Bengaluru ಅಪಘಾತ, ಸಾವುಗಳ ಅಂಕಿ ಅಂಶ ಬಿಡುಗಡೆ: ಈ ವರ್ಗದ ಜನರೇ ಹೆಚ್ಚು ಮೃತರಾಗಿದ್ದು!
ಸಿಲಿಕಾನ್ ಸಿಟಿ ಬೆಂಗಳೂರಿನ ಅಪಘಾತ ಮತ್ತು ಸಾವುಗಳ ಅಂಕಿ ಅಂಶ ಬಿಡುಗಡೆ ಮಾಡಲಾಗಿದೆ, ಅಪಘಾತಗಳಲ್ಲಿ ಯುವಕ/ಯುವತಿಯರು ಮತ್ತು ವಿದ್ಯಾವಂತರೇ ಹೆಚ್ಚು ಸಾವನ್ನಪ್ಪುತ್ತಿರುವ ಮಾಹಿತಿ ಬೆಳಕಿಗೆ ಬಂದಿದೆ. ನಗರ ಸಂಚಾರಿ ಪೊಲೀಸರು ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದ್ದಾರೆ.
2021ರಲ್ಲಿ 618 ಅಪಘಾತಗಳು ಸಂಭವಿಸಿದ್ದು, 651 ಜನರು ಸಾವನ್ನಪ್ಪಿದ್ದಾರೆ. ಅದೇ 2020ರಲ್ಲಿ 632 ಅಪಘಾತಗಳು ಸಂಭವಿಸಿದ್ರೆ 657 ಮಂದಿ ಮೃತರಾಗಿದ್ದಾರೆ. 2020ಕ್ಕಿಂತ 2021ರಲ್ಲಿ ಸಾವಿನ ಸಂಖ್ಯೆ ಇಳಿಕೆಯಾಗಿದೆ. ಯುವಕರೇ ಹೆಚ್ಚು ಅಪಘಾತಗಳಲ್ಲಿ ಸಾವನ್ನಪ್ಪುತ್ತಿದ್ದಾರೆ.
2/ 5
2021ರ ಅಂಕಿ ಅಂಶಗಳ ಪ್ರಕಾರ 651 ಮೃತರಲ್ಲಿ 336 ಮಂದಿ ಯುವಕರೇ ಆಗಿದ್ದಾರೆ. 21 ರಿಂದ 40 ವಯಸ್ಸಿನೊಳಗಿನ 336 ಜನ ಅಪಘಾತಕ್ಕೆ ಬಲಿಯಾಗಿದ್ದಾರೆ. 651 ಜನರಲ್ಲಿ ಕೇವಲ 53 ಜನ ಮಾತ್ರ ಅನಕ್ಷರಸ್ಥರಾಗಿದ್ದಾರೆ.
3/ 5
ವೀಕೆಂಡ್ ನಲ್ಲಿಯೇ ಹೆಚ್ಚು ಅಪಘಾತಗಳು ಸಂಭವಿಸುತ್ತಿದ್ದು, ಮೋಜು ಮಸ್ತಿ ಗುಂಗು ಯುವಕರ ಸಾವಿಗೆ ಕಾರಣಗಳಾಗುತ್ತಿದೆ. ಒಟ್ಟು 208 ಜನರು ವೀಕೆಂಡ್ ನಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.
4/ 5
ಇನ್ನು ಕೇವಲ ತೋರಿಕೆಗಾಗಿ ಹೆಲ್ಮೆಟ್ ಧರಿಸಿದ್ದ 291 ಜನರು ಸಾವನ್ನಪ್ಪಿದ್ದಾರೆ. ನೆಪ ಮಾತ್ರಕ್ಕೆ ಹೆಲ್ಮೆಟ್ ಧಾರಣೆ, ಹಾಫ್ ಹೆಲ್ಮೆಟ್ ಧಾರಣೆ ಸಾವಿಗೆ ಕಾರಣ ಎಂದು ವರದಿಯಲ್ಲಿ ಹೇಳಲಾಗಿದೆ.
5/ 5
2021ರಲ್ಲಿ 27 ಜನ ಬಿಎಂಟಿಸಿ ಬಸ್ ಗಳಿಗೆ ಬಲಿಯಾಗಿದ್ದಾರೆ. ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚು ಜನರನ್ನ ಬಿಎಂಟಿಸಿ ಬಲಿ ಪಡೆದುಕೊಂಡಿದೆ. ಬಿಎಂಟಿಸಿ, ಕೆ ಎಸ್ ಆರ್ ಟಿಸಿ ಹಾಗೂ ಖಾಸಗಿ ಬಸ್ ಗಳಿಗೆ ಒಟ್ಟು 46 ಜನರು ಬಲಿಯಾಗಿದ್ದಾರೆ.