ಬೆಂಗಳೂರು: ಬಿಟ್ ಕಾಯಿನ್ ಹಗರಣ (Bitcoin Scam) ಸಂಬಂಧ ರಾಜ್ಯ ಬಿಜೆಪಿ ಸರ್ಕಾರದ (BJP State Government) ವಿರುದ್ಧ ವಿಪಕ್ಷಗಳು ಮುಗಿ ಬಿದ್ದಿರುವ ಸಮಯದಲ್ಲೇ ಹಗರಣದ ಪ್ರಮುಖ ರೂವಾರಿ ಎನ್ನಲಾದ, ಜಾಮೀನಿನ ಮೇಲೆ ಹೊರಗಿದ್ದ ಹ್ಯಾಕರ್ ಶ್ರೀಕಿ (Hacker Sriki) ಅಲಿಯಾಸ್ ಶ್ರೀಕೃಷ್ಣನನ್ನು (Hacker Srikrishna) ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇಂದಿರಾನಗರದ ರಾಯಲ್ ಆರ್ಕಿಡ್ ಹೋಟೆಲ್ನಲ್ಲಿ ಶ್ರೀಕಿನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಹೋಟೆಲ್ ನ ಬಳಿ ಶ್ರೀಕಿ ಗೆಳೆಯ ಆಗಮಿಸಿ ಗಲಾಟೆ ಮಾಡಿದ್ದರಿಂದ ಪೊಲೀಸರಿಗೆ ಮಾಹಿತಿ ಹೋಗಿದೆ.
2/ 5
ಹೋಟೆಲ್ ನಲ್ಲಿ ತಂಗಿದ್ದ ಶ್ರೀಕಿಯನ್ನು ಗೆಳೆಯ ವಿಷ್ಣು ಭಟ್ ಭೇಟಿಯಾಗಲು ಬಂದಿದ್ದಾನೆ. ಕುಡಿದ ಮತ್ತಿನಲ್ಲಿದ್ದ ವಿಷ್ಣು ಭಟ್ ಹೋಟೆಲ್ ನ ಸೆಕ್ಯೂರಿಟಿ ಜೊತೆ ಜಗಳವಾಡಿ, ಹಲ್ಲೆ ಮಾಡಿದ್ದಾನೆ. ಸೆಕ್ಯೂರಿಟಿ ಗಾರ್ಡ್ ಕೆನ್ನೆಗೆ ಹೊಡೆದಿದ್ದಾನೆ. (ಸಾಂದರ್ಭಿಕ ಚಿತ್ರ)
3/ 5
ಯಾರ ಭೇಟಿಗೆ ಬಂದಿದ್ದಿಯಾ ಎಂದಾಗ ಶ್ರೀಕಿ ಹೆಸರು, ರೂಮ್ ನಂಬರ್ ಹೇಳಿದ್ದ ವಿಷ್ಣು ಭಟ್. ಆ ವೇಳೆ ಶ್ರೀಕಿ ಮತ್ತು ವಿಷ್ಣು ಭಟ್ ಇಬ್ಬರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಯಿತು. (ಸಾಂದರ್ಭಿಕ ಚಿತ್ರ)
4/ 5
ಹೋಟೆಲ್ ಬಳಿ ಆಗಮಿಸಿದ ಪೊಲೀಸರು, ಶ್ರೀಕಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಶ್ರೀಕಿ ಜಾಮೀನು ಪಡೆದಾಗಿನಿಂದ ಎಲ್ಲೂ ಕಾಣಿಸಿಕೊಂಡಿಲ್ಲ. (ಸಾಂದರ್ಭಿಕ ಚಿತ್ರ)
5/ 5
ಕಳೆದ ಒಂದೂವರೆ ತಿಂಗಳಿಂದ ಸ್ಟಾರ್ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿರುವುದು ತಿಳಿದು ಬಂದಿದೆ. ಶ್ರೀಕಿ ಬಳಸ್ತಿದ್ದ ಲ್ಯಾಪ್ ಟಾಪನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. (ಸಾಂದರ್ಭಿಕ ಚಿತ್ರ)