ಬೆಂಗಳೂರಿಗರೇ ಅಲರ್ಟ್.. ಹೊಸ ವರ್ಷ ಜ.1ರಂದೇ ಗಬ್ಬೆದ್ದು ನಾರಲಿದೆಯಂತೆ Bengaluru..!!
Bengaluru Garbage: ಓಮಿಕ್ರಾನ್ ಹಿನ್ನೆಲೆಯಲ್ಲಿ ಹೊಸ ವರ್ಷಾಚರಣೆಗೆ ಸರ್ಕಾರ ಬ್ರೇಕ್ ಹಾಕಿರೋದೇನೋ ಓಕೆ. ಮನೆಯಲ್ಲೇ ಹೊಸ ವರ್ಷವನ್ನು ಸಂಭ್ರಮಿಸಿದ್ರೆ ಆಯ್ತು ಅಂತಿದ್ದ ರಾಜಧಾನಿ ಬೆಂಗಳೂರು ನಿವಾಸಿಗಳ ನೆಮ್ಮದಿ ಕಸಿಯುವ ಸುದ್ದಿ ಹೊರ ಬಿದ್ದಿದೆ.
ಹೊಸ ವರ್ಷ ಜನವರಿ ಒಂದರಿಂದಲೇ ಬೆಂಗಳೂರಿಗರಿಗೆ ಕಸದ ತಲೆ ನೋವು ಶುರುವಾಗಲು ಸಾಧ್ಯತೆಗಳು ದಟ್ಟವಾಗಿವೆ. ಬೆಂಗಳೂರಲ್ಲಿ ಕಸ ಸಂಗ್ರಹಣೆ ಸ್ಥಗಿತ ಮಾಡ್ತೀವಿಎಂದು ಗುತ್ತಿಗೆದಾರರು ಎಚ್ಚರಿಕೆ ನೀಡಿದ್ದು, ನಿವಾಸಿಗಳ ತಲೆಬಿಸಿ ಮಾಡಿದೆ.
2/ 5
ಕಸ ಸಂಗ್ರಹಿಸುವ ಗುತ್ತಿಗೆದಾರರಿಗೆ ಬಿಬಿಎಂಪಿ ಬಿಲ್ ಪಾವತಿ ಮಾಡದ ಕಾರಣ ಡಿಸೆಂಬರ್ 31ರಿಂದ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ. 2022ರ ಮೊದಲ ದಿನವೇ ಬೆಂಗಳೂರು ನಗರದ ಜನರಿಗೆ ಪ್ರತಿಭಟನೆಯ ಬಿಸಿ ತಟ್ಟಲಿದೆ.
3/ 5
ಹಲವು ತಿಂಗಳಿನಿಂದ ಕಸ ವಿಲೇವಾರಿ ಮಾಡುವ ಗುತ್ತಿಗೆದಾರರ ಬಿಲ್ ಪಾವತಿಯಾಗಿಲ್ಲ. ಆದ್ದರಿಂದ ಕಸ ಸಂಗ್ರಹಣೆ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.ಬೇಡಿಕೆ ಈಡೇರುವ ತನಕ ಮುಷ್ಕರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತೇವೆ ಎಂದು ಗುತ್ತಿಗೆದಾರರು ತಿಳಿಸಿದ್ದಾರೆ.
4/ 5
ಕಳೆದ ಹಲವು ತಿಂಗಳಿನಿಂದ ಬಿಬಿಎಂಪಿ ಕಸ ಸಂಗ್ರಹಣೆ ಮಾಡುವ ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡಿಲ್ಲ. ಬಿಲ್ ಪಾವತಿ ಮಾಡುವಂತೆ ಕೇಳಿದರೆ ಅಧಿಕಾರಿಗಳು ಲಂಚ ಕೇಳುತ್ತಿದ್ದಾರೆ ಎಂದು ಗುತ್ತಿಗೆದಾರರು ಆರೋಪಿಸಿದದ್ದಾರೆ.
5/ 5
2 ದಿನಗಳ ಕಾಲ ಕಸ ಎತ್ತದಿದ್ದರೆ ನಗರ ಯಾವ ಸ್ಥಿತಿಗೆ ತಲುಪುತ್ತದೆ ಎಂಬುದು ಅಧಿಕಾರಿಗಳಿಗೆ ತಿಳಿಯಬೇಕು. ಅದಕ್ಕಾಗಿ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದೇವೆ. ಯಾವುದೇ ಕಾರಣಕ್ಕೂ ಪ್ರತಿಭಟನೆ ವಾಪಸ್ ಪಡೆಯುವುದಿಲ್ಲ ಎಂದು ಗುತ್ತಿಗೆದಾರರು ಹೇಳಿದ್ದಾರೆ.