ಮದುವೆಯಾದ 6 ದಿನದಲ್ಲಿಯೇ ಮಗಳನ್ನ Kidnap ಮಾಡಿದ ಪೋಷಕರು: ಯಾಕೆ ಗೊತ್ತಾ?
ಪೋಷಕರೇ ಮಗಳನ್ನು ಅಪಹರಣ ಮಾಡಿರುವ ಕುರಿತ ಪ್ರಕರಣವೊಂದು ಬೆಂಗಳೂರಿನಲ್ಲಿ ವರದಿಯಾಗಿದೆ. ಈ ಸಂಬಂಧ ಪತ್ನಿಯನ್ನು ಅಪಹರಿಸುವ ಕುರಿತು ಪತಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮಹಿಮಾ ಅಪಹರಣಕ್ಕೊಳ್ಳಗಾದ ಮಹಿಳೆ. ಸಿಂಗನಾಯಕನಹಳ್ಳಿಯ ನಿಖಿಲ್ ರಾಜ್ ಮತ್ತು ಸಹಕಾರ ನಗರದ ಮಹಿಮಾ ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಮದುವೆ ಆಗಬೇಕೆಂದು ನಿರ್ಧರಿಸಿದಾಗ ಮಹಿಮಾ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. (ಸಾಂದರ್ಭಿಕ ಚಿತ್ರ)
2/ 8
ಪೋಷಕರ ವಿರೋಧದ ನಡುವೆಯೂ ಪ್ರೀತಿಸಿದ ಹುಡುಗನನ್ನ ಮದುವೆಯಾಗಲು ನಿರ್ಧರಿಸಿದ್ದರು. ಅಂತೆಯೇ ಫೆಬ್ರವರಿ 7 ರಂದು ನಿಖಿಲ್ ರಾಜ್ ಮತ್ತು ಮಹಿಮಾ ಮದುವ ನಡೆದಿತ್ತು. (ಸಾಂದರ್ಭಿಕ ಚಿತ್ರ)
3/ 8
ದೇವಸ್ಥಾನದಲ್ಲಿ ಸರಳವಾಗಿ ಮದುವೆಯಾದ ನಿಖಿಲ್ ರಾಜ್ ಮತ್ತು ಮಹಿಮಾ ಅದೇ ದಿನ ಉಪನೋಂದಣಾಧಿಕಾರಿ ಕಚೇರಿಯಲ್ಲಿ ತಮ್ಮ ವಿವಾಹವನ್ನು ನೋಂದಾಯಿಸಿದ್ದರು. (ಸಾಂದರ್ಭೀಕ ಚಿತ್ರ)
4/ 8
ಮದುವೆ ನೋಂದಾಯಿಸಿದ ಬಳಿಕ ರಾಜನಕುಂಟೆ ಪೊಲೀಸ್ ಠಾಣೆಗೆ ತೆರಳಿದ್ದ ನಿಖಿಲ್ ರಾಜ್ ಮತ್ತು ಮಹಿಮಾ ಸ್ವಇಚ್ಛೆಯಿಂದ ಮದುವೆಯಾಗಿರುವ ಹೇಳಿಕೆ ದಾಖಲಿಸಿದ್ದರು. ಜೊತೆಗೆ ಮಹಿಮಾ ಪೋಷಕರಿಂದ ರಕ್ಷಣೆ ಕೊಡಿಸಬೇಕೇಂದು ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದರು. (ಸಾಂದರ್ಭೀಕ ಚಿತ್ರ)
5/ 8
ಇದಾದ ಬಳಿಕ ಫೆಬ್ರವರಿ 8ರಂದು ಮಹಿಮಾ ತಂದೆ ರಾಜಣ್ಣ ಅವರನ್ನ ಕರೆಸಿದ ರಾಜನಕುಂಟೆ ಪೊಲೀಸರು ಜೋಡಿಗೆ ತೊಂದರೆ ನೀಡದಂತೆ ತಿಳಿ ಹೇಳಿದ್ದರು. (ಸಾಂದರ್ಭೀಕ ಚಿತ್ರ)
6/ 8
ಇದೀಗ ಪತ್ನಿಯನ್ನು ಅಪಹರಿಸಲಾಗಿದೆ ಎಂದು ಆರೋಪಿಸಿ ನಿಖಿಲ್ ರಾಜ್ ರಾಜನಕುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. (ಸಾಂದರ್ಭೀಕ ಚಿತ್ರ)
7/ 8
ಫೆಬ್ರವರಿ 13ರಂದು ಸುಮಾರು 35 ಜನರ ಗುಂಪಿನೊಂದಿಗೆ ಸಿಂಗನಾಯಕನಹಳ್ಳಿಯ ಮನೆಗೆ ನುಗ್ಗಿ ಮಹಿಮಾಳನ್ನು ಆಕೆಯ ತಂದೆ ರಾಜಣ್ಣ ಅಪರಿಸಿದ್ದಾರೆ ಎಂದು ನಿಖಿಲ್ ರಾಜ್ ದೂರಿನಲ್ಲಿ ಮಾಹಿತಿ ನೀಡಿದ್ದಾರೆ. (ಸಾಂದರ್ಭೀಕ ಚಿತ್ರ)
8/ 8
ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ. (ಸಾಂದರ್ಭೀಕ ಚಿತ್ರ)