೆ.
3/ 5
ಖಾಸಗಿ ವಾಹಿನಿ ಜನಪ್ರಿಯ ರಿಯಾಲಿಟಿ ಶೋ ಸ್ಪರ್ಧಿಯಾಗಿದ್ದ ಸಮನ್ವಿ ಭಾಗವಹಿಸಿದ್ದರು. ಪುಟ್ಟ ಬಾಲಕಿ ಅಪಘಾತಕ್ಕೀಡಾಗಿ ದುರಂತ ಅಂತ್ಯ ಕಂಡಿದ್ದಾಳೆ.
4/ 5
ಟಿಪ್ಪರ್ ಲಾರಿ ಚಾಲಕನನ್ನು ಕೆ.ಎಸ್.ಲೇಔಟ್ ಸಂಚಾರಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕುಮಾರಸ್ವಾಮಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
5/ 5
ನಟಿ ಅಮೃತಾ ನಾಯ್ಡು ಕಳೆದ ಹಲವು ವರ್ಷಗಳಿಂದ ಕನ್ನಡದ ಅನೇಕ ಧಾರವಾಹಿಗಳಲ್ಲಿ ನಟಿಸಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಅಮೃತಾ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.