Crime News: ಪರಾರಿ ಆಗೋದ್ರಲ್ಲಿ ಪಂಟರ್ ಇವನು.. 17ನೇ ಸಲ ಅರೆಸ್ಟ್ ಆದ ‘ಎಸ್ಕೇಪ್ ಕಾರ್ತಿಕ್’!
Karthik Kumar alias Escape Karthik: ಕಾರ್ತಿಕ್ ಕುಮಾರ್ ಅಲಿಯಾಸ್ ಎಸ್ಕೇಪ್ ಕಾರ್ತಿಕ್ ಅಂತಲೇ ಕುಖ್ಯಾತಿ ಗಳಿಸಿರುವ ಕಳ್ಳನನ್ನು ಬೆಂಗಳೂರು ಪಶ್ಚಿಮ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಖದೀಮನ ಮೇಲೆ ಕಡಿಮೆ ಅಂದ್ರೂ 80 ಕಳ್ಳತನ ಪ್ರಕರಣಗಳಿವೆ.
ಕಾರ್ತಿಕ್ ಬಂಧನದಿಂದ ಐದು ಪ್ರಕರಣಗಳನ್ನು ಭೇದಿಸಲಾಗಿದ್ದು, 11.43 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಳ್ಳ ಕಾರ್ತಿಕ್ ಈ ತರ ಬಂಧನಕ್ಕೊಳಗಾಗುತ್ತಿದುವುದು 17ನೇ ಬಾರಿ ಅನ್ನೋದು ಹುಬ್ಬೇರಿಸುವ ಮ್ಯಾಟರ್.
2/ 6
ಈ ಹಿಂದೆ ಎರಡು ಸಲ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ. ಇವನಿಗೆ ಪೊಲೀಸ್ ವಲಯದಲ್ಲಿ 'ಎಸ್ಕೇಪ್ ಕಾರ್ತಿಕ್' ಎಂಬ ಅಡ್ಡ ಹೆಸರೇ ಇದೆ. (ಸಾಂದರ್ಭಿಕ ಚಿತ್ರ)
3/ 6
ಬೆಂಗಳೂರು, ತಮಿಳುನಾಡು ಮತ್ತು ಆಂಧ್ರಪ್ರದೇಶದ ಹಲವು ಭಾಗಗಳಲ್ಲಿ ಪ್ರಕರಣಗಳಿವೆ. 2005 ರಲ್ಲಿ 16 ನೇ ವಯಸ್ಸಿನಲ್ಲಿ ಮನೆಯಿಂದ ಆಭರಣಗಳನ್ನು ಕದ್ದಾಗ ಮೊದಲ ಬಾರಿಗೆ ಅಪರಾಧ ಪ್ರಕರಣ ದಾಖಲಾಗಿತ್ತು. ಜಾಮೀನಿನ ಮೇಲೆ ಹೊರ ಬಂದು ಮತ್ತೆ ಕಳ್ಳತನ ಮಾಡುತ್ತಿದ್ದ. (ಸಾಂದರ್ಭಿಕ ಚಿತ್ರ)
4/ 6
2008ರಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಆಹಾರದ ವ್ಯಾನ್ ನಲ್ಲಿ ಪರಾರಿಯಾಗಿದ್ದನು. 45 ದಿನಗಳ ನಂತರ ಮತ್ತೆ ಸಿಕ್ಕಿಬಿದ್ದಿದ್ದನು. 2010 ರಲ್ಲಿ, ಕಾರ್ತಿಕ್ ನನ್ನು ಸ್ಥಳ ಮಹಜರ್ ಗಾಗಿ ಕರೆದೊಯ್ಯುವಾಗ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಂಡಿದ್ದನು. ನಂತರ ಈಗ ಸಿಕ್ಕಿಬಿದ್ದಿದ್ದಾರೆ. (ಸಾಂದರ್ಭಿಕ ಚಿತ್ರ)
5/ 6
ಪೊಲೀಸರೇ ಹೇಳುವಂತೆ ಕಾರ್ತಿಕ್ ಓಡುವುದರಲ್ಲಿ, ಜಿಗಿತ, ಹತ್ತುವುದರಲ್ಲಿ ನಿಪುಣ. ಅದರಿಂದಲೇ ಕಳ್ಳತನ ಮಾಡುವಲ್ಲಿ, ಪೊಲೀಸರಿಂದ ತಪ್ಪಿಸಿಕೊಳ್ಳುವಲ್ಲಿ ನಿಸ್ಸಿಮ ಎನ್ನುತ್ತಾರೆ. (ಪ್ರಾತಿನಿಧಿಕ ಚಿತ್ರ)
6/ 6
ಎರಡು ವರ್ಷಗಳ ಹಿಂದೆ ಮೈಸೂರಿನ ಮನೆಯೊಂದರಲ್ಲಿ ಕಳ್ಳತನ ಮಾಡುತ್ತಿದ್ದಾಗ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದು ತೀವ್ರವಾಗಿ ಥಳಿತಕ್ಕೊಳಗಾಗಿದ್ದ. ಈ ಘಟನೆಯಲ್ಲಿ ಕೈಗೆ ಗಾಯವಾಗಿದೆ. ನಂತರ ಇವನ ಗೆಳತಿಯ ಸಹೋದರ ಕಾಲಿಗೆ ಇರಿದಿದ್ದು, ಮೊದಲಿನಂತೆ ಓಡಲು ಸಾಧ್ಯವಾಗದಂತೆ ಮಾಡಿದ್ದನಂತೆ