Hijab Row: ಸದ್ಯಕ್ಕೆ ಶಾಲಾ-ಕಾಲೇಜುಗಳತ್ತ ತಲೆ ಹಾಕುವಂತಿಲ್ಲ; ನಿಷೇಧಾಜ್ಞೆ ಹೇರಿ ಬಿಗಿ ಕ್ರಮ
ಬೆಂಗಳೂರು: ಕಾಲೇಜ್ ವೊಂದರಲ್ಲಿ ಸಣ್ಣ ತಕರಾರಿನಂತೆ ಶುರುವಾದ ಹಿಜಾಬ್ ವಿವಾದ ಇಂದು ಹಿಂಸಾರೂಪ ತಳೆದಿದೆ. ಹಿಜಾಬ್ ಗೆ ವಿರುದ್ಧವಾಗಿ ಕೇಸರಿ ಶಾಲು, ಇದರ ಹಿಂದೆ ನೀಲಿ ಶಾಲು ಸೇರಿಕೊಂಡಿದೆ. ಪ್ರಕರಣ ಹೈಕೋರ್ಟ್ ಮೆಟ್ಟಿಲನ್ನೂ ಏರಿಯಾಗಿದೆ. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.
ರಾಜ್ಯದಲ್ಲಿ ಹಲವು ಜಿಲ್ಲೆಗಳ ಕಾಲೇಜುಗಳಲ್ಲಿ ಹಿಜಾಬ್ ವರ್ಸಸ್ ಕೇಸರಿ ಶಾಲು ಸಂಬಂಧ ಪ್ರತಿಭಟನೆ, ಕಲ್ಲು ತೂರಾಟ, ಲಾಠಿ ಚಾರ್ಜ್ ನಡೆದಿದೆ. ಈ ಹಿನ್ನೆಲೆ ಬೆಂಗಳೂರಿನ ಶಾಲಾ-ಕಾಲೇಜುಗಳ ಬಳಿ 2 ವಾರಗಳ ಕಾಲ ನಿಷೇಧಾಜ್ಞೆ ಹೇರಲಾಗಿದೆ.
2/ 4
ಈಗಾಗಲೇ ಪ್ರೌಢ ಶಾಲೆಗಳು, ಕಾಲೇಜುಗಳಿಗೆ 3 ದಿನ ರಜೆ ಘೋಷಿಸಲಾಗಿದ್ದು, ಈಗ ಶಾಲಾ-ಕಾಲೇಜುಗಳ ಬಳಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಈ ಸಂಬಂಧ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಆದೇಶ ಹೊರಡಿಸಿದ್ದಾರೆ.
3/ 4
ರಾಜ್ಯದ ಕೆಲ ಜಿಲ್ಲೆಗಳ ಶಾಲಾ ಕಾಲೇಜುಗಳಲ್ಲಿ ಗಲಾಟೆ ಆಗಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಯಾವುದೇ ಪ್ರತಿಭಟನೆಗಳಿಗೆ ಅವಕಾಶ ಇಲ್ಲ. ಶಾಲಾ-ಕಾಲೇಜುಗಳ 200 ಮೀಟರ್ ಅಂತರದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ ಎಂದು ತಿಳಿಸಿದರು. (ಸಾಂದರ್ಭಿಕ ಚಿತ್ರ)
4/ 4
ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಇದನ್ನು ಮೀರಿದ್ರೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಕಮಿಷನ್ ಎಚ್ಚರಿಸಿದ್ದಾರೆ.