ನೃತ್ಯವನ್ನು ರೆಕಾರ್ಡ್ ಮಾಡಿ ವಾಟ್ಸಾಪ್ ಗ್ರೂಪ್ಗಳಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಕ್ಯಾಬ್ ಡ್ರೈವರ್ ಸತೀಶ್ ಅವರ ಪತ್ನಿ ಸುಜಾತಾ ಅವರು ನೀಡಿದ ದೂರಿನ ಮೇರೆಗೆ ಕೆಆರ್ ಪುರಂ ಪೊಲೀಸರು ಕ್ರಿಮಿನಲ್ ಪ್ರಕರಣವನ್ನು ಕೈಗೆತ್ತಿಕೊಂಡಿದ್ದಾರೆ. (ಸಾಂದರ್ಭಿಕ ಚಿತ್ರ)
2/ 7
ಪ್ರಮುಖ ಆರೋಪಿ ದಯಾಳ್ ಮಂಜು ಅಲಿಯಾಸ್ ಪುಲಿ ಮಂಜು ಎಂಬಾತ ವಿರುದ್ಧ ಕೇಸ್ ದಾಖಲಾಗಿದೆ. ಆದರೆ ತನ್ನ ವಿರುದ್ಧ ಪ್ರಕರಣ ದಾಖಲಾದ ಒಂದು ದಿನದ ನಂತರ ಆತ ಅಮೆರಿಕಕ್ಕೆ ತೆರಳಿದ್ದಾನೆ. (ಸಾಂದರ್ಭಿಕ ಚಿತ್ರ)
3/ 7
ಆರೋಪಿ ಮಂಗಳವಾರ ದೆಹಲಿ ಮೂಲಕ ಯುಎಸ್ಗೆ ಹೋಗಿದ್ದಾನೆ ಎಂದು ಪೊಲೀಸರಿಗೆ ತಿಳಿದು ಬಂದಿದೆ. ಇತರ ಆರೋಪಿಗಳನ್ನು ಪತ್ತೆ ಹಚ್ಚಲು ಮತ್ತು ಬಂಧಿಸಲು ತನಿಖೆ ನಡೆಯುತ್ತಿದೆ. (ಸಾಂದರ್ಭಿಕ ಚಿತ್ರ)
4/ 7
ಪ್ರಾಥಮಿಕ ತನಿಖೆಯ ಪ್ರಕಾರ ಆರೋಪಿ ಮಂಜು ಮತ್ತು ಕಾರು ಚಾಲಕ ಸತೀಶ್ ಒಂದೇ ಸಮುದಾಯದವರು. ಕೆಲ ತಿಂಗಳ ಹಿಂದೆ ಮಂಜು ಸತೀಶ್ ಗೆ 2 ಲಕ್ಷ ರೂಪಾಯಿ ಕೊಟ್ಟಿದ್ದ. ನಂತರ ಸತೀಶ್ ಹಣವನ್ನು ಹಿಂತಿರುಗಿಸಿಲ್ಲ ಎಂದು ಮಂಜು ತನ್ನ ಸಮಾಜದ ಮುಖಂಡರಿಗೆ ದೂರು ನೀಡಿದ್ದ. (ಸಾಂದರ್ಭಿಕ ಚಿತ್ರ)
5/ 7
ಮಂಜು ಹಣದ ವಿಚಾರವಾಗಿ ಸತೀಶ್ನನ್ನು ಕಾರಿನಲ್ಲಿ ಅಪಹರಿಸಿ ಕೋಲಾರ ಜಿಲ್ಲೆಯ ಮುಳಬಾಗಲು ಬಳಿ ಕರೆದೊಯ್ದಿದ್ದ ಎನ್ನಲಾಗಿದೆ. ಮಂಜು ಹಾಗೂ ಸಹಚರರು ಸತೀಶನ ಬಟ್ಟೆಯನ್ನು ಬಲವಂತವಾಗಿ ತೆಗೆಯುವಂತೆ ಮಾಡಿದ್ದಾರೆ. (ಸಾಂದರ್ಭಿಕ ಚಿತ್ರ)
6/ 7
ನಂತರ ಹಾವಿನ ಡ್ಯಾನ್ಸ್ ಮಾಡಿಸಿ, ಅದನ್ನು ರೆಕಾರ್ಡ್ ಮಾಡಿದರು. ಆ ವಿಡಿಯೋವನ್ನು ತಮ್ಮ ಸಮುದಾಯದ ಎರಡು ವಾಟ್ಸಾಪ್ ಗುಂಪುಗಳಲ್ಲಿ ಹಂಚಿಕೊಂಡಿದ್ದಾರೆ. (ಸಾಂದರ್ಭಿಕ ಚಿತ್ರ)
7/ 7
ಗ್ಯಾಂಗ್ ನಂತರ ಸತೀಶನನ್ನು ಬಿಡುಗಡೆ ಮಾಡಿದೆ. ಸತೀಶನ ಸಹೋದರಿ ವಾಟ್ಸಾಪ್ ಗ್ರೂಪ್ನಲ್ಲಿ ವಿಡಿಯೋ ನೋಡಿ ಆತನ ಪತ್ನಿ ಸುಜಾತಾಗೆ ವಿಷಯ ತಿಳಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಸುಜಾತಾ ಕೆಆರ್ ಪುರಂ ಠಾಣೆಗೆ ತೆರಳಿ ಮಂಜು ಹಾಗೂ ಇತರ ಅಪರಿಚಿತರ ವಿರುದ್ಧ ದೂರು ದಾಖಲಿಸಿದ್ದಾರೆ. (ಸಾಂದರ್ಭಿಕ ಚಿತ್ರ)