MSP Ragi: ಬೆಂಬಲ ಬೆಲೆ ಅಡಿ ರಾಗಿ ಖರೀದಿ ಹೆಚ್ಚಳಕ್ಕೆ ನಿರ್ಧಾರ ; ಸಿಎಂ ಬಸವರಾಜ ಬೊಮ್ಮಾಯಿ
ರಾಜ್ಯ ಸರ್ಕಾರದಿಂದ ಈಗಾಗಲೇ 2.1 ಲಕ್ಷ ಮೆಟ್ರಿಕ್ ಟನ್ ರಾಗಿ (millet) ಖರೀದಿ ಮಾಡಿದ್ದೇವೆ. ಒತ್ತಾಯದ ಹಿನ್ನಲೆ ಹೆಚ್ಚುವರಿ 1.14 ಲಕ್ಷ ಮೆಟ್ರಿಕ್ ಟನ್ ರಾಗಿ (Ragi) ಖರೀದಿಗೆ ಚಿಂತನೆ ಮಾಡಲಾಗಿದೆ. ಈ ಹೆಚ್ಚುವರಿ ರಾಗಿ ಖರೀದಿಗೆ ಒಟ್ಟು 487 ಕೋಟಿ ರೂ.ವೆಚ್ಚವಾಗಲಿದೆ ಎಂದು ತಿಳಿಸಿದರು
ಬೆಂಬಲ ಬೆಲೆ ಅಡಿ ರಾಗಿ ಖರೀದಿ ಹೆಚ್ಚಳಕ್ಕೆ ಸರ್ಕಾರ ನಿರ್ಧಾರ ಮಾಡಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ದಿಢೀರ್ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೆಲವು ಜಿಲ್ಲೆಗಳಲ್ಲಿ ರಾಗಿ ಖರೀದಿ ಮಾಡಬೇಕೆಂಬ ಒತ್ತಡವಿತ್ತು. ಈ ಹಿನ್ನಲೆ ಈ ನಿರ್ಧಾರ ನಡೆಸಲಾಗಿದೆ ಎಂದರು.
2/ 8
ರಾಜ್ಯ ಸರ್ಕಾರದಿಂದ ಈಗಾಗಲೇ 2.1 ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿ ಮಾಡಿದ್ದೇವೆ. ಒತ್ತಾಯದ ಹಿನ್ನಲೆ ಹೆಚ್ಚುವರಿ 1.14 ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿಗೆ ಚಿಂತನೆ ಮಾಡಲಾಗಿದೆ. ಈ ಹೆಚ್ಚುವರಿ ರಾಗಿ ಖರೀದಿಗೆ ಒಟ್ಟು 487 ಕೋಟಿ ರೂ.ವೆಚ್ಚವಾಗಲಿದೆ ಎಂದು ತಿಳಿಸಿದರು
3/ 8
ಇದೇ ವೇಳೆ ಸರ್ಕಾರದ ವಿರುದ್ಧ ಗುತ್ತಿಗೆದಾರರು ಕಮಿಷನ್ ಆರೋಪ ಮಾಡಿದ ಶಿರಹಟ್ಟಿ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ದಿಂಗಾಲೇಶ್ವರ ಸ್ವಾಮೀಜಿಗಳು ಪರಮ ಪೂಜ್ಯರು, ಮಹಾತ್ಮರು. ದೊಡ್ಡ ತಪಸ್ವಿಗಳು.
4/ 8
ಅವರು ಯಾರಿಗೆ ಎಲ್ಲಿ, ಎಷ್ಟು ಪರ್ಸೆಂಟ್ ಕೊಟ್ಟಿದ್ದಾರೆ ಅಂತ ದಾಖಲೆ ಕೊಡಲಿ ನಾವು ಸಂಪೂರ್ಣ ತನಿಖೆ ಮಾಡುತ್ತೇವೆ ಎಂದರು.
5/ 8
ಶ್ರೀಗಳು ಸುಮ್ಮನೆ ಮಾತನಾಡುವುದಲ್ಲ. ಅವರು ಎಲ್ಲಿ ಯಾರಿಗೆ ಆಥವಾ ಯಾರಿಗೆ ಕೊಟ್ಟರು ಎಂಬ ಕುರಿತು ಹೇಳಲಿ. ಅವರ ಆರೋಪವನ್ನು ನಾವು ಗಂಭೀರವಾಗಿ ಪರಿಗಣಿಸುತ್ತೇವೆ ಅವರ ಮಾತಿಗೆ ಬೆಲೆ ಕೊಡುತ್ತೇವೆ. ಯಾವ ಮಠಾಧೀಶರು ಯಾರಿಗೆ ಕೊಟ್ಟಿದ್ದಾರೆ ದಾಖಲೆ ಕೊಡಲಿ ಅದರ ಆಳಕ್ಕೆ ಹೋಗಿ ಸಂಪೂರ್ಣ ತನಿಖೆ ಮಾಡುತ್ತೇವೆ ಎಂದರು
6/ 8
ಬೆಂಬಲ ಬೆಲೆ ಅಡಿ ರಾಗಿ ಖರೀದಿ ಸ್ಥಗಿತಗೊಳಿಸಿದ್ದರ ಸಂಬಂಧ ವಿಧಾನಸಭೆ ಅಧಿವೇಶನದಲ್ಲಿ ಶಾಸಕ ಶಿವಲಿಂಗೇಗೌಡ ಗಮನ ಸೆಳೆದಿದ್ದರು
7/ 8
ಇದಕ್ಕೆ ಪ್ರತಿಕ್ರಿಯಿಸಿದ್ದ ಸಚಿವ ಉಮೇಶ್ ಕತ್ತಿ, ಈಗಾಗಲೇ ಬೆಂಬಲ ಬೆಲೆ ಅಡಿ 2.1 ಲಕ್ಷ ಟನ್ ರಾಗಿ ಖರೀದಿ ಮಾಡಲಾಗಿದೆ. 13,329 ರೈತರ ನೋಂದಾಣಿ ಮಾಡಿದ್ದು, ಮಾರ್ಚ್ 30ರವರೆಗೆ ರಾಗಿ ಖರೀದಿ ಮಾಡುವ ಪ್ರಕ್ರಿಯೆ ನಡೆಯಲಿದೆ.
8/ 8
ಎಂಎಸ್ಪಿ ಅಡಿ 3 ಲಕ್ಷ ಟನ್ ಹೆಚ್ಚುವರಿ ರಾಗಿ ಖರೀದಿ ಮಾಡಲು ಅವಕಾಶ ನೀಡುವಂತೆ ಕೇಂದ್ರದಿಂದ ಅನುಮತಿ ಕೋರಿದ್ದೇವೆ ಎಂದು ತಿಳಿಸಿದ್ದರು.