Bengaluru: ರಾಜ್ಯ ರಾಜಧಾನಿಯಲ್ಲಿ ಮತ್ತೊಂದು ಅಗ್ನಿ ಅವಘಡ! ಹೋಟೆಲ್ನಲ್ಲಿ ಹೊತ್ತಿಕೊಂಡ ಬೆಂಕಿ
ಬೆಂಗಳೂರಿನ ಹೋಟೆಲ್ ನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಆರ್.ಆರ್. ನಗರದ ಹೋಟೆಲ್ ಒಂದರಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ. ಈಗ ಹೇಗಿದೆ ಪರಿಸ್ಥಿತಿ ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ…
ಬೆಂಗಳೂರಿನ ಹೋಟೆಲ್ ನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಆರ್.ಆರ್. ನಗರದ ಹೋಟೆಲ್ ಒಂದರಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ. ಪದೇ ಪದೇ ಅಗ್ನಿ ಅನಾಹುತಗಳು ಆಗುತ್ತಿರುವುದರಿಂದ ಜನರು ಆತಂಕಕ್ಕೆ ಒಳಗಾಗಿದ್ದಾರೆ.
2/ 7
ಆರ್.ಆರ್. ನಗರದ ಹೋಟೆಲ್ ಒಂದರಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ. ಹೋಟೆಲ್ ಸಿಬ್ಬಂದಿಯಿಂದ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಎರಡು ಅಗ್ನಿಶಾಮಕ ವಾಹನಗಳು ದೌಡಾಯಿಸಿದೆ.
3/ 7
ಬೆಂಕಿ ಹೊತ್ತಿಕೊಂಡ ರಭಸಕ್ಕೆ ಹೋಟೆಲ್ ಗೋಡೆಯೆಲ್ಲ ಸುಟ್ಟು ಕರಕಲಾಗಿದೆ. ಹೋಟೆಲ್ ಕೋಣೆಯ ಒಳಗಿದ್ದ ಪೀಠೋಪಕರಣಗಳೆಲ್ಲ ಬೆಂಕಿಗೆ ಆಹುತಿಯಾಗಿದೆ. ಗ್ರಾಹಕರು ಕೂರುತ್ತಿದ್ದ ಚೇರ್, ಟೇಬಲ್ಗಳೆಲ್ಲ ಸುಟ್ಟು ಭಸ್ಮವಾಗಿವೆ.
4/ 7
ಬೆಂಕಿ ಹೊತ್ತುಕೊಳ್ಳುತ್ತಿದ್ದಂತೆ ಹೋಟೆಲ್ ಸಿಬ್ಬಂದಿಯೆಲ್ಲ ಹೊರಕ್ಕೆ ಓಡಿ ಬಂದಿದ್ದಾರೆ. ಬಳಿಕ ಅಗ್ನಿಶಾಮಕ ದಳಕ್ಕೆ ವಿಷಯ ತಿಳಿಸಿದ್ದಾರೆ. ಮಾಹಿತಿ ಪಡೆದ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಬಂದಿದ್ದಾರೆ.
5/ 7
ಸ್ಥಳಕ್ಕೆ ಎರಡು ಅಗ್ನಿಶಾಮಕ ವಾಹನ ದೌಡಾಯಿಸಿ ಬಂದಿದೆ. ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಪ್ರವೃತ್ತರಾಗಿದ್ದಾರೆ. ಸ್ಥಳೀಯರು, ಹೋಟೆಲ್ ಸಿಬ್ಬಂದಿ, ಹಾಗೂ ಪೊಲೀಸರ ಸಹಾಯದಿಂದ ಬೆಂಕಿ ನಂದಿಸಿದ್ದಾರೆ.
6/ 7
ರಾಜಧಾನಿ ಬೆಂಗಳೂರಿನಲ್ಲಿ ಪದೇ ಪದೇ ಬೆಂಕಿ ಅವಘಡಗಳು ಸಂಬಂವಿಸುತ್ತವೇ ಇದೆ. ಕಳೆದ ವಾರವೂ ನಗರದಲ್ಲಿ ಸಾಕಷ್ಟು ಅಗ್ನಿ ಅನಾಹುತಗಳು ನಡೆದಿದ್ದವು. ಇದೀಗ ಜನನಿಬಿಢ ಪ್ರದೇಶದಲ್ಲಿರುವ ಹೋಟೆಲ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದರಿಂದ ಜನರೆಲ್ಲ ಭಯಭೀತರಾಗಿದ್ದಾರೆ.
7/ 7
ಬೇಸಿಗೆ ಕಾಲಿಟ್ಟಿರುವುದರಿಂದ ರಾಜ್ಯದ ಅರಣ್ಯ ಪ್ರದೇಶಗಳಲ್ಲೂ ಅಗ್ನಿ ಅನಾಹುತಗಳು ಆಗುತ್ತಲೇ ಇರುತ್ತವೆ. ಇದರಿಂದ ಅಪಾರ ಪ್ರಮಾಣದ ಅರಣ್ಯದ ಜೊತೆಗೆ ಅಮೂಲ್ಯ ಮರಗಿಡಗಳು, ಅಪರೂಪದ ಪ್ರಾಣಿ, ಪಕ್ಷಿಗಳು ನಾಶವಾಗುತ್ತವೆ.