ಬೆಂಗಳೂರಿನಲ್ಲಿ ಆಫ್ಟರ್ ಪಾರ್ಟಿ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಮಾರತಹಳ್ಳಿ ಔಟರ್ ರಿಂಗ್ ರಸ್ತೆಯ ಹೋಟೆಲ್ ಮೇಲೆ ದಾಳಿ ನಡೆಸಲಾಗಿದೆ.
2/ 7
ಐಷಾರಾಮಿ ಹೋಟೆಲ್ ನಲ್ಲಿ ಭರ್ಜರಿ ಪಾರ್ಟಿ ನಡೆಯುತ್ತಿತ್ತು ಬೆಳಗಿನ ಜಾವ 3.30 ರವರೆಗೂ ಪಾರ್ಟಿ ನಡೆಯುತ್ತಿದ್ದು, ದಕ್ಷಿಣ ಆಫ್ರಿಕಾ ಮೂಲದ ವ್ಯಕ್ತಿಯೊಬ್ಬ ಇದನ್ನು ಆಯೋಜಿಸಿದ್ದ ಎಂಬ ಮಾಹಿತಿ ಸಿಕ್ಕಿದೆ. (ಸಾಂದರ್ಭಿಕ ಚಿತ್ರ)
3/ 7
ದಾಳಿಯ ವೇಳೆ 64 ಯುವಕರು ಮತ್ತು 24 ಯುವತಿಯರು ಪತ್ತೆಯಾಗಿದ್ದಾರೆ. ಪಾರ್ಟಿಯಲ್ಲಿ ಉತ್ತರ ಭಾರತದ ಮೂಲದ ಯುವತಿಯರೇ ಹೆಚ್ಚಾಗಿದ್ದರು. (ಸಾಂದರ್ಭಿಕ ಚಿತ್ರ)
4/ 7
ಡ್ರಗ್ಸ್ ಸೇವಿಸಿ ಪಾರ್ಟಿ ಮಾಡಿರುವ ಅನುಮಾನದ ಹಿನ್ನೆಲೆಯಲ್ಲಿ ಮೆಡಿಕಲ್ ಚೆಕಪ್ ಮಾಡಿಸಲು ಸಿಸಿಬಿ ಪೊಲೀಸರು ಮುಂದಾಗಿದ್ದಾರೆ.
5/ 7
ಅವಧಿಗೂ ಮೀರಿ ನಡೆಯುತ್ತಿದ್ದ ಪಾರ್ಟಿಯಲ್ಲಿ ಉತ್ತರ ಭಾರತ ಮೂಲದ ಯುವತಿಯರೇ ಹೆಚ್ಚಾಗಿದ್ದರು ಯುವಕರಿಗೆ 400, ಯುವತಿಯರಿಗೆ 300 ರೂಪಾಯಿ ಎಂಟ್ರಿ ಫೀಸ್ ಇಟ್ಟಿದ್ದರು.
6/ 7
ಹೋಟೆಲ್ ನಲ್ಲಿ ಡ್ರಗ್ಸ್ ದೊರೆತಿಲ್ಲ ಬದಲಾಗಿ ಪಾರ್ಟಿಯಲ್ಲಿದ್ದವರು ನಶೆಯಲ್ಲಿರೋ ಮಾಹಿತಿ ಸದ್ಯ ಪಾರ್ಟಿಯಲ್ಲಿದ್ದವರನ್ನ ಮೆಡಿಕಲ್ ಚೆಕಪ್ ಮಾಡಿಸಲು ಸಿಸಿಬಿ ಪೊಲೀಸ್ರು ಮುಂದಾಗಿದ್ದಾರೆ.
7/ 7
ಹೆಚ್ ಎಎಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ದಾಳಿಯವೇಳೆ ಸಿಸಿಬಿ ಅಧಿಕಾರಿಗಳೊಂದಿಗೆ ಆರೋಪಿಗಳು ವಾಗ್ವಾದ ನಡೆಸಿದ್ದಾರೆ.