Rain Update: ಬೆಂಗಳೂರಲ್ಲಿ ಭಾರೀ ಮಳೆ; ಇನ್ನೂ ಸತತ 3 ಗಂಟೆಗಳ ಕಾಲ ಅಬ್ಬರಿಸಲಿದ್ದಾನೆ ವರುಣ
ರಾಜಧಾನಿ ಬೆಂಗಳೂರಿನಲ್ಲಿ (Bengaluru) ಮತ್ತೆ ಮಳೆಯ ಅಬ್ಬರ ಜೋರಾಗಿದೆ. ನಗರದ ಹಲವೆಡೆ ಭಾರೀ ಮಳೆಯಾಗುತ್ತಿದ್ದು, (Rain) ಜನ ಜೀವನ ಅಸ್ತವ್ಯಸ್ತಗೊಂಡಿದೆ. ಗುಡುಗು, ಗಾಳಿ ಸಮೇತ ಮಳೆಗೆ ಸಿಲುಕಿ ಜನರು ಪರದಾಡುವಂತಾಗಿದೆ. ಶಾಂತಿನಗರ, ಮೆಜೆಸ್ಟಿಕ್, ಶೇಷಾದ್ರಿಪುರ, ಕಾರ್ಪೋರೇಷನ್ ಸರ್ಕಲ್ ಸೇರಿದಂತೆ ಹಲವೆಡೆ ಮಳೆಯಾಗುತ್ತದೆ.
ಮಳೆಯ ಅಬ್ಬರಕ್ಕೆ ವಾಹನ ಸವಾರರ ಪರದಾಟವಂತಾಗಿದೆ. ವರುಣಾರ್ಭಟಕ್ಕೆ ಮನೆ ದಾರಿ ಹಿಡಿದಿದ್ದ ಬೈಕ್ ಸವಾರರು ಕಂಗಾಲಾಗಿದೆ. ಕೆ.ಆರ್ ಮಾರ್ಕೆಟ್, ಚಿಕ್ಕಪೇಟೆ ಸುತ್ತಮುತ್ತ ಬಾರೀ ಮಳೆಯಾಗ್ತಿದೆ.
2/ 8
ಸಂಜೆಯಾದ್ರೆ ಸಾಕು ಮಳೆ ಶುರುವಾಗುತ್ತೆ. ಕೆಲಸದಿಂದ ಮನೆಗೆ ಹೋಗುವರು ಮಳೆಯಲ್ಲಿ ಸಿಲುಕಿ ಪರದಾಡುವಂತಾಗಿದೆ. ಬೆಳಗ್ಗೆ ಬಿಸಿಲು ಜೋರಾಗಿಯೇ ಇರುತ್ತೆ ಸಂಜೆ ಆದ್ರೆ ಸಾಕು ವರುಣ ಅಬ್ಬರಿಸ್ತಾನೆ
3/ 8
ಹಲವೆಡೆ ರಸ್ತೆಗಳು ಮಳೆ ನೀರಿಂದ ಆವೃತಗೊಂಡಿದೆ. ರಸ್ತೆಗಳೇ ಕೆರೆಯಂತಾಗಿದ್ದು, ರಸ್ತೆ ಗುಂಡಿ ಕಾಣದೇ, ವಾಹನ ಸವಾರರ ಪರದಾಟವಂತಾಗಿದೆ.
4/ 8
ನಗರದಲ್ಲಿ ಸುರಿದ ಭಾರೀ ಮಳೆಗೆ ರಸ್ತೆಗಳು ಕೆರೆಯಂತಾಗಿದ್ದು, ಶಾಂತಿನಗರ ಬಸ್ ಟರ್ಮಿನಲ್ ಮುಂಭಾಗದ ರಸ್ತೆ ಸಂಪೂರ್ಣ ಜಲಾವೃತಗೊಂಡಿದೆ. ವಿಲ್ಸನ್ ಗಾರ್ಡನ್, ಬನ್ನೇರುಘಟ್ಟ ರಸ್ತೆ ಕಡೆಗೆ ಹೋಗುವ ರಸ್ತೆ ಸಂಪೂರ್ಣ ಜಲಾವೃತಗೊಂಡಿದೆ.
5/ 8
ನೆಲಮಂಗಲದಲ್ಲಿ ಗುಡುಗು ಮಿಂಚು ಬಿರುಗಾಳಿ ಸಹಿತ ಮಳೆಯಾಗ್ತಿದ್ದು, ತಾಲ್ಲೂಕಿನ ಹಲವೆಡೆ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ದ್ವಿಚಕ್ರ ವಾಹನ ಸವಾರರ ಪರದಾಡ್ತಿದ್ದಾರೆ. ಗಾಳಿ ಮಳೆ ಆರ್ಭಟಕ್ಕೆ ಹಲವೆಡೆ ವಿದ್ಯುತ್ ವ್ಯತ್ಯಯ ಉಂಟಾಗಿದೆ.
6/ 8
ಮುಂದಿನ 3 ಗಂಟೆಗಳ ಕಾಲ ಸತತ ಮಳೆಯಾಗಲಿದ್ದು, ಹವಾಮಾನ ಇಲಾಖೆ ಭಾರೀ ಮಳೆಯ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಂಗಳೂರು ನಗರ, ರಾಮನಗರ, ಹಾವೇರಿಯಲ್ಲಿ ಮುಂದಿನ 3 ಗಂಟೆ ಸತತ ಮಳೆಯಾಗಲಿದೆ.
7/ 8
ಕರ್ನಾಟಕದ ನಾನಾ ಭಾಗಗಳಲ್ಲಿ ಈಗಾಗಲೇ ಮಳೆ ಅಬ್ಬರ ಶುರುವಾಗಿದ್ದು, ನಾಳೆವರೆಗೂ ಮಳೆ ಮುಂದುವರೆಯುವ ಸಾಧ್ಯತೆ ಇದೆ. ಈ ಬಗ್ಗೆ ರಾಜ್ಯ ನೈಸರ್ಗಿಕ ವಿಕೋಪ ಇಲಾಖೆ ಮುನ್ಸೂಚನೆ ನೀಡಿದೆ.
8/ 8
ರಾಜ್ಯದ ಮಲೆನಾಡು ಜಿಲ್ಲೆಗಳಲ್ಲಿ ಚದುರಿದಿಂದ ವ್ಯಾಪಕವಾಗಿ ಮಳೆ ಸಾಧ್ಯತೆ ಇದೆ. ದಕ್ಷಿಣ ಒಳನಾಡು, ಕರಾವಳಿ ಮತ್ತು ಉತ್ತರ ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಚದುರಿದಂತೆ ಮಳೆಯಾಗುವ ಸಾಧ್ಯತೆಗಳಿದ್ದು, ಉಳಿದ ಜಿಲ್ಲೆಗಳಲ್ಲಿ ಒಣಹವೆ ಮುಂದುವರೆಯಲಿದೆ ಎಂದು ನೈಸರ್ಗಿಕ ವಿಕೋಪ ಇಲಾಖೆ ಮಾಹಿತಿ ನೀಡಿದೆ.