Bengaluru: ಬಿಬಿಎಂಪಿ ಕಸದ ಲಾರಿಗೆ ಬಾಲಕಿ ಬಲಿ, ಚಾಲಕನ ನಿರ್ಲಕ್ಷ್ಯದಿಂದ ಸರಣಿ ಅಪಘಾತ
ಬೆಂಗಳೂರಲ್ಲಿ ನಿತ್ಯ ಅಪಘಾತಗಳು (Accident) ಸಂಭವಿಸುತ್ತಲೇ ಇರುತ್ತೆ. ಇಂದು ಬಿಬಿಎಂಪಿ (BBMP) ಕಸದ ಲಾರಿಗೆ (lorry) ಬಾಲಕಿ ಬಲಿಯಾಗಿದ್ದಾಳೆ. ಅಪಘಾತದಲ್ಲಿ ನಾಲ್ವರಿಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ (Hospital) ದಾಖಲಿಸಲಾಗಿದೆ. ಬಿಬಿಎಂಪಿ ಕಸದ ಲಾರಿ ವೇಗವಾಗಿ ಬಂದ ಪರಿಣಾಮ ಸರಣಿ ಅಪಘಾತ ಸಂಭವಿಸಿದೆ.
ಬೆಂಗಳೂರಲ್ಲಿ ನಿತ್ಯ ಅಪಘಾತಗಳು ಸಂಭವಿಸುತ್ತಲೇ ಇರುತ್ತೆ. ಇಂದು ಬಿಬಿಎಂಪಿ ಕಸದ ಲಾರಿಗೆ ಬಾಲಕಿ ಬಲಿಯಾಗಿದ್ದಾಳೆ. ಹೆಬ್ಬಾಳದ ಪೊಲೀಸ್ ಠಾಣೆಯ ಬಳಿಯೇ ಸರಣಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ 12 ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ
2/ 8
ಅಪಘಾತದಲ್ಲಿ ನಾಲ್ವರಿಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಿಬಿಎಂಪಿ ಕಸದ ಲಾರಿ ವೇಗವಾಗಿ ಬಂದ ಪರಿಣಾಮ ಸರಣಿ ಅಪಘಾತ ಸಂಭವಿಸಿದೆ.
3/ 8
ಬಿಬಿಎಂಪಿ ಲಾರಿ ಸಿಟಿಯಿಂದ ಹೆಬ್ಬಾಳ ಮಾರ್ಗವಾಗಿ ಏರ್ ಪೋರ್ಟ್ ಕಡೆ ಹೊರಡುತ್ತಿತ್ತು. ಮತ್ತೊಂದೆಡೆ ಮಹಿಳೆ ತನ್ನ ಇಬ್ಬರು ಮಕ್ಕಳ ಜೊತೆ ರಸ್ತೆ ದಾಟುತ್ತಿದ್ರು. ಈ ವೇಳೆ ಬೈಕ್ ಸವಾರ ಗಾಡಿಯನ್ನು ಸ್ಲೋ ಮಾಡಿದ್ದಾನೆ. ಹಿಂದೆ ಬರ್ತಿದ್ದ ಕಾರು ಸಹ ನಿಧಾನವಾಗಿ ಬಂದು ನಿಂತಿದೆ.
4/ 8
ಕಾರಿನ ಹಿಂದೆ ವೇಗವಾಗಿ ಬರ್ತಿದ್ದ ಬಿಬಿಎಂಪಿ ಲಾರಿಯನ್ನ ಚಾಲಕ ನಿಯಂತ್ರಿಸಲಾಗಿಲ್ಲ. ಲಾರಿ ಕಾರಿಗೆ ಡಿಕ್ಕಿ ಹೊಡೆದಿದೆ, ಕಾರು ಬೈಕ್ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಅಪಘಾತದಲ್ಲಿ ಬಾಲಕಿ ಸಾವನ್ನಪ್ಪಿದ್ದಾಳೆ
5/ 8
ವಿದ್ಯಾರ್ಥಿನಿ. 9ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿ ಅಕ್ಷಯ ಬಿ ಮೃತ ವಿದ್ಯಾರ್ಥಿನಿ. ಸೇಂಟ್ ಮೇರಿಸ್ ಶಾಲೆಯಲ್ಲಿ ಓದುತ್ತಿದ್ದಳು
6/ 8
ಅಂಡರ್ ಗ್ರೌಂಡ್ ನಲ್ಲಿ ನೀರು ತುಂಬಿದ ಹಿನ್ನಲೆ ಡಿವೈಡರ್ ಕ್ರಾಸ್ ಮಾಡಲು ನಡೆದು ಹೋಗುತ್ತಿದ್ದ ಶಾಲಾ ಬಾಲಕಿಯರು, ಈ ವೇಳೆ ವೇಗವಾಗಿ ಬಂದ ಕಸದ ಲಾರಿ ಡಿಕ್ಕಿ ಹೊಡೆದಿದೆ.
7/ 8
ನಿನ್ನೆ ರಾತ್ರಿ ಮಳೆ ಬಂದ ಹಿನ್ನಲೆ ಅಂಡರ್ ಪಾಸ್ ನಲ್ಲಿ ಮಳೆ ನೀರು ತುಂಬಿತ್ತು. ಬಿಬಿಎಂಪಿಗೆ ಹಾಗೂ ಟ್ರಾಫಿಕ್ ಪೊಲೀಸರಿಗೆ ತಿಳಿಸಿದ್ರೂ ಅವರು ನೀರು ತೆಗೆಸುವ ಕೆಲಸ ಮಾಡಿಲ್ಲ
8/ 8
ಕಸದ ಲಾರಿ ಚಾಲಕನ ವೇಗ ಮತ್ತು ಅಜಾಗರೂಕ ಚಾಲನೆಯಿಂದ ಅಪಘಾತವಾಗಿದ್ದು, ಹೆಬ್ಬಾಳದ ಬಳಿ ಪೊಲೀಸ್ ಠಾಣೆ ಮುಂದೆಯೇ ಸರಣಿ ಅಪಘಾತ ಸಂಭವಿಸಿದೆ.