BBMPಯ ಕಿಲ್ಲರ್ ಕಸದ ಲಾರಿಗೆ ಮತ್ತೊಂದು ಬಲಿ, ಅಪಘಾತದಲ್ಲಿ ವೃದ್ಧನ ದೇಹ ಛಿದ್ರ ಛಿದ್ರ ಹೆಬ್ಬಾಳ ಅಕ್ಷಯಾ ಸಾವು ಮಾಸುವ ಮುನ್ನವೇ BBMP ಲಾರಿ ಮತ್ತೊಂದು ಬಲಿ ಪಡೆದಿದೆ. ಬೇಗೂರು ಕ್ರಾಸ್ ಬಳಿ ಭೀಕರ ಅಪಘಾತ ಸಂಭವಿಸಿದ್ದು, 60 ವರ್ಷದ ರಾಮಯ್ಯ ಮೃತಪಟ್ಟಿದ್ದಾರೆ. ಭೀಕರ ಅಪಘಾತದಲ್ಲಿ ವೃದ್ಧ ರಾಮಯ್ಯ ದೇಹವೇ ಛಿದ್ರ ಛಿದ್ರವಾಗಿದೆ.
1 / 8
ಇತ್ತೀಚೆಗಷ್ಟೆ ಬಾಲಕಿಯನ್ನು ಬಲಿ ಪಡೆದಿದ್ದ ಬಿಬಿಎಂಪಿ ಕಸದ ಲಾರಿಗೆ ಇಂದು ಮತ್ತೊಬ್ಬ ವೃದ್ಧ ಬಲಿಯಾಗಿದ್ದಾನೆ
2 / 8
ಬೆಂಗಳೂರಿನ ಬೇಗೂರು ಕ್ರಾಸ್ ಬಳಿ ರೇವಾ ಯೂನಿವರ್ಸಿಟಿ ಮುಂಭಾಗ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ 60 ವರ್ಷದ ರಾಮಯ್ಯ ಮೃತಪಟ್ಟಿದ್ದಾರೆ
3 / 8
ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ 60 ವರ್ಷದ ರಾಮಯ್ಯ ಎನ್ನುವವರಿಗೆ ಕಸದ ಲಾರಿ ಡಿಕ್ಕಿ ಹೊಡೆದಿದ್ದು ರಾಮಯ್ಯ ಸಾವನ್ನಪ್ಪಿದ್ದಾರೆ.
4 / 8
ಗಾಡಿಯಲ್ಲಿ ಬರ್ತಿದ್ದ ರಾಮಯ್ಯ ಅವರ ಮೇಲೆ ಕಸದ ಲಾರಿ ಹರಿದ ಪರಿಣಾಮ ಅವರ ದೇಹವೇ ಛಿದ್ರ ಛಿದ್ರವಾಗಿ ರಸ್ತೆಯಲ್ಲಿ ಬಿದ್ದಿದೆ
5 / 8
60 ವರ್ಷದ ರಾಮಯ್ಯ ಅವರು ಗಾಡಿಯಲ್ಲಿ ಸಂಬಂಧಿಕರ ನಿಶ್ಚಿತಾರ್ಥಕ್ಕೆ ಹೋಗಿ ಬರುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.
6 / 8
ಹೆಬ್ಬಾಳ ಬಾಲಕಿ ಅಕ್ಷಯಾ ಸಾವು ಮಾಸುವ ಮುನ್ನವೇ ಮತ್ತೊಂದು ಬಲಿ ಪಡೆದ ಬಿಬಿಎಂಪಿ ಕಸದ ಲಾರಿ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
7 / 8
ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ.
8 / 8
ಕಸದ ಲಾರಿಗಳು ಅತಿ ವೇಗವಾಗಿ ಚಲಿಸೋದೆ ಅಪಘಾತಗಳಿಗೆ ಕಾರಣ ಎಂದು ಹೇಳಲಾಗ್ತಿದೆ. ಈ ಕಸದ ಲಾರಿಗಳ ವೇಗಕ್ಕೆ ಬ್ರೇಕ್ ಹಾಕುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ
First published: March 31, 2022, 17:50 IST