ಸದ್ಯ ಹುಡುಗಿಯನ್ನು ರಕ್ಷಿಸಲಾಗಿದೆ. ಹಳ್ಳಿಯಿಂದಲೋ, ಇಲ್ಲವೇ ದೂರದ ಸಂಬಂಧಿಕರೋ, ಬಡವರ ಮಕ್ಕಳನ್ನೋ ನಗರಗಳಿಗೆ ಕರೆ ತಂದು ಮನೆಗೆಲಕ್ಕೆ ಇಟ್ಟುಕೊಳ್ಳುವ ಪ್ರಕರಣಗಳು ಹೆಚ್ಚಾಗಿದೆ. ಅಪ್ರಾಪ್ತ ಮಕ್ಕಳನ್ನು ದುಡಿಸಿಕೊಂಡು ಕುಟುಂಬಸ್ಥರಿಗೆ ಹಣ ಕೊಡಲಾಗುತ್ತಿದೆ. ಆದರೆ ಇದೆಲ್ಲವೂ ಕಾನೂನು ಬಾಹಿರ, ಶಿಕ್ಷಾರ್ಹ ಅಪರಾಧ ಎಂಬುವುದನ್ನು ಮರೆಯುವಂತಿಲ್ಲ.