Bengaluru Crime: ಮನೆ ಮಾಲೀಕನ ಮಾತಿನಿಂದ ನೊಂದು ನೇಣಿಗೆ ಶರಣಾದ ಮನೆಗೆಲಸದಾಕೆ!
ಬೆಂಗಳೂರು: ಆಕೆ ಕೆಲಸ ಮಾಡುತ್ತಿದ್ದ ಮನೆಯ ಮಾಲೀಕರು ಕಳ್ಳತನದ ಆರೋಪ ಹೊರಿಸಿದ್ದರಿಂದ ನೊಂದ 40 ವರ್ಷದ ಮನೆಗೆಲಸದ ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪೂರ್ವ ಬೆಂಗಳೂರಿನ ಕೆಆರ್ ಪುರಂನ ಮನೆಯಲ್ಲಿ ಮನೆಗೆಲಸದಾಕೆ ಉಮಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಐಟಿ ಉದ್ಯೋಗಿ 41 ವರ್ಷದ ರೋಹಿತ್ ಬೈಲೂರ್ ಎಂಬಾತನ ಮನೆಯಲ್ಲಿ ಮೃತ ಉಮಾ ಕೆಲಸ ಮಾಡುತ್ತಿದ್ದರು. ಮನೆಗೆಲಸದಾಕೆ ಉಮಾ ಹಾಗೂ ಮತ್ತೊಬ್ಬ ಕೆಲಸದಾಕೆ ಆಂಜನಮ್ಮ ತನ್ನ ಮನೆಯಿಂದ ಚಿನ್ನಾಭರಣ, ನಗದು ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಕದ್ದಿದ್ದಾರೆ ಎಂದು ರೋಹಿತ್ ಆರೋಪಿಸಿದ್ದರು. (ಸಾಂದರ್ಭಿಕ ಚಿತ್ರ)
2/ 5
ಹಳೆ ಮದ್ರಾಸ್ ರಸ್ತೆಯ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿರುವ ರೋಹಿತ್, ತಮ್ಮ ಮನೆಯಲ್ಲಿ 12.1 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳು (ಚಿನ್ನದ ಬಳೆಗಳು, ಸರಗಳು, ನೆಕ್ಲೇಸ್ ಮತ್ತು ವಜ್ರದ ಉಂಗುರ) ಮತ್ತು 10,000 ರೂಪಾಯಿ ನಗದು ಕಳ್ಳತನವಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದರು. (ಸಾಂದರ್ಭಿಕ ಚಿತ್ರ)
3/ 5
ಕಳವು ಪ್ರಕರಣದಲ್ಲಿ ಉಮಾ ಅಥವಾ ಆಂಜನಮ್ಮ ಕೈವಾಡವಿದೆ ಎಂದು ಮನೆ ಮಾಲೀಕ ಶಂಕಿಸಿದ್ದಾರೆ. ದೂರಿನ ಮೇರೆಗೆ ಕೆಆರ್ ಪುರಂ ಪೊಲೀಸರು ಗುರುವಾರ ಉಮಾಳನ್ನು ಕರೆಸಿ ತಾಸುಗಟ್ಟಲೆ ವಿಚಾರಣೆ ನಡೆಸಿ ಸಂಜೆ ವೇಳೆಗೆ ಬಿಟ್ಟು ಕಳುಹಿಸಿದ್ದರು.
4/ 5
ವಿಚಾರಣೆ ವೇಳೆ ತಾನು ಮುಗ್ಧೆ ಯಾವುದೇ ಕಳ್ಳತನ ಮಾಡಿಲ್ಲ ಎಂದು ಉಮಾ ಹೇಳಿಕೆ ನೀಡಿದ್ದರು. ಕಳ್ಳತನದ ಆರೋಪದಿಂದ ನೊಂದ ಉಮಾ ಪೊಲೀಸ್ ಠಾಣೆಯಿಂದ ಮನೆಗೆ ಹಿಂತಿರುಗಿದ ನಂತರ ಆತ್ಮಹತ್ಯೆ ನಿರ್ಧಾರಕ್ಕೆ ಬಂದಿದ್ದಾರೆ. (ಸಾಂದರ್ಭಿಕ ಚಿತ್ರ)
5/ 5
ಆತ್ಮಹತ್ಯೆಗೆ ಮುನ್ನ, ಮನೆ ಮಾಲೀಕ ರೋಹಿತ್ ತನ್ನ ಇಮೇಜ್ ಗೆ ಕಳಂಕ ತಂದಿದ್ದಾರೆ ಎಂದು ವೀಡಿಯೊ ಸಂದೇಶವನ್ನು ಪೋಸ್ಟ್ ಮಾಡಿ ನೇಣಿಗೆ ಶರಣಾದ್ದಾರೆ. ಕೆಆರ್ ಪುರಂ ಪೊಲೀಸರು ರೋಹಿತ್ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆಗಾಗಿ ಪ್ರಕರಣ ದಾಖಲಿಸಿದ್ದಾರೆ. ಆದರೆ ಆತನನ್ನು ಇನ್ನು ಬಂಧಿಸಿಲ್ಲ. (ಪ್ರಾತಿನಿಧಿಕ ಚಿತ್ರ)