Night Curfew ವೇಳೆ ಪೊಲೀಸರ ಜೊತೆ ಬಿಗ್ಬಾಸ್ ಖ್ಯಾತಿಯ ನಟಿ ದಿವ್ಯಾ ಸುರೇಶ್ ಕಿರಿಕ್..!
Biggboss Fame Actress Divya Suresh: ರಾಜ್ಯದಲ್ಲಿ ಓಮಿಕ್ರಾನ್ ಪ್ರಕರಣ ಹೆಚ್ಚಾಗಿರುವುದರಿಂದ ರಾಜ್ಯ ಸರ್ಕಾರ ಇಂದಿನಿಂದ 10 ದಿನಗಳ ಕಾಲ ನೈಟ್ ಕರ್ಫ್ಯೂ ಜಾರಿಗೊಳಿಸಿದೆ. ಮೊದಲ ದಿನವಾದ ಇಂದು ರಾತ್ರಿ 10 ಗಂಟೆ ಮೇಲೆ ಯಾರು ಓಡಾಡದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.
ಬೆಂಗಳೂರಿನ ಎಂ.ಜಿ.ರಸ್ತೆಯಲ್ಲಿ ಕರ್ಫ್ಯೂ ವೇಳೆ ಕನ್ನಡ ಬಿಗ್ ಬಾಸ್ ಖ್ಯಾತಿಯ ನಟಿ ದಿವ್ಯಾ ಸುರೇಶ್ ಪೊಲೀಸರ ಜೊತೆ ಕಿರಿಕ್ ಮಾಡಿಕೊಂಡಿದ್ದಾರೆ. ಕರ್ಪ್ಯೂ ಇದೆ ಮನೆಗೆ ಹೋಗಿ ಎಂದಿದ್ದಕ್ಕೆ ರಂಪಾಟ ಮಾಡಿದ್ದಾರೆ.
2/ 4
ಕರ್ಫ್ಯೂ ಇದೆ ಮನೆಗೆ ಹೋಗಿ ಎಂದಿದ್ದಕ್ಕೆ ಪೊಲೀಸರಿಗೇ ಆವಾಜ್ ಹಾಕಿರುವ ದಿವ್ಯಾ ಸುರೇಶ್, ಮಾಧ್ಯಮದ ಕ್ಯಾಮರಾ ಕಿತ್ತುಕೊಳ್ಳಲು ಯತ್ನಿಸಿ ಹೈಡ್ರಾಮಾವನ್ನೇ ಮಾಡಿದ್ದಾರೆ.
3/ 4
ಹೊಸ ವರ್ಷಾಚರಣೆ ಸಮೀಪದಲ್ಲೇ ಇರುವುದರಿಂದ ನಗರ ಎಂ.ಜಿ.ರೋಡಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಈ ವೇಳೆ ಪೊಲೀಸರಿಗೆ ಸಹಕರಿಸದೆ ನಟಿ ದಿವ್ಯಾ ಸುರೇಶ್ ಕಿರಿಕ್ ಮಾಡಿಕೊಂಡಿದ್ದಾರೆ.
4/ 4
ಸರ್ಕಾರ ನಿಯಮಗಳನ್ನು ಸರಿಯಾಗಿ ಪಾಲಿಸದ, ಕರ್ತವ್ಯ ನಿರತ ಪೊಲೀಸರ ಜೊತೆ ಸರಿಯಾಗಿ ಸಹಕರಿಸದ ಸೆಲೆಬ್ರೆಟಿಗಳ ವಿರುದ್ಧ ಪೊಲೀಸರೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.