ಕಸ್ಟಡಿಯಲ್ಲಿದ್ದಾಗ ಮಗನಿಗೆ ಡ್ರಗ್ಸ್ ನೀಡಿದ್ದಾರೆಂದು Hacker Sriki ತಂದೆ ಆರೋಪ; ಮಹತ್ವದ ದಾಖಲೆ ಬಯಲು
ಬೆಂಗಳೂರು: ಬಿಟ್ ಕಾಯಿನ್ ಹಗರಣ (Bitcoin Scam) ರಾಜ್ಯ ರಾಜಕಾರಣದಲ್ಲಿ (Karnataka Politics) ಬಿರುಗಾಳಿ ಎಬ್ಬಿಸಿದೆ. ಈ ಹಗರಣದಿಂದ ಸಿಎಂ ಬೊಮ್ಮಾಯಿ (CM Basavaraj Bommai) ಸರ್ಕಾರ ಉರಳಲಿದೆ ಎಂದು ವಿಪಕ್ಷ ಕಾಂಗ್ರೆಸ್ (Congress) ಅಬ್ಬರಿಸುತ್ತಿದೆ. ಬಿಜೆಪಿಗರು (BJP) ಕಾಂಗ್ರೆಸ್ಸಿಗರ ಮೇಲೆ ಪ್ರತ್ಯಾರೋಪ ಮಾಡುತ್ತಿದ್ದಾರೆ. ಇಡೀ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.
ಬಿಟ್ ಕಾಯಿನ್ ಹಗರಣದ ಮಾಸ್ಟರ್ ಮೈಂಡ್ ಎನ್ನಲಾಗುತ್ತಿರುವ ಇಂಟರ್ ನ್ಯಾಷನಲ್ ಹ್ಯಾಕರ್ ಶ್ರೀಕಿ ಸಂಬಂಧ ಹಲವು ಸ್ಫೋಟಕ ಮಾಹಿತಿಗಳು ಬಯಲಾಗುತ್ತಿವೆ. ಇದಕ್ಕೆ ಇಂದು ಮೊತ್ತೊಂದು ಸೇರ್ಪಡೆಯಾಗಿದೆ.
2/ 5
ಸಿಸಿಬಿ ವಶದಲ್ಲಿದ್ದಾಗ ಪೊಲೀಸರೇ ನನ್ನ ಮಗನಿಗೆ ಡ್ರಗ್ಸ್ ನೀಡಿದ್ದಾರೆ ಎಂದು ಹ್ಯಾಕರ್ ಶ್ರೀಕಿ ತಂದೆ ದೂರು ನೀಡಿದ್ದರು. ಶ್ರೀಕಿ ತಂದೆಯ ಹೇಳಿಕೆಯನ್ನು ಆಧಾರವಾಗಿಟ್ಟುಕೊಂಡು ಕಾಂಗ್ರೆಸ್ ನಾಯಕರು ಸರ್ಕಾರದ ಮೇಲೆ ಮುಗಿಬಿದ್ದಿದ್ದರು. ಈ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕೆಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದರು.
3/ 5
ಆದರೆ ಇಂದು ಶ್ರೀಕಿ ಕಸ್ಟಡಿಯಲ್ಲಿದ್ದಾಗ ನೀಡಿರುವ ಹೇಳಿಕೆಯ ಪ್ರತಿ ಬಯಲಾಗಿದೆ. ನಾನು ಡ್ರಗ್ಸ್ ಆಗಲಿ, ಸಿಗರೇಟ್ ಆಗಲಿ ಪಡೆದುಕೊಂಡಿಲ್ಲ ಎಂದು ವೈದ್ಯರ ಮುಂದೆ ಶ್ರೀಕಿ ಹೇಳಿಕೆ ನೀಡಿದ್ದಾನೆ. ಬೌರಿಂಗ್ ಆಸ್ಪತ್ರೆಯ ವೈದ್ಯರಾದ ಭಾವನಾ ಎದುರು ಈ ಹೇಳಿಕೆಯನ್ನು ದಾಖಲಿಸಿದ್ದಾರೆ.
4/ 5
ಸಿಸಿಬಿ ವಶದಲ್ಲಿದ್ದ ಶ್ರೀಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕರೆದುಕೊಂಡು ಹೋದಾಗ ವೈದ್ಯರ ಮುಂದೆ ಹೇಳಿಕೆ ನೀಡಿದ್ದಾನೆ. ಶ್ರೀಕಿ ವೈದರ ಎದುರು ನೀಡಿದ ಹೇಳಿಕೆಯ ಪ್ರತಿ ನ್ಯೂಸ್ 18 ಕನ್ನಡಗೆ ಲಭ್ಯವಾಗಿದೆ
5/ 5
ನಾನು 15 ದಿನಗಳಿಂದ ಪೊಲೀಸರ ವಶದಲ್ಲಿ ಇದ್ದೀನಿ. ನಾನು ಡ್ರಗ್ಸ್ ಆಗಲಿ, ಸಿಗರೇಟ್ ಆಗಲಿ, ಮದ್ಯ ಸೇವನೆ ಆಗಲಿ ಮಾಡಿಲ್ಲ ಎಂದು ವೈದ್ಯರ ಎದುರು ಹೇಳಿಕೆ ನೀಡಿ, ಅದಕ್ಕೆ ಶ್ರೀಕಿ ಸಹಿ ಮಾಡಿದ್ದಾನೆ.