ಕಾಮಾಕ್ಯ ಲೇಔಟ್ ನಲ್ಲಿರುವ ಸುಮಾರು 30 ರಿಂದ 40 ಮನೆಗಳಿಗೆ ಮಳೆ ನೀರು ನುಗ್ಗಿದೆ. ಮನೆ ತುಂಬಾ ನಾಲ್ಕು ಅಡಿಯಷ್ಟು ನೀರು ನಿಂತಿರುವ ಪರಿಣಾಮ ಎಲ್ಲ ವಸ್ತುಗಳು ನೀರು ಪಾಲಾಗಿವೆ.
2/ 9
ಮನೆಗಳಲ್ಲಿ ನೀರು ಹೊಕ್ಕಿದರೂ ಯಾವ ಅಧಿಕಾರಿಗಳು ಸ್ಥಳಕ್ಕೆ ಬರದ ಹಿನ್ನೆಲೆ ಸ್ಥಳೀಯರು ಬಿಬಿಎಂಪಿ ವಿರುದ್ಧ ಆಕ್ರೋಶ ಹೊರ ಹಾಕಿದರು.
3/ 9
ಕರೆ ಮಾಡಿದರೂ ಯಾವ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಮನೆಯಲ್ಲಿರುವ ಎಲ್ಲ ವಸ್ತುಗಳು ನೀರು ಪಾಲಾಗಿವೆ. ಟ್ಯಾಕ್ಸ್ ಕೇಳೋಕೆ ಮಾತ್ರ ಅಧಿಕಾರಿಗಳು ಬರುತ್ತಾರೆ. ಇಂತಹ ಸಮಯದಲ್ಲಿ ಯಾರು ಬರಲ್ಲ ಎಂದು ಕಿಡಿ ಕಾರಿದರು.
4/ 9
ಇನ್ನೂ ಉತ್ತರಹಳ್ಳಿ ವಾಟರ್ ಸಪ್ಲೈ ಬಡಾವಣೆಯ 10ಕ್ಕೂ ಹೆಚ್ಚು ಮನೆಗಳಿಗೆ ಮಳೆ ನೀರು ನುಗ್ಗಿದೆ. ಹಲವೆಡೆ ಮರ ಮತ್ತು ಕೊಂಬೆಗಳು ಬಿದ್ದಿರುವ ವರದಿಗಳು ಬಂದಿವೆ.
5/ 9
ರಾಜಕಾಲುವೆಯಲ್ಲಿ ಕಾಮಗಾರಿ ನಡೆಯುತ್ತಿದ್ದು, ನೀರನ್ನು ತಡೆ ಹಿಡಿಯಲಾಗಿದೆ. ಹಾಗಾಗಿ ಮನೆಗಳಿಗೆ ನೀರು ನುಗ್ಗಿದೆ ಎಂದು ಹೇಳಲಾಗುತ್ತಿದೆ.
6/ 9
ರಾಜಾಜಿ ನಗರ , ವಿದ್ಯಾರಣ್ಯಪುರ, ಜಯನಗರ, ಜೆ.ಪಿ.ನಗರ, ಶೇಷಾದ್ರಿಪುರ, ಶಿವಾನಂದ ಸರ್ಕಲ್, ಮೆಜೆಸ್ಟಿಕ್, ಕೆ.ಆರ್.ಸರ್ಕಲ್, ಶಿವಾಜಿ ನಗರ, ಎಂ.ಜಿ.ರೋಡ್, ಶಾಂತಿ ನಗರ, ಹಲಸೂರು ಹೀಗೆ ಬಹುತೇಕ ಕಡೆ ಮಳೆಯ ಆರ್ಭಟ ಹೆಚ್ಚಿತ್ತು.
7/ 9
ಕಾಮಾಕ್ಯ ಲೇಔಟ್ ನ ರಸ್ತೆ ಪಕ್ಕದ ನರ್ಸರಿ ಸಂಪೂರ್ಣ ನಾಶವಾಗಿದೆ. ಸುಮಾರು 5 ಲಕ್ಷ ಮೌಲ್ಯದಷ್ಟು ನಷ್ಟವಾಗಿದೆ ಎಂದು ನರ್ಸರಿ ಮಾಲೀಕರು ಹೇಳಿದ್ದಾರೆ. ಮತ್ತೊಂದು ಜಿಮ್ ಒಳಗೆ ನೀರು ನುಗ್ಗಿದೆ.
8/ 9
ಕೆ.ಜಿಎಫ್ ಸಿನಿಮಾ ನೋಡಲು ಬಂದವರ ಕಾರು ನೀರುಪಾಲಾಗಿದೆ. ಕಾಮಾಕ್ಯ ಥಿಯೇಟರ್ ಗೆ ಸಿನಿಮಾ ನೋಡಲು ದಂಪತಿ ಆಗಮಿಸಿದ್ದರು. ಈ ವೇಳೆ ಹೊರಗೆ ನಿಲ್ಲಿಸಿದ್ದ ಕಾರ್ ಮಳೆಯ ನೀರಿನಲ್ಲಿ 500 ಮೀ. ನಷ್ಟು ದೂರ ಹೋಗಿದೆ.
9/ 9
ವಿದ್ಯಾಪೀಠದಲ್ಲಿ ಅತ್ಯಧಿಕ 7.3 ಸೆಂ.ಮೀ. ಮಳೆಯಾಗಿದೆ. ಸಂಪಂಗಿರಾಮ ನಗರ 4.9 ಸೆಂ.ಮೀ, ವಿ.ವಿ.ಪುರ 4.5 ಸೆಂ.ಮೀ, ಬೊಮ್ಮನಹಳ್ಳಿ 4.2 ಸೆಂ.ಮೀ, ಬೆಳ್ಳಂದೂರು 4 ಸೆಂ.ಮೀ, ಅಂಜನಾಪುರ 3.6 ಸೆಂ.ಮೀ, ಗಾಳಿ ಆಂಜನೇಯ ದೇವಸ್ಥಾನ 3.7 ಸೆಂ.ಮೀ, ಆರ್.ಆರ್.ನಗರ ಮತ್ತು ಕೋರಮಂಗಲ ತಲಾ 3.4 ಸೆಂ.ಮೀ, ಬಿಇಎಂಎಲ್ ಬಡಾವಣೆ 3.1 ಸೆಂ.ಮೀ ಮಳೆಯಾಗಿದೆ.